19
April, 2026

A News 365Times Venture

19
Sunday
April, 2026

A News 365Times Venture

ಮೈಸೂರು: ಬೇಸಿಗೆ ರಜೆ ಇಲ್ಲದೇ ತರಗತಿಗಳು – ವಿದ್ಯಾರ್ಥಿಗಳಿಂದ ದೂರು, ಎನ್‌ಎಸ್‌ಯುಐ ಎಚ್ಚರಿಕೆ

Date:

 

ಮೈಸೂರು, ಏ.೧೯,೨೦೨೬:  ನಗರದಲ್ಲಿರುವ ಐಎಂಎಸ್‌ಸಿ (IMSC) ಇನ್‌ಸ್ಟಿಟ್ಯೂಟ್ ವಿದ್ಯಾರ್ಥಿಗಳು ಬೇಸಿಗೆ ರಜೆ ನೀಡದೇ ನಿರಂತರವಾಗಿ ತರಗತಿಗಳನ್ನು ನಡೆಸುತ್ತಿರುವ ಬಗ್ಗೆ ಗಂಭೀರ ಅಸಮಾಧಾನ ವ್ಯಕ್ತಪಡಿಸಿ ಜಿಲ್ಲಾಧಿಕಾರಿ (DC) ಹಾಗೂ ಡಿಪ್ಯೂಟಿ ಡೈರೆಕ್ಟರ್ (DDPU/DPUE) ಅವರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.

ವಿದ್ಯಾರ್ಥಿಗಳ ಮನವಿಯಲ್ಲಿ, ಕಳೆದ ಹಲವು ವಾರಗಳಿಂದ ಯಾವುದೇ ಸಮರ್ಪಕ ವಿರಾಮವಿಲ್ಲದೆ ನಿರಂತರವಾಗಿ ತರಗತಿಗಳು ನಡೆಯುತ್ತಿರುವುದು ಶಾರೀರಿಕ ಹಾಗೂ ಮಾನಸಿಕ ದಣಿವು ಉಂಟುಮಾಡುತ್ತಿದೆ ಎಂದು ಉಲ್ಲೇಖಿಸಲಾಗಿದೆ. ಮೈಸೂರು ಮತ್ತು ಸುತ್ತಮುತ್ತಲಿನ ಬಹುತೇಕ ಕಾಲೇಜುಗಳಲ್ಲಿ ಬೇಸಿಗೆ ರಜೆ ಘೋಷಿಸಲಾಗಿದ್ದರೂ, ತಮ್ಮ ಸಂಸ್ಥೆಯಲ್ಲಿ ಮಾತ್ರ ತರಗತಿಗಳು ಮುಂದುವರಿದಿರುವುದರಿಂದ ವಿದ್ಯಾರ್ಥಿಗಳ ಏಕಾಗ್ರತೆ ಹಾಗೂ ಶೈಕ್ಷಣಿಕ ಸಾಧನೆ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದೇ ಹಿನ್ನೆಲೆಯಲ್ಲಿ, ಕನಿಷ್ಠ ಎರಡು ವಾರಗಳ ಬೇಸಿಗೆ ರಜೆ (ಏಪ್ರಿಲ್ 20 ರಿಂದ ಮೇ 4ರವರೆಗೆ) ನೀಡುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ಈ ಮನವಿಗೆ ಬೆಂಬಲವಾಗಿ ಹಲವಾರು ವಿದ್ಯಾರ್ಥಿಗಳು ಸಹಿ ಹಾಕಿರುವ ಪಟ್ಟಿಯನ್ನೂ ಸಲ್ಲಿಸಲಾಗಿದೆ.

ಇದರ ನಡುವೆಯೇ, ಕರ್ನಾಟಕ ಎನ್‌ಎಸ್‌ಯುಐ (NSUI) ಕೂಡ ಈ ವಿಚಾರಕ್ಕೆ ಸ್ಪಂದಿಸಿದೆ. ಪು ಬೋರ್ಡ್ (PU Board) ಮಾರ್ಗಸೂಚಿಗಳನ್ನು ಉಲ್ಲಂಘಿಸಿ ನಿಗದಿತ ವೇಳಾಪಟ್ಟಿಗೆ ಮೀರಿ ತರಗತಿಗಳನ್ನು ನಡೆಸುತ್ತಿರುವ ಕೆಲವು ಸಂಸ್ಥೆಗಳ ಬಗ್ಗೆ ಎಚ್ಚರಿಕೆ ನೀಡಿದೆ. ಡಿಡಿಪಿಐ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಇಲ್ಲವಾದರೆ ಸರ್ಕಾರದಿಂದ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದೆ.

ಎನ್‌ಎಸ್‌ಯುಐ ಬೆಂಗಳೂರು ಉತ್ತರ ಘಟಕದ ಅಧ್ಯಕ್ಷ ನಿಶ್ಚಯ್ ಗೌಡಾ ಅವರು, ಮೇ 22, 2026ರ ಮೊದಲು ಕಾಲೇಜುಗಳನ್ನು ಪುನರಾರಂಭಿಸಬಾರದು ಮತ್ತು ಅನುಮತಿ ಇಲ್ಲದೆ ತರಗತಿಗಳನ್ನು ನಡೆಸಬಾರದು ಎಂದು ಸ್ಪಷ್ಟಪಡಿಸಿದ್ದಾರೆ. ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಸಂಬಂಧಿಸಿದ ಸಂಸ್ಥೆಗಳಿಗೆ ನೋಟಿಸ್ ನೀಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಒಟ್ಟಾರೆ, ವಿದ್ಯಾರ್ಥಿಗಳ ಒತ್ತಾಯ ಮತ್ತು ಎನ್‌ಎಸ್‌ಯುಐ ಎಚ್ಚರಿಕೆಯ ನಡುವೆಯೇ, ಬೇಸಿಗೆ ರಜೆ ಹಾಗೂ ತರಗತಿ ವೇಳಾಪಟ್ಟಿ ಕುರಿತಾಗಿ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

Mysuru: Students Protest, No Summer Break, NSUI, Issues Warning, MYSORE, IMSC

SUMMARY: 

Students of IMSC Institute in Mysuru have submitted a complaint to the Deputy Commissioner and education authorities, alleging that classes are being conducted continuously without a proper summer break.

They stated that while most colleges in and around Mysuru have declared holidays, their institution has continued regular classes, causing fatigue and affecting academic performance. Students have requested at least a two-week break from April 20 to May 4.

Meanwhile, NSUI Karnataka has warned institutions against violating PU Board guidelines. NSUI Bengaluru North President Nishchay Gowda stated that colleges should not conduct classes before May 22, 2026, and strict action will be taken against those who fail to comply.

The post ಮೈಸೂರು: ಬೇಸಿಗೆ ರಜೆ ಇಲ್ಲದೇ ತರಗತಿಗಳು – ವಿದ್ಯಾರ್ಥಿಗಳಿಂದ ದೂರು, ಎನ್‌ಎಸ್‌ಯುಐ ಎಚ್ಚರಿಕೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

പാര്‍ട്ടിവിട്ട് ഫ്രറ്റേണിറ്റി മലപ്പുറം ജില്ലാ പ്രസിഡന്റ് ജംഷീല്‍ അബൂബക്കര്‍

മലപ്പുറം: വെല്‍ഫയര്‍ പാര്‍ട്ടി മലപ്പുറം ജില്ലാ സെക്രട്ടറി സ്ഥാനം രാജിവെച്ച് ജംഷീല്‍...

"சினிமாவில் இருக்கக்கூடிய அதே சத்யராஜ், பிரகாஷ் ராஜ் போன்ற கூத்தாடிகள் தானே.!"- குஷ்பு ஆவேசம்

மதுரை மத்திய தொகுதி திமுக சார்பில் போட்டியிடும் வேட்பாளர் பிடிஆர் பழனிவேல்...

Harish Rao: ధాన్యం కొనుగోళ్లు నత్తనడకన సాగుతోంది.. మాజీ మంత్రి హరీష్ రావు ఫైర్

Harish Rao: రాష్ట్రంలో ధాన్యం కొనుగోలు ప్రక్రియ నత్త నడకన సాగుతోందని...

പോര്‍ച്ചുഗല്‍ സര്‍ക്കാരിന്റെ തൊഴില്‍ പരിഷ്‌ക്കരണത്തിനെതിരെ പ്രതിഷേധം; ലിസ്ബണില്‍ തെരുവിലിറങ്ങി പതിനായിരങ്ങള്‍

ലിസ്ബണ്‍: പോര്‍ച്ചുഗീസ് സര്‍ക്കാരിന്റെ പുതിയ തൊഴില്‍നിയമ പരിഷ്‌ക്കാരങ്ങള്‍ക്കെതിരെ ലിസ്ബണില്‍ പ്രതിഷേധ പ്രകടനം...