31
May, 2026

A News 365Times Venture

31
Sunday
May, 2026

A News 365Times Venture

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಕ್ಷಣಗಣನೆ: ಹೈಕಮಾಂಡ್ ನಾಯಕರು, ಶಾಸಕರು ಆಗಮನ

Date:

ಬೆಂಗಳೂರು,ಮೇ,30,2026 (www.justkannada.in):  ರಾಜ್ಯದಲ್ಲಿ ದಿಢೀರ್ ರಾಜಕೀಯ ಬೆಳವಣಿಗೆಯಾಗಿ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದು ಇದೀಗ ನೂತನ ಸಿಎಂ ಆಯ್ಕೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.

ಇಂದು ಸಂಜೆ 4 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ನಿಗದಿಯಾಗಿತ್ತು. ಹೀಗಾಗಿ ಕೆಲವೇ ಕ್ಷಣಗಳಲ್ಲಿ ಸಭೆ ಆರಂಭವಾಗಲಿದ್ದು ಸಭೆಗೆ  ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಸಹ ಆಗಮಿಸಿದ್ದಾರೆ. ಖಾಸಗಿ ಹೋಟೆಲ್‌ನಿಂದ ನೇರವಾಗಿ ಸಿಎಲ್​​​ಪಿ ಸಭೆ ನಡೆಯುವ ವಿಧಾನಸೌಧಕ್ಕೆ ಆಗಮಿಸಿದ್ದಾರೆ.

ಮುಂದಿನ ಸಿಎಂ ಎಂದೇ ಬಿಂಬಿತವಾಗಿರುವ ಡಿಕೆ ಶಿವಕುಮಾರ್ ಅವರು ಸಿಎಲ್ ಪಿ ಸಭೆಗೆ  ಗಮಿಸಿದ್ದಾರೆ. ಖಾಸಗಿ ಹೋಟೆಲ್​​ ನಲ್ಲಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಸಿ ವೇಣುಗೋಪಾಲ್ ಜೊತೆ ಸುದೀರ್ಘ ಚರ್ಚೆ ನಡೆಸಿದ ಬಳಿಕ ನೇರವಾಗಿ ಖಾಸಗಿ ಕಾರಿನಲ್ಲಿ ವಿಧಾನಸೌಧಕ್ಕೆ ಆಗಮಿಸಿದ್ದಾರೆ.

ವಿಧಾನಸೌಧದಲ್ಲಿ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಕ್ಷಣಗಣನೆ ಆರಂಭವಾಗಿದ್ದು, ಶಾಸಕರು ಸಹ ಆಗಮಿಸುತ್ತಿದ್ದಾರೆ. ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್, ಶಾಸಕರಾದ ಟಿ.ಬಿ.ಜಯಚಂದ್ರ, ರಾಮಲಿಂಗಾರೆಡ್ಡಿ, ಸಿ.ಪಿ.ಯೋಗೇಶ್ವರ್​​, ಆನೇಕಲ್​​ ಶಿವಣ್ಣ, ಪ್ರದೀಪ್ ಈಶ್ವರ್​​, ಅಶೋಕ್ ಪಟ್ಟಣ್​​ , ಪುಟ್ಟರಂಗಶೆಟ್ಟಿ, ನಯನಾ ಮೋಟಮ್ಮ, ಲಕ್ಷ್ಮೀ ಹೆಬ್ಬಾಳ್ಕರ್, ಇಕ್ಬಾಲ್ ಹುಸೇನ್ ಸೇರಿ ಹಲವು ಶಾಸಕರು ಆಗಮಿಸಿದ್ದಾರೆ.

Key words: Countdown, CLP meeting,  High command, leaders,  MLAs, arrive

The post ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಕ್ಷಣಗಣನೆ: ಹೈಕಮಾಂಡ್ ನಾಯಕರು, ಶಾಸಕರು ಆಗಮನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

നീറ്റിനും സി.ബി.എസ്.ഇക്കും പിന്നാലെ ബിരുദ പ്രവേശന പരീക്ഷയും താളം തെറ്റി, നോക്കുകുത്തിയായി എന്‍.ടി.എ

ന്യൂദല്‍ഹി: നീറ്റ് യു.ജി പരീക്ഷാ ക്രമക്കേടുകള്‍ക്ക് പിന്നാലെ, രാജ്യത്തെ കേന്ദ്ര സര്‍വകലാശാലകളിലേക്കുള്ള...

Balka Suman: బాల్క సుమన్‌కు బిగ్ షాక్.. 14 రోజుల రిమాండ్ విధించిన నాంపల్లి మెజిస్ట్రేట్

Balka Suman: బీఆర్ఎస్ మాజీ ఎమ్మెల్యే బాల్క సుమన్‌కు 14 రోజుల...

യോഗ്യതാ മത്സരത്തില്‍ തോറ്റാലും ഈ വ്യവസ്ഥിതിയോടുള്ള പോരാട്ടത്തില്‍ വിജയിച്ചു; ഇപ്പോള്‍ അഭിമാനമെന്ന് വിനേഷ് ഫോഗട്ട്

ന്യൂദല്‍ഹി: ഏഷ്യന്‍ ഗെയിംസ് യോഗ്യതാ മത്സരത്തില്‍ പരാജയപ്പെട്ടാലും ഈ വ്യവസ്ഥിതിയോടുള്ള പോരാട്ടത്തില്‍...