28
June, 2026

A News 365Times Venture

28
Sunday
June, 2026

A News 365Times Venture

ಯಾವ್ ಟ್ರಬಲ್ ಶೂಟರ್ ರೀ..? ಸಿಎಂ ಡಿಕೆಶಿಗೆ ಮಾಜಿ ಸಚಿವ ಕೆ.ಎನ್ ರಾಜಣ್ಣ ಟಾಂಗ್

Date:

ತುಮಕೂರು,ಜೂನ್,5,2026 (www.justkannada.in):  ಖಾತೆ ಹಂಚಿಕೆ ಬಳಿಕ ಅಸಮಾಧಾನಗೊಂಡು ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ ನೀಡಿದ ವಿಚಾರ  ಕುರಿತು ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಪ್ರತಿಕ್ರಿಯಿಸಿದ್ದು, ಇದೇ ವೇಳೆ  ಸಿಎಂ ಡಿಕೆ ಶಿವಕುಮಾರ್ ಗೆ ಟಾಂಗ್ ಕೊಟ್ಟಿದ್ದಾರೆ.

ಯಾವ್ ಟ್ರಬಲ್ ಶೂಟರ್ ರೀ… ನೀವೇ ಟ್ರಬಲ್ ಶೂಟರ್ ಮಾಡಿರೋದು. ಹಾಗಿದ್ದ ಮೇಲೆ ಅಸ್ಸಾಂಗೆ ಹೋಗಿ ಯಾಕೆ ಟ್ರಬಲ್ ಶೂಟರ್ ಆಗಲಿಲ್ಲ ಎಂದು ಮಾಧ್ಯಮಗಳ ಜೊತೆ ಮಾತನಾಡುವ ವೇಳೆ ಸಿಎಂ ಡಿ.ಕೆ.ಶಿವಕುಮಾರ್ ಗೆ ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು ಕೌಂಟರ್ ನೀಡಿದರು.

ರಾಮಲಿಂಗಾ ರೆಡ್ಡಿ  ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಿದ ಕೆ.ಎನ್ ರಾಜಣ್ಣ,  ಹೌದಾ.. ಹೊಸ ಸುದ್ದಿ ಹೇಳ್ತಿರಾ ಅಂದಕೊಂಡರೆ ಹಳೆ ಸುದ್ದಿ ಹೇಳ್ತಿರಲ್ಲ. ಇದು ಯಾವುದೇ ಪತನ ಅಲ್ಲ. ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದಿದ್ದಾರೆ. ಹಾಗೆಯೇ ರಾಮಲಿಂಗಾ ರೆಡ್ಡಿಯವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಹಾಗೂ ಶಾಸಕರಾಗಿ ತಮ್ಮ ಜವಾಬ್ದಾರಿಯನ್ನು ಮುಂದುವರಿಸುವುದಾಗಿ ಹೇಳಿದ್ದಾರೆ ಎಂದು ಕೆ ಎನ್‌ ರಾಜಣ್ಣ  ತಿಳಿಸಿದರು.

ಈಶ್ವರ ಖಂಡ್ರೆ ಅವರಿಗೆ ಅದೇ ಅರಣ್ಯ ಖಾತೆ ಯಾಕೆ ಕೊಡಲಿಲ್ಲ? ಪರಮೇಶ್ವರ್ ಅವರಿಗೆ ಗೃಹ ಖಾತೆ ನೀಡಬೇಕಿತ್ತು. ಯಾಕೆ ಕಂದಾಯ ಖಾತೆ ಕೊಟ್ಟಿದ್ದಾರೆ? ಎಂದು ಪ್ರಶ್ನಿಸಿದರು.

Key words: trouble shooter, CM DK Shivakumar, Former Minister, K.N. Rajanna

The post ಯಾವ್ ಟ್ರಬಲ್ ಶೂಟರ್ ರೀ..? ಸಿಎಂ ಡಿಕೆಶಿಗೆ ಮಾಜಿ ಸಚಿವ ಕೆ.ಎನ್ ರಾಜಣ್ಣ ಟಾಂಗ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

അയോധ്യ ക്ഷേത്രക്കൊള്ള: ഇപ്പോള്‍ മോദിക്കും യോഗിക്കും ഒച്ചയില്ലേ, എന്തേ മൗനം? രൂക്ഷവിമര്‍ശനവുമായി പ്രിയങ്ക് ഖാര്‍ഗെ

ബെംഗളൂരു: അയോധ്യയിലെ രാമക്ഷേത്ര നിര്‍മാണത്തിനായി ഭക്തര്‍ നല്‍കിയ സംഭാവനകളില്‍ വന്‍ സാമ്പത്തിക...

Shoaib Akhtar: ఉగ్రవాదులతో క్రికెటర్‌కి సంబంధం ఏంటి? అదీ 26/11 ముంబై, పహల్గామ్ దాడుల సూత్రధారుతో..

Shoaib Akhtar: పాకిస్థాన్‌లో ఉగ్రవాదం రోజు రోజుకూ మితిమీరిపోతోంది. తాజాగా మాజీ...

ಯಾವುದೇ ಕಾರಣಕ್ಕೂ ಒಂದು ಇಂಚು ಭೂಮಿ ಕೊಡಬೇಡಿ- ರೈತರಿಗೆ HDK ಕಿವಿಮಾತು

ರಾಮನಗರ,ಜೂನ್,27,2026 (www.justkannada.in): ಬಿಡದಿ ಟೌನ್ ಶಿಪ್ ನಿರ್ಮಾಣ ವಿಚಾರ ಸಂಬಂಧ...