ಮೈಸೂರು,ಮೇ,20,2026 (www.justkannada.in): ಮೈಸೂರು ತಾಲೂಕಿನ ವರಕೋಡು ಸಮೀಪ ನಿರ್ಮಾಣಗೊಂಡಿದ್ದ ಲೇಔಟ್ ನ ಒಳಚರಂಡಿ (ಡೈನೇಜ್) ಯೊಳಗೆ ಚಿರತೆಯೊಂದು ತನ್ನ ನಾಲ್ಕು ಮರಿಗಳೊಂದಿಗೆ ಕಾಣಿಸಿಕೊಂಡ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು. ಕಡೆಗೆ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆ ಹಿಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹೊಸ ಲೇಔಟ್ ನಲ್ಲಿ ಇನ್ನೂ ಮನೆಗಳು ನಿರ್ಮಾಣವಾಗದ ಹಿನ್ನೆಲೆ, ಚಿರತೆ ಡೈನೇಜ್ ನೊಳಗೆ ಆಶ್ರಯ ಪಡೆದಿತ್ತು ಎನ್ನಲಾಗಿದೆ. ರಾತ್ರಿ ವೇಳೆ ಚಿರತೆ ಕಾಣಿಸಿಕೊಂಡ ಬಳಿಕ ಭಯಭೀತರಾದ ಸುತ್ತಮುತ್ತಲಿನ ನಿವಾಸಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ತಕ್ಷಣ ಕಾರ್ಯಾಚರಣೆಗೆ ಇಳಿದ ಅರಣ್ಯ ಇಲಾಖೆ ಸಿಬ್ಬಂದಿ, ಸುಮಾರು ಒಂದು ಕಿಲೋಮೀಟರ್ ವರೆಗೆ ಚಿರತೆಯನ್ನು ಮೂವ್ ಮಾಡಿಸಿ, ಡೈನೇಜ್ ಕೊನೆಯ ಭಾಗದಲ್ಲಿ ಬೋನ್ ಅಳವಡಿಸಿದರು. ಬಳಿಕ ಚಿರತೆಯನ್ನು ಸುರಕ್ಷಿತವಾಗಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. ಚಿರತೆಯ ನಾಲ್ಕು ಮರಿಗಳನ್ನೂ ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.
Key words: Leopard, four cubs, Drainage, captured
The post ಡೈನೇಜ್ ನಲ್ಲಿ ನಾಲ್ಕು ಮರಿಗಳೊಂದಿಗೆ ಕಾಣಿಸಿಕೊಂಡ ಚಿರತೆ ಸೆರೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





