15
May, 2026

A News 365Times Venture

15
Friday
May, 2026

A News 365Times Venture

ಕಾವೇರಿ ಹಿನ್ನೀರಿನ ಈ ಪ್ರದೇಶಗಳು ನಿಷೇಧಿತ ಪ್ರದೇಶವೆಂದು ಘೋಷಣೆ

Date:

ಮೈಸೂರು,ಸೆಪ್ಟಂಬರ್,18 (www.justkannada.in): ಮೈಸೂರು ತಾಲ್ಲೂಕು, ಇಲವಾಲ ಹೋಬಳಿ, ಇಲವಾಲ ಠಾಣಾ ಸರಹದ್ದಿನ ಕಾವೇರಿ ಹಿನ್ನೀರು ಪ್ರದೇಶಕ್ಕೆ ಒಳಪಡುವ ಕೆಲಗ್ರಾಮಗಳಿಗೆ ಹೊಂದಿಕೊಂಡಂತ ಹಿನ್ನೀರಿನ ಪ್ರದೇಶವನ್ನು ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ-2023 ಸೆಕ್ಷನ್ 163ರ ರೀತ್ಯಾ ನಿಷೇಧಿತ ಪ್ರದೇಶವೆಂದು  ಘೋಷಿಸಿ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಆದೇಶ ಹೊರಡಿಸಿದ್ದಾರೆ.

ಈ ಕುರಿತು ಆದೇಶ ಹೊರಡಿಸಿರುವ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಅವರು,  ಕೃಷ್ಣರಾಜ ಸಾಗರ ಅಣೆಕಟ್ಟೆ ತುಂಬಿರುವ ಹಿನ್ನಲೆಯಲ್ಲಿ ಮೈಸೂರು ತಾಲ್ಲೂಕು, ಇಲವಾಲ ಹೋಬಳಿ, ಇಲವಾಲ ಠಾಣಾ ಸರಹದ್ದಿನ ಕಾವೇರಿ ಹಿನ್ನೀರು ಪ್ರದೇಶಕ್ಕೆ ಒಳಪಡುವ ಗ್ರಾಮಗಳಾದ ಮೀನಾಕ್ಷಿಪುರ, ಆನಂದೂರು, ಹಳೇ ಉಂಡವಾಡಿ, ಯಡಹಳ್ಳಿ ಸಾಗರಕಟ್ಟೆ, ರಾಮೇನಹಳ್ಳಿ ಮಲ್ಲೇಗೌಡನಕೊಪ್ಪಲು, ಚೋಳೇನಹಳ್ಳಿ, ಯಾಚೇಗೌಡನಹಳ್ಳಿ ಎಸ್.ಹೆಮ್ಮನಹಳ್ಳಿ ಹೊಸಕೋಟೆ, ಕಲ್ಲೂರು ನಾಗನಹಳ್ಳಿ ಗ್ರಾಮಗಳಿಗೆ ಹೊಂದಿಕೊಂಡಂತೆ ಇರುವ ಹಿನ್ನೀರಿನ ಪ್ರದೇಶಕ್ಕೆ ಸಾರ್ವಜನಿಕರ ಹಾಗೂ ಪ್ರವಾಸಿಗರ ಹಿತದೃಷ್ಠಿಯಿಂದ ಪ್ರವೇಶವನ್ನು ನಿರ್ಬಂಧಿಸಿ, ದಿನಾಂಕ: 16.09.2025 ರಿಂದ ಮುಂದಿನ 06 ತಿಂಗಳವರೆಗೆ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ -2023 ಸೆಕ್ಷನ್ 163 ರೀತ್ಯಾ ನಿರ್ಬಂಧಿತ ಪ್ರದೇಶವೆಂದು ಘೋಷಿಸಲಾಗಿದೆ.

ಈ ಆದೇಶವನ್ನು ಪೊಲೀಸ್ ಅಧೀಕ್ಷಕರು, ಮೈಸೂರು ಜಿಲ್ಲೆ ಮತ್ತು ತಾಲ್ಲೂಕು ದಂಡಾಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಮತ್ತು ಆದೇಶ ಉಲ್ಲಂಘಿಸುವವರ ವಿರುದ್ಧ ಕಾನೂನಿನ್ವಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

Key words: Kaveri backwaters, declared, forbidden area, Mysore DC

The post ಕಾವೇರಿ ಹಿನ್ನೀರಿನ ಈ ಪ್ರದೇಶಗಳು ನಿಷೇಧಿತ ಪ್ರದೇಶವೆಂದು ಘೋಷಣೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

Gujarat: జానపద గాయకుడిపై లక్షల్లో నోట్ల వర్షం.. వీడియో వైరల్

ప్రస్తుతం భారత్‌లోనూ.. అంతర్జాతీయంగా ఆర్థిక సంక్షోభం కొనసాగుతోంది. పశ్చిమాసియా యుద్ధం కారణంగా...

ಸೇತುವೆ ಮೇಲಿಂದ ಉರುಳಿ ಬಿದ್ದ ಟ್ರ್ಯಾಕ್ಟರ್ ಒಂದೇ ಕುಟುಂಬದ 6 ಮಂದಿ ಸಾವು

ಕೊಪ್ಪಳ, ಮೇ,15,2026 (www.justkannada.in):  ಹಿಂದಿನಿಂದ ಟ್ಯಾಂಕರ್ ಡಿಕ್ಕಿಯಾದ ಪರಿಣಾಮ ಸೇತುವೆ...

‘ഇതുകൊണ്ടാണ് ഇവരെ കോമാളി നിലവാരത്തില്‍ കാണുന്നത്’; സ്ഥാനമേല്‍ക്കാത്ത സര്‍ക്കാര്‍ വാഗ്ദാനം പാലിക്കാന്‍ ആവശ്യപ്പടുന്ന മഹിളാ മോര്‍ച്ച സമരത്തെക്കുറിച്ച് വി.ടി. ബല്‍റാം

കൊച്ചി: അധികാരത്തിലെത്തിയാല്‍ കെ.എസ്.ആര്‍.ടി.സി. ബസ്സുകളില്‍ സ്ത്രീകള്‍ക്ക് യാത്ര സൗജന്യമാക്കുമെന്നതായിരുന്നു ഇത്തവണ നിയമസഭാ...

`எடப்பாடிதான் எங்கள் தலைவர்; மாற்றுக் கருத்து இல்லை’ – வேலுமணி அணியில் இருந்து தாவிய கே.சி.வீரமணி

அ.தி.மு.க இரண்டாகப் பிளவுப்பட்டுள்ள நிலையில், அந்தக் கட்சியின் முன்னாள் அமைச்சரும் தற்போதைய...