ಮೈಸೂರು,ಮೇ,6,2026 (www.justkannada.in): ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ತಡೆದು ದುರ್ವಾಸನೆ ನಿವಾರಣೆಗೆ ಮೈಸೂರು ಮಹಾನಗರ ಪಾಲಿಕೆ ವಿನೂತನ ಯೋಜನೆ ಜಾರಿಗೆ ತಂದಿದೆ. ಇನ್ಮುಂದೆ ಖಾಲಿ ಕಾಂಪೌಂಡ್‌ಗಳ ಮುಂದೆ ನಿಂತು ಮೂತ್ರ ವಿಸರ್ಜನೆ ಮಾಡುವ ಮುನ್ನ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಮೈಸೂರು ಕೇಂದ್ರ ಬಸ್ ನಿಲ್ದಾಣದ ಮುಂಭಾಗದ ಸುಮಾರು 80 ಮೀಟರ್ ಉದ್ದದ ಕಾಂಪೌಂಡ್ ಗೆ ಸ್ಟೇನ್ ಲೆಸ್ ಸ್ಟೀಲ್ ರಿಫ್ಲಕ್ಷನ್ ಶೀಟ್ ಗಳನ್ನು ಅಳವಡಿಸಲಾಗಿದ್ದು, ಕನ್ನಡಿಯ ಮಾದರಿಯಲ್ಲಿ ಪ್ರತಿಬಿಂಬ ಕಾಣುವಂತೆ ವ್ಯವಸ್ಥೆ ಮಾಡಲಾಗಿದೆ. ಅದರ ಮುಂದೆ ನಿಂತವರ ಸಂಪೂರ್ಣ ಚಿತ್ರಣ ಹಿಂಬದಿಯವರಿಗೆ ಕಾಣುವಂತೆ ವಿನ್ಯಾಸಗೊಳಿಸಲಾಗಿದೆ.
ಕನ್ನಡಿಗಳ ಸುತ್ತ ಎಲ್ ಇಡಿ ಲೈಟ್ ಗಳನ್ನು ಅಳವಡಿಸಲಾಗಿದ್ದು, ಸಂಜೆ ವೇಳೆ ಸ್ಟ್ರೀಟ್ ಲೈಟ್ ಆನ್ ಆದಾಗ ಅವು ಸಹ ಬೆಳಗುವಂತೆ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಗಬ್ಬು ವಾಸನೆ ಸೃಷ್ಟಿಸುತ್ತಿದ್ದವರನ್ನು ತಡೆಯುವ ಉದ್ದೇಶದಿಂದ ಸುಮಾರು ₹9.5 ಲಕ್ಷ ವೆಚ್ಚದಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ.
ರಾಜ್ಯದಲ್ಲೇ ಮೊದಲ ಬಾರಿಗೆ ಜಾರಿಯಾಗಿರುವ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಮುಂಭಾಗದ ಕಾಂಪೌಂಡ್‌ನಲ್ಲಿ ಅಳವಡಿಸಲಾಗಿದ್ದು, ನಗರ ಪಾಲಿಕೆಯ ಈ ನೂತನ ಪ್ರಯತ್ನಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
Mysuru City Corporation has introduced a unique plan to stop public urination and foul smell near empty compound walls. Stainless steel mirror reflections with LED lights have been installed along an 80-meter compound wall near the city bus stand, making people conscious as their reflection becomes visible to everyone nearby. The pilot project, costing ₹9.5 lakh, is the first of its kind in Karnataka and has received public appreciation.
#Mysuru #MCC #SmartCity #PublicAwareness #CleanMysuru #SwachhBharat #Karnataka #InnovativeIdea #CityDevelopment #PublicHygiene
Key words: Mysuru, unique plan, stop, public urination
The post ಸಾರ್ವಜನಿಕರೇ ಎಚ್ಚರ: ಮೂತ್ರ ವಿಸರ್ಜನೆ ತಡೆಗೆ ಮೈಸೂರು ಪಾಲಿಕೆ ವಿನೂತನ ಕ್ರಮ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





