15
April, 2026

A News 365Times Venture

15
Wednesday
April, 2026

A News 365Times Venture

ಆದಿಚುಂಚನಗಿರಿ ಮಠದ ಸೇವೆಗೆ ಮೆಚ್ಚುಗೆ: ಸ್ವದೇಶಿ ಆಹಾರ, ಸ್ವಚ್ಛತೆ , ಅರಣ್ಯ ರಕ್ಷಣೆಗೆ ಪ್ರಧಾನಿ ಮೋದಿ ಕರೆ

Date:

ಮಂಡ್ಯ,ಏಪ್ರಿಲ್,15,2026 (www.justkannada.in): ಆದಿಚುಂಚನಗಿರಿ ಮಠವು ಸಮಾಜಕ್ಕೆ ಆಧ್ಯಾತ್ಮಿಕ ಮಾರ್ಗದರ್ಶನ ನೀಡುತ್ತಿದೆ.  ನಿರ್ಮಲಾನಂದನಾಥ ಸ್ವಾಮೀಜಿ ಮಠದ ಪರಂಪರೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಅನ್ನ ಅಕ್ಷರ, ಆರೋಗ್ಯ ಅಧ್ಯಾತ್ಮ  ಸೇರಿದಂತೆ  9 ತತ್ವ ಸಿದ್ದಾಂತವನ್ನ  ಭಕ್ತರಿಗೆ ಮಠವು ಉಣಬಡಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದರು.

ಮಂಡ್ಯ ಜಿಲ್ಲೆ ನಾಗಮಂಗಲದ ಆದಿಚುಂಚನಗಿರಿಯಲ್ಲಿ ಭೈರವೈಕ್ಯ ಮಂದಿರ ಉದ್ಘಾಟನೆ ಮಾಡಿ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಆದಿಚುಂಚನಗಿರಿ ಮಠಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಸಮಾಜಕ್ಕೆ ಆದಿಚುಂಚನಗಿರಿ ಮಠ ಸೇವೆ ಅಪಾರ. ಅದನ್ನು ಶಬ್ದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಶ್ರೀಮಠವು ಶೈಕ್ಷಣಿಕ ಮತ್ತು ಸಾಮಾಜಿಕ ಕಾರ್ಯಗಳು ನಡೆಯುತ್ತಿವೆ. ಮಠ ಸೇವೆ, ಕಾರ್ಯ ಸದಾ ಜೀವಂತ. ಸಾಮಾನ್ಯ ಜನರ ಜೀವನ ಬಗ್ಗೆ ಬಾಲಗಂಗಾಧರನಾಥ ಶ್ರೀಗಳಿಗೆ ಅರಿವಿತ್ತು. ಶಾಲೆಯಿಂದ ಹಿಡಿದು  ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನ ಕಟ್ಟಿದರು. ಶೈಕ್ಷಣಿಕ ಕ್ಷೇತ್ರದಲ್ಲಿ ನೂರಾರು ಸಂಸ್ಥೆಗಳನ್ನ ಕಟ್ಟಿದರು. ನಮ್ಮ ಸರ್ಕಾರವೂ ಕೂಡ ಅದೇ ಆಶಯವನ್ನು ಹೊಂದಿ ಕೆಲಸ ಮಾಡುತ್ತಿದೆ  ಬಾಲಗಂಗಾಧರನಾಥ ಶ್ರೀಗಳು ಕರುಣೆಯ ಪ್ರತಿರೂಪವಾಗಿದ್ದರು  ಶ್ರೀಗಳಲ್ಲಿ ಬಹುದೊಡ್ಡ ಆದಾತ್ಮಿಕ ಶಕ್ತಿ ಇತ್ತು ಎಂದು ನುಡಿದರು.

ಜನರ ಜೀವನ ಉತ್ತಮಗೊಳಿಸಲು ನಿರ್ಮಲಾನಂದನಾಥ ಶ್ರೀಗಳು ಶ್ರಮಿಸಿದ್ದಾರೆ.  ಕೋಟ್ಯಾಂತರ ಬಡವರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ತಮ್ಮ ಗುರುಗಳಂತೆ ನಿರ್ಮಲಾನಂದನಾಥ ಶ್ರೀಗಳು  ಮುನ್ನಡೆಯುತ್ತಿದ್ದಾರೆ. ಮಠವು ಅನ್ನ ಅಕ್ಷರ ಆರೋಗ್ಯ ಅಧ್ಯಾತ್ಮ  ಸೇರಿದಂತೆ  9 ತತ್ವ ಸಿದ್ದಾಂತವನ್ನ ಭಕ್ತರಿಗೆ ಉಣಬಡಿಸುತ್ತಿದೆ ಎಂದು ಗುಣಗಾನ ಮಾಡಿದರು.

ಅರಣ್ಯ ಸಂರಕ್ಷಣೆ  ಸ್ವಚ್ಚತಾ ಕಾರ್ಯ ನಮ್ಮೆಲ್ಲರ ಕರ್ತವ್ಯ

ಮಂಡ್ಯ  ನೀರಿನ ಮಹತ್ವವನ್ನು ಹೊಂದಿದೆ  ಇಡೀ ಪ್ರದೇಶ ಕಾವೇರಿ ಮಾತೆಯ ಆಶೀರ್ವಾದದಿಂದ ಫಲವತ್ತಾಗಿದೆ ನಾವೆಲ್ಲರೂ ನೀರಿನ ಉಳಿಸುವ ಸರಿಯಾಗಿ ಬಳಕೆ ಮಾಡುವ ಪ್ರತಿಜ್ಞೆ ಮಾಡೋಣ. ತಾಯಿಯ ಹೆಸರಲ್ಲಿ ಒಂದು ಗಿಡ ನೆಡೋಣ.  ಅರಣ್ಯ ಸಂರಕ್ಷಣೆ  ಸ್ವಚ್ಚತಾ ಕಾರ್ಯ ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು

ಸ್ವದೇಶಿ ಆಹಾರ ಬಳಸಿ

ಎಣ್ಣೆ ಪದಾರ್ಥ ಸೇವನೆ ಕಡಿಮೆ ಮಾಡಿ, ಆರೋಗ್ಯ ಕಾಳಜಿ ವಹಿಸಿ. ವಿದೇಶಿ ಉತ್ಪನ್ನಗಳ ಬಳಕೆ ಕಡಿಮೆ ಮಾಡಿ, ದೇಶಿ ಉತ್ಪನ್ನಗಳನ್ನು ಹೆಚ್ಚು ಖರೀದಿಸಿ. ಸ್ವದೇಶಿ ಆಹಾರದ ಕಡೆಗೆ ಗಮನಕೊಡಿ ಎಂದು ಪ್ರಧಾನಿ ಮೋದಿ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು, ಮಠದ ನಿರ್ಮಲಾನಂದನಾಥಸ್ವಾಮೀಜಿ, ಕೇಂದ್ರ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ವಿಪಕ್ಷ ನಾಯಕ ಆರ್.ಅಶೋಕ್ ಉಪಸ್ಥಿತರಿದ್ದರು.

Key words: Appreciation, Adichunchanagiri Mutt, service, PM Modi

The post ಆದಿಚುಂಚನಗಿರಿ ಮಠದ ಸೇವೆಗೆ ಮೆಚ್ಚುಗೆ: ಸ್ವದೇಶಿ ಆಹಾರ, ಸ್ವಚ್ಛತೆ , ಅರಣ್ಯ ರಕ್ಷಣೆಗೆ ಪ್ರಧಾನಿ ಮೋದಿ ಕರೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

സമാധാനത്തിനായി നാലിന കരാര്‍; പശ്ചിമേഷ്യന്‍ രാജ്യങ്ങളുടെ പരമാധികാരം സംരക്ഷിക്കണം: ചൈന

ബെയ്ജിങ്: പശ്ചിമേഷ്യയിലേയും ഗള്‍ഫ് മേഖലയിലേയും മുഴുവന്‍ രാജ്യങ്ങളുടെയും പരമാധികാരവും സുരക്ഷയും പൂര്‍ണമായി...

Delimitation: "அமித்ஷாவின் பதிலை ரிலே பண்ணுவதற்கு இபிஎஸ் என்ன ஒலிபெருக்கியா?" – ப.சிதம்பரம் கேள்வி

கோவை தனியார் ஹோட்டலில் முன்னாள் மத்திய அமைச்சர் ப.சிதம்பரம் இன்று செய்தியாளர்களைச்...

Tollywood : టాలీవుడ్‌లో సంప్రదాయనీ.. బాలీవుడ్‌‌లో సుద్దపూసనీ రోల్స్ చేస్తున్న క్యూట్ బ్యూటీ

టాలీవుడ్‪లో స్ట్రాంగ్ ఉమెన్ క్యారెక్టర్స్ సెలక్ట్ చేసుకుంటూ తనకంటూ సెపరేట్ పాథ్...

ഇസ്രഈലിന് തിരിച്ചടി; പ്രതിരോധ കരാറുകളില്‍ നിന്ന് പിന്മാറി ഇറ്റലി

ടെഹ്‌റാന്‍: പശ്ചിമേഷ്യന്‍ സംഘര്‍ഷം തുടരുന്നതിനിടെ കൂടുതല്‍ ഒറ്റപ്പെട്ട് ഇസ്രഈല്‍. ഇസ്രഈലുമായുള്ള എല്ലാ...