15
May, 2026

A News 365Times Venture

15
Friday
May, 2026

A News 365Times Venture

ಸಫಾರಿ ಆರಂಭಕ್ಕೆ ಅನುಮತಿ ನಿರ್ಧಾರ ವಾಪಸ್ ಪಡೆಯದಿದ್ರೆ ಉಗ್ರ ಹೋರಾಟ- ಕುರುಬೂರು ಶಾಂತಕುಮಾರ್

Date:

ಬೆಂಗಳೂರು,ಫೆಬ್ರವರಿ,18,2026 (www.justkannada.in): ಅರಣ್ಯಗಳಲ್ಲಿ ಸಫಾರಿ ಆರಂಭಕ್ಕೆ ಸರ್ಕಾರ ಅನುಮತಿ ನೀಡಿರುವುದು ಖಂಡನೀಯ. ಸಫಾರಿ ಆರಂಭಕ್ಕೆ ನೀಡಿರುವ ಅನುಮತಿ ನಿರ್ಧಾರ ವಾಪಸ್ ಪಡೆಯದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಕುರುಬೂರು ಶಾಂತಕುಮಾರ್, ಅರಣ್ಯದ ಅಂಚಿನಲ್ಲಿ ವಾಸ ಮಾಡುವ ಗ್ರಾಮಗಳ ರೈತರ ಕಷ್ಟ ಅರಿಯದೆ ಕಾಡು ಪ್ರಾಣಿಗಳು ಜನರ ಪ್ರಾಣ ಹಾನಿ ಮಾಡುತ್ತಿದ್ದರೂ ಲೆಕ್ಕಿಸದೆ ಬಂಡವಾಳ ಶಾಹಿ ರೆಸಾರ್ಟ್ ಮಾಲೀಕರ ಒತ್ತಡಕ್ಕೆ ಮಣಿದು ಸಫಾರಿ ಆರಂಭಕ್ಕೆ ಅನುಮತಿ ನೀಡಿರುವುದು ಖಂಡನಿಯ. ಕೂಡಲೇ ನಿರ್ಧಾರ ವಾಪಾಸ್ ಪಡಬೇಕು ಇಲ್ಲದಿದ್ದರೆ ರೈತ ಸಂಘಟನೆಗಳು ಬೀದಿಗೆ ಇಳಿದು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸುತಿದ್ದೇವೆ ಎಂದರು.

ಕಾಡಿನಲ್ಲಿ ನಡೆಯುವ ಸಫಾರಿಯಿಂದ ಕಾಡು ಪ್ರಾಣಿಗಳು ಭಯಭೀತಿಯಿಂದ ಕಾಡಿನ ಹೊರಗೆ ಬಂದು ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ ಹಾಗೂ ರೈತರ ಬೆಳೆಗಳನ್ನ ನಾಶ ಮಾಡುತ್ತಿವೆ. ಇದು ಸರ್ಕಾರಕ್ಕೆ ತಿಳಿದಿದ್ದರೂ ಒತ್ತಡಕ್ಕೆ ಮಣಿದು ಸಫಾರಿ ಅನುಮತಿ ನೀಡಿದ್ದಾರೆ.

ಪ್ರಾಣಿಗಳ ಸಂಖ್ಯೆ ಏರಿಕೆಯಾಗಿದೆ ಕಾಡು ಪ್ರದೇಶ ಕಡಿಮೆಯಾಗಿದೆ ಎಂಬುದನ್ನ ಸರ್ಕಾರವೇ ಹೇಳುತ್ತದೆ.  ಈ ರೀತಿ ಆದರೆ ಪ್ರಾಣಿಗಳ ಸ್ವೇಚ್ಛ ವರ್ತನೆಯ ಓಡಾಟಕ್ಕೆ ಕಷ್ಟವಾಗಿ ಹೊರಗೆ ಬರುತ್ತಿವೆ ಎಂಬುದನ್ನು ಸರ್ಕಾರ ಅರಿತಿದೆ. ಸರ್ಕಾರಕ್ಕೆ ಬರುವ ಆದಾಯ ಮುಖ್ಯವಾಗಬಾರದು. ಜನ ಬದುಕು ಮುಖ್ಯವಾಗಿರಬೇಕು ಎಂಬುದನ್ನು ಸರ್ಕಾರ ಅರಿಯಬೇಕು.  ಅರಣ್ಯ ಸಚಿವರು ಯಾವುದೇ ಒತ್ತಡಕ್ಕೆ ಮಣಿಯದೆ ನಿರ್ಧಾರ ವಾಪಾಸ್ ಪಡೆಯಲಿ ಎಂದು ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.

Key words: protest, decision, safari, begin, Kuruburu Shanthakumar

The post ಸಫಾರಿ ಆರಂಭಕ್ಕೆ ಅನುಮತಿ ನಿರ್ಧಾರ ವಾಪಸ್ ಪಡೆಯದಿದ್ರೆ ಉಗ್ರ ಹೋರಾಟ- ಕುರುಬೂರು ಶಾಂತಕುಮಾರ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

‘ഇതുകൊണ്ടാണ് ഇവരെ കോമാളി നിലവാരത്തില്‍ കാണുന്നത്’; സ്ഥാനമേല്‍ക്കാത്ത സര്‍ക്കാര്‍ വാഗ്ദാനം പാലിക്കാന്‍ ആവശ്യപ്പടുന്ന മഹിളാ മോര്‍ച്ച സമരത്തെക്കുറിച്ച് വി.ടി. ബല്‍റാം

കൊച്ചി: അധികാരത്തിലെത്തിയാല്‍ കെ.എസ്.ആര്‍.ടി.സി. ബസ്സുകളില്‍ സ്ത്രീകള്‍ക്ക് യാത്ര സൗജന്യമാക്കുമെന്നതായിരുന്നു ഇത്തവണ നിയമസഭാ...

`எடப்பாடிதான் எங்கள் தலைவர்; மாற்றுக் கருத்து இல்லை’ – வேலுமணி அணியில் இருந்து தாவிய கே.சி.வீரமணி

அ.தி.மு.க இரண்டாகப் பிளவுப்பட்டுள்ள நிலையில், அந்தக் கட்சியின் முன்னாள் அமைச்சரும் தற்போதைய...

ಹಿಜಾಬ್ ವಿವಾದ: ವಿದ್ಯಾರ್ಥಿಗಳನ್ನು ಧಾರ್ಮಿಕವಾಗಿ ಇಬ್ಬಾಗ ಮಾಡುವ ಸಾಧ್ಯತೆ- ಹಿರಿಯ ವಕೀಲ ಅ.ಮ.ಭಾಸ್ಕರ್

ಮೈಸೂರು,ಮೇ,15,2026 (www.justkannada.in): ರಾಜ್ಯದಲ್ಲಿ ಮತ್ತೆ ಹಿಜಾಬ್ ,ಕೇಸರಿ ಶಾಲಿನ ವಿವಾದ...