13
May, 2026

A News 365Times Venture

13
Wednesday
May, 2026

A News 365Times Venture

ಮೀಸಲಾತಿ ಹೆಚ್ಚಳ ಶೆಡ್ಯೂಲ್ 9ಗೆ ಸೇರಿಸಲು ಒತ್ತಡ: ಸರ್ವಪಕ್ಷ ನಿಯೋಗಕ್ಕೆ  ಸಿಎಂ ಸಿದ್ದರಾಮಯ್ಯ ಸಹಮತ

Date:

ಬೆಂಗಳೂರು,ಮೇ,12,2026 (www.justkannada.in):   ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ವಿಚಾರಕ್ಕೆ ಸಂಬಂಧಿಸಿದಂತೆ  ಶೆಡ್ಯೂಲ್ 9ಗೆ ಸೇರಿಸುವಂತೆ ಒತ್ತಡ ಹೇರಳು ಪ್ರಧಾನಿ ಬಳಿಕೆ ಸರ್ವಪಕ್ಷ ನಿಯೋಗ ಕರೆದೊಯ್ಯಲು ಸಿಎಂ ಸಿದ್ದರಾಮಯ್ಯ ಸಹಮತ ವ್ಯಕ್ತಪಡಿಸಿದರು.

ಕರ್ನಾಟಕ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆಯ ಅಧ್ಯಕ್ಷ ವಿ.ಎಸ್. ಉಗ್ರಪ್ಪ ಅವರ ನೇತೃತ್ವದ ನಿಯೋಗದ ಜೊತೆಗೆ ಸಭೆ ನಡೆಸಿದ  ಸಿಎಂ ಸಿದ್ದರಾಮಯ್ಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಶೇ. 56 ಮೀಸಲಾತಿ ಹೆಚ್ಚಳದ ವಿಚಾರಕ್ಕೆ ಈಗಾಗಲೇ ಕೇಂದ್ರಕ್ಕೆ ಪ್ರಸ್ತಾವನೆ ನೀಡಲಾಗಿದೆ ಎಂದು ಮನವರಿಕೆ ಮಾಡಿಕೊಟ್ಟರು.

ಇದೇ ವೇಳೆ ಮಾತನಾಡಿದ ವಿ.ಎಸ್ ಉಗ್ರಪ್ಪ   ಪರಿಶಿಷ್ಟ ಜಾತಿಗೆ ಶೇ. 17% ಪರಿಶಿಷ್ಟ ಪಂಗಡಕ್ಕೆ ಶೇ.7% ಮೀಸಲಾತಿ ಹೆಚ್ಚಳ ಮಾಡಲಾಗಿದೆ‌. ಆದರೆ ಇದನ್ನು ಶೆಡ್ಯೂಲ್ 9 ಗೆ ಸೇರಿಸಿಲ್ಲ. ಇದರಿಂದ ಎಸ್ಸಿ ಎಸ್ಟಿ ಸಮಯದಾಯಗಳಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ ತಕ್ಷಣ ಸರ್ವಪಕ್ಷ ನಿಯೋಗವನ್ನು  ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಬಂಧಿಸಿದ ಸಚಿವರ ಬಳಿ ಕರೆದೊಯ್ದು ಒತ್ತಡ ಹೇರಬೇಕು. ಹೈಕೋರ್ಟ್ ನಲ್ಲಿ ತಡೆಯಾಜ್ಞೆತೆರವುಗೊಳಿಸಲು ಸಮರ್ಥ ವಕೀಲರ ನೇಮಕ ಮಾಡಬೇಕು. ಒಂದು ವೇಳೆ ತಡೆಯಾಜ್ಞೆ ತೆರವಾಗದಿದ್ದರೆ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಹಾಕಿ ಈ ವಿಚಾರವಾಗಿ ತಳ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು. ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವವರಿಗೆ ಹಾಗೂ ನೀಡುವವರಿಗೆ ಶಿಕ್ಷೆಯಾಗಬೇಕು ಎಂದು ಉಗ್ರಪ್ಪ ಮನವಿ ಮಾಡಿದರು.

ವಿಎಸ್ ಉಗ್ರಪ್ಪ ಮನವಿಗೆ ಸ್ಪಂದಿಸಿದ  ಸಿಎಂ ಸಿದ್ದರಾಮಯ್ಯ ಎಸ್ಸಿ, ಎಸ್ಟಿ, ಒಬಿಸಿ ಮೀಸಲಾತಿಯ ಗೊಂದಲ ಬಗೆಹರಿಸಲು ಜನಪ್ರತಿನಿಧಿಗಳ ಸಭೆ ಕರೆದು ತಕ್ಷಣ ಪ್ರಧಾನಿ ಹಾಗೂ ಕೇಂದ್ರ ಪರಿಶಿಷ್ಟ ಪಂಗಡ ಇಲಾಖೆ ಸಚಿವರನ್ನು ಭೇಟಿ ಮಾಡಲಾಗುವುದು. ಮೀಸಲಾತಿ ಹೆಚ್ಚಳ ವಿಚಾರವನ್ನು ಶೆಡ್ಯೂಲ್ 9 ಗೆ ಸೇರಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಬಂಧಿಸಿದ ಸಚಿವರನ್ನು ಭೇಟಿ ಮಾಡಿ ಒತ್ತಡ ಹೇರೋಣ, ಕೇವಲ ಪತ್ರ ವ್ಯವಹಾರದಿಂದ ಈ ಸಮಸ್ಯೆ ಬಗೆಹರಿಯಲ್ಲ ಎಂದು ನಿಯೋಗಕ್ಕೆ ತಿಳಿಸಿದರು.

ನಿಯೋಗದಲ್ಲಿ ಸಂಜಯ್ ಕುಮಾರ್ ಸ್ವಾಮೀಜಿ, ರಾಮಲಿಂಗೇಶ್ವರ ಸ್ವಾಮೀಜಿ, ಈಶ್ವರಾನಂದ ಸ್ವಾಮೀಜಿ, ಪ್ರಕಾಶ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಸಮಾನ ಮನಸ್ಕರ ವೇದಿಕೆ ಖಜಾಂಚಿ ಈ ರಾಜಪ್ಪ ಮತ್ತಿತರರು ಉಪಸ್ಥಿತರಿದ್ದರು.

Key words: reservation, increase,Schedule 9,  CM Siddaramaiah, all-party delegation

The post ಮೀಸಲಾತಿ ಹೆಚ್ಚಳ ಶೆಡ್ಯೂಲ್ 9ಗೆ ಸೇರಿಸಲು ಒತ್ತಡ: ಸರ್ವಪಕ್ಷ ನಿಯೋಗಕ್ಕೆ  ಸಿಎಂ ಸಿದ್ದರಾಮಯ್ಯ ಸಹಮತ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

സി.ബി.ഐ ഡയറക്ടർ നിയമനം: കേന്ദ്രത്തിനെതിരെ രൂക്ഷവിമർശനവുമായി രാഹുൽ ഗാന്ധി; പ്രതിപക്ഷ നേതാവ് റബ്ബർ സ്റ്റാമ്പല്ലെന്ന് കത്ത്

ന്യൂദൽഹി: പുതിയ സി.ബി.ഐ ഡയറക്ടർ തെരഞ്ഞെടുപ്പ് രീതികളിൽ വിമർശനവുമായി ലോക്സഭാ പ്രതിപക്ഷ...

தமிழ்நாடு சட்டமன்றத்தில் இன்று 'நம்பிக்கை வாக்கெடுப்பு' – பெரும்பான்மையை நிரூபிப்பாரா விஜய்?|Live Updates

ஒரு வாக்கால் ஒரு வாக்கு மிஸ் ஆகிறதுமுன்னாள் திமுக அமைச்சர் பெரிய...

Deputy CM Pawan Kalyan: కోలుకున్న పవన్‌ కల్యాణ్‌.. నేడు ఏపీకి డిప్యూటీ సీఎం రాక

Deputy CM Pawan Kalyan: ఆంధ్రప్రదేశ్ డిప్యూటీ సీఎం, జనసేన అధినేత...

ബ്രാഹ്‌മണ പൂജാരിമാരുടെ ആധിപത്യത്തിനു കീഴടങ്ങാത്ത ‘ക്ഷേത്ര’ങ്ങളിലാണ് അദ്ദേഹം പോയത്; ജയരാജന്റെ കൊടുങ്ങല്ലൂര്‍ സന്ദര്‍ശനത്തില്‍ വിനില്‍ പോള്‍

കോഴിക്കോട്: ഗ്രന്ഥരചനയുടെ ഭാഗമായി കൊടുങ്ങല്ലൂര്‍ ക്ഷേത്രത്തിലെത്തിയ പി. ജയരാജനെതിരെയുള്ള വിമര്‍ശനങ്ങളില്‍ പ്രതികരണവുമായി...