14
May, 2026

A News 365Times Venture

14
Thursday
May, 2026

A News 365Times Venture

ನ.1 ಮತ್ತು 2ರಂದು ‘ಪ್ರಾಜೆಕ್ಟ್ ವೆಸ್ಟ್ – ಸೃಜನಾತ್ಮಕ ಮರುಬಳಕೆ” ಕಾರ್ಯಾಗಾರ

Date:

ಮೈಸೂರು,ಅಕ್ಟೋಬರ್,27,2025 (www.justkannada.in): ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ (IIET), ಮೈಸೂರು “ಪ್ರಾಜೆಕ್ಟ್ ವೆಸ್ಟ್ – ಸೃಜನಾತ್ಮಕ ಮರುಬಳಕೆ” ಎಂಬ ಸೃಜನಾತ್ಮಕ ಮತ್ತು ಪರಿಸರಸ್ನೇಹಿ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ.

ನವೆಂಬರ್ 1 ಮತ್ತು 2ರಂದು ನಡೆಯುವ ಈ ಕಾರ್ಯಾಗಾರವು “ತ್ಯಾಜ್ಯ ಬಟ್ಟೆಗಳಿಂದ ಸೃಜನಾತ್ಮಕ ಮರುಬಳಕೆ” ಎಂಬ ವಿಶೇಷ ವಿಷಯದಡಿ ಆಯೋಜನೆಗೊಳ್ಳುತ್ತಿದ್ದು  7ರಿಂದ 14 ವರ್ಷದ ಮಕ್ಕಳಿಗೆ ಈ ಕಾರ್ಯಾಗಾರ ಭಾಗವಹಿಸಬಹುದಾಗಿದೆ.

ಸ್ಥಳ: ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ (IIET), ಹಾರ್ಡ್ವಿಕ್ ಶಾಲಾ ಆವರಣ, ಜೆ.ಎಲ್.ಬಿ. ರಸ್ತೆ, ಮೈಸೂರು ಇಲ್ಲಿ ಕಾರ್ಯಗಾರ ಆಯೋಜಿಸಲಾಗಿದ್ದು ನವೆಂಬರ್ 1 ಶನಿವಾರ ಮಧ್ಯಾಹ್ನ 3.00ರಿಂದ 5.00ರವರೆಗೆ ಮತ್ತು ನವೆಂಬರ್ 2 ಭಾನುವಾರ ಬೆಳಗ್ಗೆ 10.00ರಿಂದ ಮಧ್ಯಾಹ್ನ 12.00ರವರೆಗೆ ಕಾರ್ಯಗಾರ ನಡೆಯಲಿದೆ.

ಪ್ರತಿ ವಾರಾಂತ್ಯದ ಭಾಗವಹಿಸುವಿಕೆ ಶುಲ್ಕ ₹200. ಈ ಕಾರ್ಯಾಗಾರದ ಮೂಲಕ ಮಕ್ಕಳು ಪರಿಸರ ಸಂರಕ್ಷಣೆ, ಮರುಬಳಕೆ ಹಾಗೂ ಕಲಾತ್ಮಕ ಚಿಂತನೆಯ ಮಹತ್ವವನ್ನು ಅರಿತುಕೊಳ್ಳುವ ಅವಕಾಶ ಪಡೆಯುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಮತ್ತು ನೋಂದಣಿಗೆ ಸಂಪರ್ಕಿಸಿ: 98456 05012.

ಈ ಯೋಜನೆಯ ಉದ್ದೇಶ, ಮಕ್ಕಳಲ್ಲಿ ತ್ಯಾಜ್ಯ ವಸ್ತುಗಳ ಬಗ್ಗೆ ಹೊಸ ದೃಷ್ಟಿಕೋನವನ್ನು ಬೆಳೆಸುವುದು ಮತ್ತು ಅವುಗಳನ್ನು ಕಲಾತ್ಮಕ ರೂಪದಲ್ಲಿ ಪರಿವರ್ತಿಸಲು ಪ್ರೇರೇಪಿಸುವುದಾಗಿದೆ. ಈ ಕಾರ್ಯಕ್ರಮದಲ್ಲಿ ಮಕ್ಕಳು ತಮ್ಮ ಸೃಜನಾತ್ಮಕತೆಯಿಂದ ಹಳೆಯ ಬಟ್ಟೆಗಳನ್ನು ಹೊಸ ರೂಪದಲ್ಲಿ ಕಲಾಕೃತಿಗಳಾಗಿ ರೂಪಿಸುವುದನ್ನು ಕಲಿಯುತ್ತಾರೆ.

Key words: Mysore, ‘Project, West – Creative Recycling,  workshop

The post ನ.1 ಮತ್ತು 2ರಂದು ‘ಪ್ರಾಜೆಕ್ಟ್ ವೆಸ್ಟ್ – ಸೃಜನಾತ್ಮಕ ಮರುಬಳಕೆ” ಕಾರ್ಯಾಗಾರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

വർക്ക് ഫ്രം ഹോം, വിദേശ യാത്ര വേണ്ട; ഇറാൻ യുദ്ധ പശ്ചാത്തലത്തിൽ ചെലവുചുരുക്കൽ നയങ്ങളുമായി ദൽഹി സർക്കാർ

ന്യൂദൽഹി: പശ്ചിമേഷ്യൻ സംഘർഷ സാഹചര്യം കണക്കിലെടുത്ത് നിർണായക നീക്കങ്ങളുമായി ദൽഹി സംസ്ഥാന...

"எடப்பாடி பழனிசாமிக்கு ஜெயலலிதாவின் ஆத்மா தண்டனை கொடுக்கிறது" – அமைச்சர் செங்கோட்டையன்

கோவை விமான நிலையத்தில் அமைச்சர்  செங்கோட்டையன் செய்தியாளர்களுக்குப் பேட்டியளித்தார். அப்போது பேசிய...

Modi-CM Vijay: ప్రధాని మోడీకి సీఎం విజయ్ లేఖ.. దేనికోసమంటే..!

తమిళనాడు ముఖ్యమంత్రి విజయ్.. ప్రధాని మోడీకి కీలక లేఖ రాశారు. దేశంలోని...

ಹಿಜಾಬ್ ಬಗ್ಗೆ ಮಾತನಾಡ್ತೀರಾ? ಜನಿವಾರ ಕಾಣಿಸಲ್ವಾ? ಬಿಜೆಪಿಗೆ  ಸಚಿವ ಮಧು ಬಂಗಾರಪ್ಪ ಟಾಂಗ್

ಬೆಂಗಳೂರು,ಮೇ,14,2026 (www.justkannada.in) :  ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಗೆ ಅವಕಾಶ ನೀಡಿ...