ಬೆಂಗಳೂರು,ಮೇ,21,2026 (www.justkannada.in): ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದ ವಿಚಾರ ಸಂಬಂಧ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ನಾವು ಹಾಕಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ಸರ್ಕಾರವೇ ಪಿಐಎಲ್ ಹಾಕಿಸಿದೆ ಎಮದು ಮಾಧ್ಯಮಗಳಲ್ಲಿ ವರದಿಯಾಗಿದೆ. ನ್ಯಾಯಾಲಯದಲ್ಲಿ ಯಾರು ಬೇಕಾದರೂ ಪಿಐಎಲ್ ಹಾಕಬಹುದು ನಾವು ಸಾವರ್ಜನಿಕ ಹಿತಾಸಕ್ತಿ ಅರ್ಜಿ ಹಾಕಿಲ್ಲ ಎಂದರು.
ಈಗ ಕೋರ್ಟ್ ಕಾರ್ಮಿಕ ಇಲಾಖೆಗೆ ಸೂಚನೆ ನೀಡಿದೆ ಕಾರ್ಮಿಕ ಇಲಾಖೆ ಜೊತೆ ನಮ್ಮ ಎಂಡಿ ಮಾತನಾಡಿ ನಿರ್ಧರಿಸುತ್ತಾರೆ. ನಮ್ಮ ಕೈಲಾದಷ್ಟು ಮಾಡಿಕೊಟ್ಟಿದ್ದೇನೆ. ಅವರಿಗೆ ಒಪ್ಪಿಗೆ ಆಗುತ್ತಿಲ್ಲ ಈಗಾಗಲೇ 26 ತಿಂಗಳ ಹರಿಯರ್ಸ್ ನೀಡುವುದಾಗಿ ಹೇಳಿದ್ದೇವೆ. 12.5 % ವೇತನ ಪರಿಷ್ಕರಣೆಗೆ ಮುಂದಾಗಿದ್ದೇವೆ. ಆದರೆ ಅದಕ್ಕೆ ಅವರು ಒಪ್ಪುತ್ತಿಲ್ಲ ಎಂದು ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.
Key words: Transport workers, strike, PIL, court – Minister, Ramalingareddy
The post ಸಾರಿಗೆ ನೌಕರರ ಮುಷ್ಕರಕ್ಕೆ ಬ್ರೇಕ್ ವಿಚಾರ: ಕೋರ್ಟ್ PIL ನಾವು ಹಾಕಿಲ್ಲ- ಸಚಿವ ರಾಮಲಿಂಗರೆಡ್ಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





