19
May, 2026

A News 365Times Venture

19
Tuesday
May, 2026

A News 365Times Venture

ಮೈಸೂರು: ಮೂವರು ಸರಗಳ್ಳರ ಬಂಧನ: 125 ಗ್ರಾಂ ಚಿನ್ನಾಭರಣ ವಶಕ್ಕೆ

Date:

ಮೈಸೂರು,ಏಪ್ರಿಲ್,14,2026 (www.justkannada.in): ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಅಂತರರಾಜ್ಯ ಮಹಿಳಾ ಆರೋಪಿಗಳು ಸೇರಿದಂತೆ ಮೂವರು ಸರಗಳ್ಳರನ್ನ ಬಂಧಿಸಿ 125 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.

ತಮಿಳನಾಡು ರಾಜ್ಯದ ಪಂಜವರ್ಣಮ್, ಸುಮದಿ, ರಘು  ಬಂಧಿತ ಸರಗಳ್ಳರು. 24-01-2026 ರಂದು ಮೈಸೂರು ನಗರ ಲಷ್ಕರ್ ಪೊಲೀಸ್ ಠಾಣಾ ಸರಹದ್ದಿನ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಪ್ಲಾಟ್ ಫಾರ್ಮ್-10 ರಲ್ಲಿ ಮಹಿಳೆಯೊಬ್ಬರಿಗೆ ಸೇರಿದ ಸುಮಾರು 47 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಳ್ಳತನವಾಗಿರುವ ಬಗ್ಗೆ ಠಾಣಾ ಮೊ.ನಂ:12/2026 ಕಲಂ: 303(2) ಬಿ.ಎನ್.ಎಸ್  ಅಡಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿತ್ತು.

ನಂತರ ಪ್ರಕರಣದಲ್ಲಿ ಆರೋಪಿ ಮತ್ತು ಮಾಲು ಪತ್ತೆಗಾಗಿ ಮೈಸೂರಿನ  ಪೊಲೀಸ್ ಆಯುಕ್ತರು ವಿಶೇಷ ತಂಡ ರಚನೆ ಮಾಡಿದ್ದು, ಅದರಂತೆ ವಿಶೇಷ ತಂಡದ ಸಿಬ್ಬಂದಿಗಳು ತಮಿಳನಾಡು ರಾಜ್ಯದ ಮೂವರು ಆರೋಪಿಗಳನ್ನ ದಸ್ತಗಿರಿ ಮಾಡಿದ್ದಾರೆ. ಆರೋಪಿಗಳಿಂದ ಲಷ್ಕರ್ ಪೊಲೀಸ್ ಠಾಣೆಯ ಪ್ರಕರಣಕ್ಕೆ ಸಂಬಂಧಿಸಿದ 47 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಹಾಗೂ ಠಾಣೆಯ ಇತರೆ ಎರಡು ಪ್ರಕ.ರಣಗಳಿಗೆ ಸಂಬಂಧಿಸಿದ 22 ಗ್ರಾಂ ಚಿನ್ನದ ನೆಕ್ಲೇಸ್ ಹಾಗೂ 56 ಗ್ರಾಂ ತೂಕದ ಚಿನ್ನದ ಆಭರಣಗಳು ಸೇರಿದಂತೆ ಒಟ್ಟು 03 ಕಳ್ಳತನದ ಪ್ರಕರಣಗಳನ್ನು ಪತ್ತೆಮಾಡಿ ಸುಮಾರು 16,50,000/-ರೂ. ಬೆಲೆ ಬಾಳುವ ಒಟ್ಟು 125 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಸದರಿ ಆರೋಪಿಗಳ ಪತ್ತೆ ಕಾರ್ಯದಲ್ಲಿ ಲಷ್ಕರ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಲೋಲಾಕ್ಷಿ ಟಿ.ಎಸ್, ಪೊಲೀಸ್ ಉಪನಿರೀಕ್ಷಕರಾದ ರಾಧಾ ಎಂ ಮತ್ತು ರಂಗಸ್ವಾಮಿ ಎನ್.ವಿ ಸಿಬ್ಬಂದಿಗಳಾದ ಸುರೇಶ, ರವಿಕುಮಾರ, ಮಂಜುನಾಥ, ಸಿಪಿಸಿ ಚೌಡಪ್ಪ ಪಾಸೀಗರ್, ಸಿಪಿಸಿ ಅಬ್ದುಲ್ ರೆಹಮಾನ್, ಮಪಿಸಿ ಅಶ್ವಿನಿ ಹೆಳವರ್ ಹಾಗೂ ಸಿಡಿಆರ್ ಟೆಕ್ನಿಕಲ್ ಸೆಲ್ ನ ಕುಮಾರ್  ಅವರುಗಳು ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

Key words: Mysore, Three, thieves ,arrested, gold jewellery, seized

The post ಮೈಸೂರು: ಮೂವರು ಸರಗಳ್ಳರ ಬಂಧನ: 125 ಗ್ರಾಂ ಚಿನ್ನಾಭರಣ ವಶಕ್ಕೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഒ.ബി.സി വിഭാഗങ്ങൾക്കുള്ള സംവരണം നിർത്തലാക്കി ബംഗാളിലെ ബി.ജെ.പി സർക്കാർ

കൊൽക്കത്ത: ഒ.ബി.സി വിഭാഗക്കാർക്കുള്ള സംവരണം നിർത്തലാക്കി ബംഗാളിൽ പുതുതായി അധികാരത്തിലേറിയ സുവേന്ദു...

ராகுல் காந்தி, பினராயி விஜயன் முன்னிலையில் வி.டி.சதீசன் கேரள முதல்வராக பதவியேற்பு Photo Album

ராகுல் காந்தி, பிரியங்கா காந்தி, பினராயி விஜயன் உள்ளிட்ட முக்கிய தலைவர்கள்...

Nalgonda: రక్తసంబంధానికే మాయని మచ్చ.. ఆస్తి కోసం ఎంత పని చేశారంటే..!

ఆస్తుల కోసం రక్త సంబంధీకులే పగవాళ్లుగా మారుతున్నారు. సొంత వారిని హత్య...