23
April, 2026

A News 365Times Venture

23
Thursday
April, 2026

A News 365Times Venture

ಲಂಚ ಸ್ವೀಕರಿಸುತ್ತಿದ್ದ ‘ಗ್ರಾ.ಪಂ ಕಂಪ್ಯೂಟರ್ ಆಪರೇಟರ್’ ಲೋಕಾಯುಕ್ತ ಬಲೆಗೆ

Date:

ಕಲಬುರಗಿ,ಏಪ್ರಿಲ್,22,2026 (www.justkannada.in):  ಜಿಲ್ಲೆಯ ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮ ಪಂಚಾಯತಿಯಲ್ಲಿ ಲಂಚ ಸ್ವೀಕಾರ ಪ್ರಕರಣ ಬೆಳಕಿಗೆ ಬಂದಿದೆ. ಕರ್ನಾಟಕ ಲೋಕಾಯುಕ್ತ ಕಲಬುರಗಿ ಪೊಲೀಸ್ ಅಧೀಕ್ಷಕ ಸಿದ್ಧರಾಜು ಸಿ. ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

ದೂರುದಾರ ಮಲ್ಲಿಕಾರ್ಜುನ್ ನೀಡಿದ ದೂರಿನ ಮೇರೆಗೆ, ಮಳ್ಳಿ ಗ್ರಾಮ ಪಂಚಾಯತಿಯ ಕಂಪ್ಯೂಟರ್ ಆಪರೇಟರ್ ಬಂದೇನವಾಜ್ ಅವರು ಬಸವ ವಸತಿ ಯೋಜನೆಯಡಿ ಮಂಜೂರಾದ ಮನೆ ಸಹಾಯಧನ ಬಿಡುಗಡೆ ಮಾಡಲು ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಆರೋಪಿ ಮೊದಲು ₹20,000 ಲಂಚ ಕೇಳಿದ್ದು, ಬಳಿಕ ₹10,000ಕ್ಕೆ ಒಪ್ಪಿಕೊಂಡು, ₹5,000 ನಗದು ಹಾಗೂ ₹3,000 ಫೋನ್‌ಪೇ ಮೂಲಕ ಸ್ವೀಕರಿಸಿದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ.

ಈ ಕಾರ್ಯಾಚರಣೆಯನ್ನು ಲೋಕಾಯುಕ್ತ ಪೊಲೀಸ್ ಇನ್ಸ್‌ ಪೆಕ್ಟರ್ ಅರುಣ್ ಕುಮಾರ್ ಮುರುಗುಂಡಿ ನೇತೃತ್ವದಲ್ಲಿ ನಡೆಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಪ್ರಕ್ರಿಯೆ ನಡೆಯಲಿದೆ.

ENGLISH SUMMARY

Kalaburagi: Panchayat Operator Caught Taking Bribe

A computer operator of Mally village panchayat in Yadrami taluk, Kalaburagi district, has been arrested by Lokayukta officials for accepting a bribe.

Based on a complaint by Mallikarjun, the accused Bandenawaz allegedly demanded ₹20,000 to release housing funds under the Basava Housing Scheme and later agreed to ₹10,000. He was caught while accepting ₹5,000 in cash and ₹3,000 via PhonePe.

The operation was carried out under the guidance of SP Siddaraju C., led by Police Inspector Arun Kumar Murugundi. The accused will be produced before the court after investigation.

Key words: Lokayukta, Trap, Computer Operator, accepting, bribe

The post ಲಂಚ ಸ್ವೀಕರಿಸುತ್ತಿದ್ದ ‘ಗ್ರಾ.ಪಂ ಕಂಪ್ಯೂಟರ್ ಆಪರೇಟರ್’ ಲೋಕಾಯುಕ್ತ ಬಲೆಗೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

പതിനെട്ട് വയസുവരെ ഫോണ്‍ വേണ്ട; കുട്ടികളുടെ സ്‌ക്രീന്‍ ടൈം കുറയ്ക്കാന്‍ നിയമം വേണം: ബാലാവകാശ കമ്മീഷന്‍

തിരുവനന്തപുരം: പതിനെട്ട് വയസുവരെയുള്ള കുട്ടികളിലെ സ്‌ക്രീന്‍ ഉപയോഗം നിയന്ത്രിക്കുന്നതിന് നിയമം കൊണ്ടുവരണമെന്ന്...

ராமநாதபுரம்: தங்கள் வாக்கினைத் தங்களுக்கே செலுத்த முடியாத பிரதான கட்சி வேட்பாளர்கள்!

ராமநாதபுரம் மாவட்டத்தில் பரமக்குடி, திருவாடானை, ராமநாதபுரம், முதுகுளத்தூர் என 4 சட்டமன்றத்...

മുഖ്യമന്ത്രി കസേരയ്ക്കായി സോഷ്യല്‍ മീഡിയയില്‍ പോര്; ചെന്നിത്തലയ്ക്കായി ക്യാമ്പെയ്‌നുമായി യൂത്ത് കോണ്‍ഗ്രസും കെ.എസ്.യുവും

തിരുവനന്തപുരം: കേരളത്തില്‍ നിയമസഭാ തെരഞ്ഞെടുപ്പ് ഫലം വരാന്‍ ദിവസങ്ങള്‍ മാത്രം ബാക്കി...