22
April, 2026

A News 365Times Venture

22
Wednesday
April, 2026

A News 365Times Venture

ಮೈಸೂರಿನ GRS  ಫ್ಯಾಂಟಸಿ ಪಾರ್ಕ್‌ ಗೆ ಎರಡು ರಾಷ್ಟ್ರೀಯ ಪ್ರಶಸ್ತಿಗಳ ಗರಿ

Date:

ಮೈಸೂರು,ಏಪ್ರಿಲ್,21,2026 (www.justkannada.in): ನಗರದ ಖ್ಯಾತ ಅಮ್ಯೂಸ್‌ಮೆಂಟ್‌ ಪಾರ್ಕ್‌ ಜಿಆರ್‌ಎಸ್‌ ಫ್ಯಾಂಟಸಿ ಪಾರ್ಕ್‌ ಗೆ ಇಂಡಿಯನ್‌ ಅಸೋಸಿಯೇಶನ್‌ ಆಫ್‌ ಅಮ್ಯೂಸ್‌ಮೆಂಟ್‌ ಪಾರ್ಕ್ಸ್‌ ಅಂಡ್‌ ಇಂಡಸ್ಟ್ರೀಸ್‌ (IAAPI) ವತಿಯಿಂದ ಇತ್ತೀಚೆಗೆ ಎರಡು ರಾಷ್ಟ್ರ ಪ್ರಶಸ್ತಿಗಳು ದೊರೆತಿದ್ದು, ಇಡೀ ರಾಷ್ಟ್ರದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮೈಸೂರಿನ ಹೆಸರು ಮನೆಮಾತಾಗುವಂತೆ ಮಾಡಿದೆ.

IAAPI ಇಡೀ ರಾಷ್ಟ್ರದ ಅಮ್ಯೂಸ್‌ ಮೆಂಟ್‌ ಪಾರ್ಕ್‌ಗಳನ್ನು ಪರಿಗಣಿಸಿ ಪ್ರತಿ ವರ್ಷ ವಿವಿಧ ಪ್ರಶಸ್ತಿಗಳನ್ನು ನೀಡುತ್ತದೆ. ಈ ಪೈಕಿ ಈ ವರ್ಷ ಜಿಆರ್‌ಎಸ್‌ಗೆ ಬೆಸ್ಟ್‌ ಡಿಜಿಟಲ್‌ ಮಾರ್ಕೆಟಿಂಗ್‌ ವಿಭಾಗದಲ್ಲಿ ಮೊದಲ ಸ್ಥಾನ ಹಾಗೂ ಬೆಸ್ಟ್‌ ಇವೆಂಟ್ಸ್‌ ವಿಭಾಗದಲ್ಲಿ ಎರಡನೆಯ ಸ್ಥಾನ ದೊರೆತಿದೆ. ಒಟ್ಟು 25 ವಿಭಾಗಗಳಲ್ಲಿ ವಿವಿಧ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಈ ಬಾರಿ ಮಾರ್ಚ್‌ ನಲ್ಲಿ ಮುಂಬೈನಲ್ಲಿ ನಡೆದ IAAPI ಎಕ್ಸ್‌ಪೋದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಿಆರ್‌ಎಸ್‌ ಸಂಸ್ಥೆಯ ನಿರ್ದೇಶಕ ಅಶ್ವಿನ್‌ ದಂಗೆ ಅವರು ಇಡೀ ತಂಡದ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು.

ಈ ಸ್ಪರ್ಧೆಗೆ ಭಾರತದಾದ್ಯಂತದ ಎಲ್ಲಾ ಅಮ್ಯೂಸ್‌ ಮೆಂಟ್‌ ಪಾರ್ಕ್‌ ಗಳನ್ನು ಪರಿಗಣಿಸಲಾಗಿತ್ತು. ಈ ಪೈಕಿ ವಿವಿಧ ಮಾನದಂಡಗಳಿಗೆ ಅನುಗುಣವಾಗಿ ಪ್ರಶಸ್ತಿಗಳನ್ನು ನೀಡಲಾಗಿದೆ. ʻದೇಶದ ಬೇರೆಲ್ಲಾ ಬೃಹತ್‌ ಅಮ್ಯೂಸ್‌ ಮೆಂಟ್‌ ಪಾರ್ಕ್‌ಗಳ ನಡುವೆ ಸ್ಪರ್ಧೆಯಲ್ಲಿದ್ದ ಜಿಆರ್‌ಎಸ್‌ ಗೆ ಎರಡು ಪ್ರಶಸ್ತಿಗಳು ಲಭಿಸಿರುವುದು ಸಂತಸದ ಸಂಗತಿ. ಇದು ಮೈಸೂರಿನ ಕಿರೀಟದಲ್ಲೂ ಒಂದು ಗರಿ. ಇದೇ ರೀತಿ ವಿವಿಧ ಹೊಸ ಸಂಗತಿಗಳೊಂದಿಗೆ ಜನರಿಗೆ ವರ್ಷಪೂರ್ತಿ ಮನರಂಜನೆ ನೀಡುವಂತಾಗಬೇಕು ಎಂಬುದು ನಮ್ಮ ಆಶಯ. ಈ ಬೃಹತ್‌ ಮಾರುಕಟ್ಟೆಯಲ್ಲಿ ನಮ್ಮ ಮೈಸೂರಿನ ಅಮ್ಯೂಸ್‌ಮೆಂಟ್‌ ಪಾರ್ಕ್‌ ಇಷ್ಟರಮಟ್ಟಕ್ಕೆ ಸಾಧನೆ ಮಾಡಿರುವುದು ಮೈಸೂರಿಗೂ ಹೆಮ್ಮೆ ತರುವ ವಿಚಾರʼ ಎಂದು ಜಿಆರ್‌ಎಸ್‌ನ ವ್ಯವಸ್ಥಾಪಕರು ತಿಳಿಸಿದ್ದಾರೆ.

ಬೇಸಿಗೆ ಸಮಯದಲ್ಲಿ ಮಕ್ಕಳಿಗೆ, ಹಿರಿಯರಿಗೆ ಹಾಗೂ ಕುಟುಂಬದವರೆಲ್ಲರಿಗೂ ಸಂಪೂರ್ಣ ಮನರಂಜನೆ ನೀಡುವ ಸಲುವಾಗಿ ಜಿಆರ್‌ಎಸ್‌ ವತಿಯಿಂದ ಸೆಲ್ಫೀ ಫ್ಯಾಕ್ಟರಿ, ಬೇಸಿಗೆ ಉತ್ಸವ (ಸಮ್ಮರ್‌ ಕಾರ್ನಿವಲ್)‌ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇಲ್ಲಿ ಬರುವವರಿಗೆ ವಿವಿಧ ಆಕರ್ಷಣೆಗಳೂ ಇರಲಿವೆ.

Key words: GRS Fantasy Park, Mysore, wins, two, national awards

The post ಮೈಸೂರಿನ GRS  ಫ್ಯಾಂಟಸಿ ಪಾರ್ಕ್‌ ಗೆ ಎರಡು ರಾಷ್ಟ್ರೀಯ ಪ್ರಶಸ್ತಿಗಳ ಗರಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

സ്ത്രീ സംവരണം ബി.ജെ.പി വൈകിപ്പിക്കുന്നു, സോണിയയുടെയും രാഹുലിന്റെയും പഴയ കത്ത് പുറത്തുവിട്ട് കോൺഗ്രസ്

ന്യൂ ദൽഹി: സ്ത്രീ സംവരണം നടപ്പിലാക്കുന്നത് മനപൂർവ്വം വൈകിപ്പിക്കാൻ പ്രധാനമന്ത്രി നരേന്ദ്ര...

அண்ணா நகர் 2026! – சிற்றரசின் ‘செக்-மேட்’ பாலிடிக்ஸ்!

சென்னை என்றாலே அது ‘திமுகவின் கோட்டை’ என்பது அரசியல் பாலபாடம். அதிலும்...

Off The Record : హైలెవల్ బ్రిడ్జిపై కాంగ్రెస్, బీజేపీ మధ్య మాటల యుద్ధం

హైలెవల్‌ బ్రిడ్జి చుట్టూ హైటెన్షన్ పాలిటిక్స్‌ నడుస్తున్నాయా? శంకుస్థాపన రాయి పడీ...

അപ്രതീക്ഷിത സ്ഫോടനം; ചികിത്സാ സഹായങ്ങൾ ലഭ്യമാക്കും; തൃശൂരിലെ സ്‌ഫോടനത്തിൽ പ്രതികരിച്ച് മുഖ്യമന്ത്രി

തൃശ്ശൂർ: തൃശൂരിലെ വെടിക്കെട്ട് പുരയിലുണ്ടായ സ്‌ഫോടനത്തിൽ പ്രതികരിച്ച് മുഖ്യമന്ത്രി പിണറായി വിജയൻ.പുറത്തുവരുന്ന...