22
May, 2026

A News 365Times Venture

22
Friday
May, 2026

A News 365Times Venture

“ಅಂಬಾರಿ” ತೂಕಕ್ಕೆ ಸೆಡ್ಡು ಹೊಡೆಯುವಂತಿದೆ “ಚಿನ್ನತಂಬಿ” ಪ್ರಕರಣ.

Date:

ಮೈಸೂರು, ಮೇ, 21,2026 (www.justkannada.in): ಮೈಸೂರಿನಲ್ಲಿ ಸೌಂದರ ರಾಜ್ ಅಲಿಯಾಸ್ ‘ಚಿನ್ನತಂಬಿ’ ಎಂಬಾತನ ವಿರುದ್ಧ ಚಿನ್ನಕ್ಕೆ ಹೆಚ್ಚಿನ ಬೆಲೆ ಕೊಡುವುದಾಗಿ ಗಿರಿವಿ ಇಟ್ಟುಕೊಂಡು ವಂಚನೆ ಮಾಡಿದ ಆರೋಪ ಕೇಳಿ ಬಂದಿದ್ದು, ಸಾಕಷ್ಟು ಜನರಿಗೆ ವಂಚಿಸಿರುವ ಪ್ರಕರಣ ಈಗಾಗಲೇ ಬೆಳಕಿಗೆ ಬಂದಿದೆ.  ಮೈಸೂರು ನಗರ ಪೊಲೀಸರು ಪತ್ರಿಕಾ ಪ್ರಕಟಣೆ ಹೊರಡಿಸಿ  ಈ ವಂಚಕನ ಬಳಿ ಚಿನ್ನ ಅಡವಿಟ್ಟು ಮೋಸ ಹೋಗಿರುವ ಸಾರ್ವಜನಿಕರು ದೂರು ನೀಡುವಂತೆ ಸೂಚಿಸಿದ್ದಾರೆ.

ಚಿನ್ನದ ಗಿರಿವಿ ಅಂಗಡಿ ಇಟ್ಟುಕೊಂಡು ಜನರಿಗೆ ಮೋಸ ಮಾಡುತ್ತಿದ್ದ ಸೌಂದರ್ ರಾಜ್ ಅಲಿಯಾಸ್​ ಚಿನ್ನತಂಬಿ ವಂಚನೆ ಬಯಲಾಗಿದ್ದು ಅಡವಿಟ್ಟಿದ್ದ ಸುಮಾರು 600 ಕೆ.ಜಿ ಚಿನ್ನ ಕರಗಿಸಿ ಜನರಿಗೆ ಮೋಸ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಹೌದು, ಈ ಆರೋಪ ಮಾಡಿರುವುದು ಬಿಜೆಪಿ ಶಾಸಕ ಶ್ರೀವತ್ಸ. ಈ ಬಗ್ಗೆ ಮಾತನಾಡಿರುವ ಅವರು, ಸುಮಾರು 600 ಕೆಜಿ ಚಿನ್ನ ಕರಗಿಸಿ ಜನರಿಗೆ ವಂಚನೆ ಮಾಡಲಾಗಿದೆ. ಮೈಸೂರು ಪೊಲೀಸರ ಮೇಲೆ ಜನರಿಗೆ ನಂಬಿಕೆ ಹೋಗಿದೆ, ನನಗೂ ನಂಬಿಕೆ ಇಲ್ಲ. ಪ್ರಕರಣ ಕುರಿತು ಕಳೆದ ವಾರವೇ ಡಿಐಜಿ ಹಾಗೂ ಐಜಿ ಅವರಿಗೆ ದೂರು  ನೀಡಿದ್ದೇನೆ ಎಂದಿದ್ದಾರೆ.

ಪ್ರಕರಣ ಸಂಬಂಧ ಈಗಾಗಲೇ 200ಕ್ಕೂ ಹೆಚ್ಚು ದೂರುಗಳು ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಯಾರೇ ಮೋಸ ಹೋಗಿದ್ದರೂ ಮುಂದೆ ಬಂದು ದೂರು ನೀಡಿ. ಎಲ್ಲರಿಗೂ ನ್ಯಾಯ ಸಿಗುತ್ತದೆ” ಎಂದು  ಶಾಸಕ ಶ್ರೀವತ್ಸ ತಿಳಿಸಿದ್ದಾರೆ.

600 ಕೆಜಿ ಚಿನ್ನ ಅಂದರೆ ಕಡಿಮೆ  ಅಲ್ಲ. ಹಣದ ವ್ಯವಹಾರವೂ ಬಹಳ ಪ್ರಮಾಣದಲ್ಲಿ ನಡೆದಿದೆ. ಇದರ ಹಿಂದೆ ದೊಡ್ಡ ಜಾಲವೇ ಇದೆ ಅನ್ನಿಸುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ ಶಾಸಕ ಶ್ರೀವತ್ಸ ಪ್ರಕರಣದ ಕುರಿತು  ಜಾರಿ ನಿರ್ದೇಶನಾಲಯ(ಇಡಿ)ಗೂ ಪತ್ರ ಬರೆಯಲಾಗುತ್ತದೆ ಎಂದರು.

ಈ ಮೂಲಕ ”ಚಿನ್ನತಂಬಿ” ಪ್ರಕರಣ “ಅಂಬಾರಿ” ತೂಕಕ್ಕೆ ಸೆಡ್ಡು ಹೊಡೆಯುವಂತಿದ್ದು ಮೋಸ ಹೋದ ಜನರಿಗೆ ನ್ಯಾಯ ಸಿಗುತ್ತಾ ಕಾದು ನೋಡಬೇಕಿದೆ.

Key words: Mysore, Chinnathambi, Gold, Fraud case, MLA, Srivatsa

The post “ಅಂಬಾರಿ” ತೂಕಕ್ಕೆ ಸೆಡ್ಡು ಹೊಡೆಯುವಂತಿದೆ “ಚಿನ್ನತಂಬಿ” ಪ್ರಕರಣ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഞങ്ങളുടെ സിസ്റ്റത്തിന് വീഴ്ചയില്ല; നീറ്റ് ചോദ്യപേപ്പര്‍ ചോര്‍ച്ചയില്‍ പാര്‍ലമെന്ററി സമിതിക്ക് മുമ്പില്‍ എന്‍.ടി.എ

  ന്യൂദല്‍ഹി: നീറ്റ്-യു.ജി ചോദ്യപേപ്പര്‍ ചോര്‍ച്ചയുമായി ബന്ധപ്പെട്ട് പാര്‍ലമെന്ററി സമിതിക്ക് മുമ്പില്‍...

தவெக அமைச்சரவையில் விசிக; அமைச்சராகும் வன்னியரசு!

முதல்வர் விஜய் தலைமையிலான தவெக அரசு பெரும்பான்மை பெறாத சூழலில் காங்கிரஸ்,...

Maoists Surrender : జార్ఖండ్‌లో మావోయిస్టులకు భారీ దెబ్బ.. ఒకేసారి 27 మంది లొంగుబాటు..!

Maoists Surrender : జార్ఖండ్ రాష్ట్రంలో నక్సలైట్ల నెట్‌వర్క్‌కు గట్టి ఎదురుదెబ్బ...

‘ಕಾಕ್ರೋಚ್’ X ಖಾತೆಗೆ ಭಾರತದಲ್ಲಿ ನಿರ್ಬಂಧ.

ನವದೆಹಲಿ,ಮೇ,21,2026 (www.justkannada.in): ಸಾಮಾಜಿಕ ಜಾಲತಾಣ X (ಹಳೆಯ ಟ್ವಿಟ್ಟರ್) ನಲ್ಲಿ...