22
April, 2026

A News 365Times Venture

22
Wednesday
April, 2026

A News 365Times Venture

ಮೈಸೂರು: ರೈತಮುಖಂಡರಿಂದ ಪ್ರತಿಭಟನೆ: ಡಿಸಿ ಕಚೇರಿಗೆ ಮುತ್ತಿಗೆಗೆ ಯತ್ನ

Date:

ಮೈಸೂರು,ಏಪ್ರಿಲ್,21,2026 (www.justkannada.in): ರಾಜ್ಯ ಸರ್ಕಾರ ನಿಗದಿ ಮಾಡಿರುವ ಹೆಚ್ಚುವರಿ ಹಣ ನಿಗದಿ ಮಾಡಿಲ್ಲ ಎಂದು ಆರೋಪಿಸಿ ಇಂದು ರೈತಮುಖಂಡರು  ಮೈಸೂರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆಗೆ ಯತ್ನಿಸಿದ್ದು ಪೊಲೀಸರು ತಡೆಯೊಡ್ಡಿದರು.

ರಾಜ್ಯ ಸರ್ಕಾರ ನಿಗದಿ ಮಾಡಿರುವ ಹೆಚ್ಚುವರಿ ಹಣ ನೂರು ರೂಪಾಯಿ ಕಬ್ಬು ಬೆಳೆಗಾರರಿಗೆ ಪಾವತಿ ಮಾಡಿಲ್ಲ ಎಂದು ಆರೋಪಿಸಿ ನೂರಾರು ರೈತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದು ಈ ವೇಳೆ ಕಚೇರಿಯ ಒಳಗೆ ನುಗ್ಗಲು ಯತ್ನಿಸಿದರು.  ತಕ್ಷಣ ಪೊಲೀಸರು  ರೈತರನ್ನ ತಡೆದಿದ್ದು,   ರೈತರು ಪೊಲೀಸರ ನಡುವೆ ತಳ್ಳಾಟ ನೂಕಾಟ  ನಡೆಯಿತು. ನಂತರ ಪ್ರತಿಭಟನಾನಿರತ ರೈತರು ಕಚೇರಿಯ ಪೂರ್ಟಿಕೂದಲ್ಲಿ ಕುಳಿತು ಧರಣಿ ಮುಂದುವರೆಸಿದರು.

ಪ್ರತಿಭಟನಾಕಾರವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್,  ರೈತರ ಸಂಕಷ್ಟ ಅರಿಯದ ಬಣ್ಣಾರಿ ಸಕ್ಕರೆ ಕಾರ್ಖಾನೆ ರೈತರನ್ನ ನಿರಂತರ ಶೋಷಣೆ ಮಾಡುತ್ತಿದೆ.. ಪ್ರತಿ ವರ್ಷವು ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡುತ್ತಲೇ ರೈತರನ್ನು ವಂಚಿಸುತ್ತಿದೆ. ಸಕ್ಕರೆ ಕಾರ್ಖಾನೆ ನಡೆಸುತ್ತಿರುವ ಬಣ್ಣಾರಿ ಕಾರ್ಖಾನೆ ಮಾಲೀಕರನ್ನು ಜೈಲಿಗೆ ಕಳಿಸಬೇಕು. ಇಂತಹ ಉಪಟಳದಿಂದಲೇ ರೈತರು ಕಬ್ಬು ಬೆಳೆಯನ್ನ ಕಡಿಮೆ ಮಾಡಿದ್ದಾರೆ. 15 ಲಕ್ಷ ಟನ್ ಕಬ್ಬು ಅರೆಯುವ ಸಾಮರ್ಥ್ಯ ಇರುವ ಬಣ್ಣಾರಿ ಕಾರ್ಖಾನೆಗೆ ಕೇವಲ ಏಳುವರೆ ಲಕ್ಷ ಟನ್ ಮಾತ್ರ ಸರಬರಾಜು ಮಾಡಿದ್ದಾರೆ. ಈ ಕಬ್ಬಿನ ಹೆಚ್ಚುವರಿ ಹಣ ಏಳುವರೆ ಕೋಟಿ ರೈತರಿಗೆ ಪಾವತಿಸದೆ ನಾಟಕವಾಡುತ್ತಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಸಕ್ಕರೆ ಗೋದಾಮು ವಶಕೆ ಪಡೆದು ಸಕ್ಕರೆ ಮಾರಾಟ ಮಾಡಿ ರೈತರ ಹಣ ಕೂಡಿಸಬೇಕು. ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರ ಎಥನಾಲ್ ಅನ್ನು ಪೆಟ್ರೋಲ್ ಜೊತೆ ಶೇಕಡಾ ಇಪ್ಪತ್ತರಷ್ಟು ಮಿಶ್ರಣ ಮಾಡಲು ಸೂಚನೆ ನೀಡಿರುವುದು ಸ್ವಾಗತಾರ್ಹ ಕ್ರಮ.  ಚಳುವಳಿ ನಿರತ ರೈತರು ಕಬ್ಬಿನ ಹಣ ಕೊಡಿಸುವ ತನಕ ನಿರಂತರ ಪ್ರತಿಭಟನಾ ಧರಣಿ  ನಡೆಸುತ್ತಿದ್ದಾರೆ ಎಂದರು.

ಚಳುವಳಿಯಲ್ಲಿ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್,  ಮೂಕಳ್ಳಿ ಮಹದೇವಸ್ವಾಮಿ, ಪಟೇಲ್ ಶಿವಮೂರ್ತಿ, ಉಡಿಗಾಲ ರೇವಣ್ಣ, ಸೋಮಶೇಖರ್,  ಮಾರ್ಬಳ್ಳಿ ನೀಲಕಂಠಪ್ಪ, ವರಕೋಡು ನಾಗೇಶ್, ಲಕ್ಷ್ಮೀಪುರ ವೆಂಕಟೇಶ್,, ಕುರುಬೂರು ಸಿದ್ದೇಶ್, ದೇವನೂರು ವಿಜಯೇಂದ್ರ,  ಮಹದೇವಸ್ವಾಮಿ, ಕೆಂಡಗಣ್ಣಪ್ಪ, ನಾಗೇಶ್, ಕುರುಬೂರು ಪ್ರದೀಪ್, ಪ್ರಸಾದ್ ನಾಯಕ, ಗೌರಿಶಂಕರ್, ಗುರುಸ್ವಾಮಿ, ಅಂಬಳೆ ಮಂಜುನಾಥ್, ಪರಶಿವಮೂರ್ತಿ, ಸಾತಗಳ್ಳಿ ಬಸವರಾಜ, ಸುಂದರಪ್ಪ, ಸತೀಶ್, ದೇವನೂರು ಮಹಾದೇವಪ್ಪ, ರಂಗರಾಜು, ಕೆಂಡಗಣಸ್ವಾಮಿ, ಶಿವಸ್ವಾಮಿ, ರವಿಕುಮಾರ್, ನಂಜುಂಡಸ್ವಾಮಿ, ನಾಗೇಂದ್ರ, ಕಮಲಮ್ಮ ಸೇರಿದಂತೆ 250ಕ್ಕೂ ಹೆಚ್ಚು ರೈತರು ಇದ್ದರು.

Key words: Mysore,  Protest, farmers, DC’s office

The post ಮೈಸೂರು: ರೈತಮುಖಂಡರಿಂದ ಪ್ರತಿಭಟನೆ: ಡಿಸಿ ಕಚೇರಿಗೆ ಮುತ್ತಿಗೆಗೆ ಯತ್ನ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഇസ്രഈൽ മനുഷ്യാവകാശങ്ങൾ ലംഘിച്ചു, യൂറോപ്യൻ യൂണിയനുമായുള്ള കരാർ മരവിപ്പിക്കണം: അയർലന്റ്

ഡബ്ലിൻ: മനുഷ്യാവകാശങ്ങൾ നഗ്നമായി ലംഘിക്കുന്ന ഇസ്രഈലിനെതിരെ യൂറോപ്യൻ യൂണിയൻ നടപടിയെടുക്കണമെന്ന് അയർലൻഡ്...

`கோவை தெற்கு தொகுதி தேர்தல் ரத்தா?' – மாவட்ட ஆட்சியர் விளக்கம்!

கோவை தெற்கு தொகுதியில் தி.மு.க. சார்பில் செந்தில் பாலாஜியும், அ.தி.மு.க. சார்பில்...

OTR: సీఎం ప్రెస్ మీట్ లో NDSA ఛైర్మన్ ఉండటంపై బీజేపీ అభ్యంతరం

OTR: NDSA ఛైర్మన్‌ విషయంలో ఏదో తేడా కొడుతోందా? ఆయన...

സ്ത്രീ സംവരണം ബി.ജെ.പി വൈകിപ്പിക്കുന്നു, സോണിയയുടെയും രാഹുലിന്റെയും പഴയ കത്ത് പുറത്തുവിട്ട് കോൺഗ്രസ്

ന്യൂ ദൽഹി: സ്ത്രീ സംവരണം നടപ്പിലാക്കുന്നത് മനപൂർവ്വം വൈകിപ്പിക്കാൻ പ്രധാനമന്ത്രി നരേന്ദ്ര...