12
September, 2026

A News 365Times Venture

12
Saturday
September, 2026

A News 365Times Venture

ಸಿಎಂ ಪದಗ್ರಹಣ ಕಾರ್ಯಕ್ರಮಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್, ವಾಹನ ಸಂಚಾರ ಬದಲಾವಣೆ

Date:

ಬೆಂಗಳೂರು,ಜೂನ್,2,2026 (www.justkannada.in): ನಾಳೆ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕಾರ ಮಾಡಲಿದ್ದು ಕಾರ್ಯಕ್ರಮಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸಿಎಂ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆ. ಕಾರ್ಯಕ್ರಮಕ್ಕೆ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಭದ್ರತೆ ಕುರಿತು ಪೊಲೀಸ್  ಅಧಿಕಾರಿಗಳ ಜೊತೆ ಸಭೆ ನಡಸಲಾಗಿದೆ. ಸಂಚಾರ ಕಾನೂನು ಸುವ್ಯವಸ್ಥೆ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ಲೋಕಭವನಕ್ಕೆ ಪಾಸ್ ಇದ್ದವರಿಗೆ ಮಾತ್ರ ಅವಕಾಶ ನೀಡಲಾಗಿದೆ.  ವಿವಿಧ ರೀತಿಯಲ್ಲಿ ಕಾರ್ಯಕ್ರಮಕ್ಕೆ ಪಾಸ್ ಹಂಚಿಕೆ ಮಾಡಲಾಗಿದೆ. ಪಾಸ್ ಹಂಚಿಕೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದೇವೆ ಎಂದರು.

ಸಂಚಾರ ಮಾರ್ಗದಲ್ಲಿ ಕೆಲವೊಂದು ಬದಲಾವಣೆ ಮಾಡಿದ್ದೇವೆ. ರೋಡ್ ಶೋ ನಡೆಸುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ.  ಹೊರ ರಾಜ್ಯದಿಂದಲೂ ವಿಐಪಿಗಳು ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ.  ಗಣ್ಯರ ಭದ್ರತೆಗೂ ಕ್ರಮ ವಹಿಸಲಾಗಿದೆ ಎಂದು ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.

ಹಾಗೆಯೇ ಲೋಕಭವನ ಸುತ್ತ ಮುತ್ತ ವಾಹನ ಸಂಚಾರ ಬದಲಾವಣೆ ಮಾಡಲಾಗಿದ್ದು ನಾಳೆ ಕೇಂದ್ರ ಭಾಗದಲ್ಲಿ ಸಂಚಾರ ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು.

Key words: Police, tight, security , CM, swearing, ceremony ,Police Commissioner

The post ಸಿಎಂ ಪದಗ್ರಹಣ ಕಾರ್ಯಕ್ರಮಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್, ವಾಹನ ಸಂಚಾರ ಬದಲಾವಣೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಹೊಸಕಡಜೆಟ್ಟಿ ಮಹದೇವಮ್ಮ ಸಾವು ಪ್ರಕರಣ: ಮೃತಳ ಮಗಳಿಗೆ ₹4.12 ಲಕ್ಷ ಪರಿಹಾರ

ಮೈಸೂರು,ಸೆಪ್ಟಂಬರ್,11,2026 (www.justkannada.in):  ನಂಜನಗೂಡು ತಾಲೂಕಿನ ಹೊಸಕಡಜೆಟ್ಟಿ ಗ್ರಾಮದ ಮಹದೇವಮ್ಮ ಅವರ...

മോദിയുടെ സ്വയം പുകഴ്ത്തല്‍ വേണ്ട; റഷ്യയുമായുള്ള ബന്ധത്തിന് നീണ്ട ചരിത്രമുണ്ട്: കോണ്‍ഗ്രസ്

ന്യൂദല്‍ഹി: പ്രധാനമന്ത്രി നരേന്ദ്ര മോദിയുടെ സ്വയം പ്രചാരണം എന്തുതന്നെയായാലും ഇന്ത്യയും റഷ്യയും...

“சுயநலத்தை மறுத்து நாட்டின் நலனைப் பார்த்தால் தடை?” – BRICS-ல் ட்ரம்ப் மீது புதின் மறைமுகத் தாக்கு!

டெல்லியில் நடக்கும் பிரிக்ஸ் மாநாட்டிற்காக இந்தியாவிற்கு வந்திருக்கிறார் ரஷ்ய அதிபர்...

Raghav Chadha: ఆప్ నా “ఎక్స్-గర్ల్‌ఫ్రెండ్”.. రాఘవ్ చద్దా ఫైర్..

Raghav Chadha: రాజ్యసభ ఎంపీ రాఘవ్ చద్దా ఆమ్ ఆద్మీ పార్టీ(ఆప్)పై...