22
September, 2026

A News 365Times Venture

22
Tuesday
September, 2026

A News 365Times Venture

ಗಾಂಧೀಜಿಯವರ ಕನಸು ಗ್ರಾಮ ಸ್ವರಾಜ್ಯ : ಶಾಸಕ ದರ್ಶನ್ ಪುಟ್ಟಣ್ಣಯ್ಯ

Date:

ಮಂಡ್ಯ,ಸೆಪ್ಟಂಬರ್,13,2025 (www.justkannada.in): ದೇಶ ಅಭಿವೃದ್ಧಿ ಹೊಂದಬೇಕೆಂದರೆ ದೇಶದಲ್ಲಿನ ಗ್ರಾಮಗಳು ಅಭಿವೃದ್ಧಿ ಹೊಂದಬೇಕು ಎಂಬುದು ಗಾಂಧೀಜಿಯವರ ಪರಿಕಲ್ಪನೆ ಆಗಿತ್ತು. ಗ್ರಾಮ ಸ್ವರಾಜ್ಯ ಎನ್ನುವಂತಹದ್ದು ಗಾಂಧೀಜಿಯವರ ಕನಸು ಎಂದು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಭಿಪ್ರಾಯಪಟ್ಟರು.

ಇಂದು ರೈತ ಸಂಘ, ಪುಟ್ಟಣ್ಣಯ್ಯ ಟ್ರಸ್ಟ್ ವತಿಯಿಂದ ಪಾಂಡವಪುರ ಕ್ರೀಡಾಂಗಣದಲ್ಲಿ ನಡೆದ ಸ್ವರಾಜ್ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿದರು. ದೇಶದಲ್ಲಿ ಶೇಕಡಾ 15 ರಷ್ಟು ಜನ ಐಟಿಬಿಟಿ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಶೇಕಡಾ 60 ರಿಂದ 70 ರಷ್ಟು ಜನ ಸಣ್ಣ ಕೈಗಾರಿಕೆಗೆ ಮತ್ತು ವ್ಯವಸಾಯದಲ್ಲಿ ತೊಡಗಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಸಣ್ಣ ಕೈಗಾರಿಕೆ ಹಾಗೂ ಕೃಷಿ ಕ್ಷೇತ್ರ ಹೆಚ್ಚಿನ ಅಭಿವೃದ್ಧಿ ಹೊಂದಬೇಕೆಂಬುದೇ ಸ್ವರಾಜ್ ಉತ್ಸವದ ಸದುದ್ದೇಶ ಎಂದರು.

ಗ್ರಾಮಗಳ ಸಮಸ್ಯೆ ಪರಿಹಾರವಾಗಬೇಕು ಹಾಗೂ ಅಭಿವೃದ್ಧಿ ಹೊಂದಬೇಕು ಎಂದು ವಿವಿಧ ಸಂಸ್ಥೆಗಳ ಸಹಕಾರದೊಂದಿದೆ. ಪ್ರಮುಖ 12 ಮಳಿಗೆಗಳ ಪ್ರದರ್ಶನವನ್ನು ನಡೆಸಲಾಗಿದ್ದು, ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.

ಗ್ರಾಮ ಸಣ್ಣ ಕೈಗಾರಿಕೆ, ಕೃಷಿ ಹಾಗೂ ಕೈಗಾರಿಕೆಗಳ ಉತ್ಪನ್ನಗಳಿಗೆ ಅಗತ್ಯವಾದ ಉಪಉತ್ಪನ್ನಗಳನ್ನು ಗ್ರಾಮಗಳಲ್ಲಿಯೇ ಉತ್ಪಾದಿಸಬೇಕು. ಇತರರ ಮೇಲೆ ಅವಲಂಬಿತವಾಗದೆ ಗ್ರಾಮಗಳನ್ನು ಅಭಿವೃದ್ಧಿ ಪಡಿಸಬೇಕು ಎಂಬುವುದೇ ಸ್ವರಾಜ್ ಉತ್ಸವ. ಸ್ವರಾಜ್ ಉತ್ಸವದ ಪರಿಕಲ್ಪನೆಯನ್ನು ರೈತ ಸಂಘಗಳು ಒಗ್ಗೂಡಿ ರಾಜ್ಯದವರೆಗೆ ತಲುಪಿಸಬೇಕು ಎಂದು ರೈತರಿಗೆ ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ಆರ್ ನಂದಿನಿ ಹಾಗೂ ಪಾಂಡವಪುರ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ವೀಣಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ  ಮೇಲುಕೋಟೆಯ ಪ್ರವಾಸೋದ್ಯಮ ಸಾಕ್ಷಾಚಿತ್ರ ಪ್ರದರ್ಶಿಸಲಾಯಿತು.

ಕೃಷಿ, ಪ್ರವಾಸೋದ್ಯಮ, ಶಿಕ್ಷಣ, ಮಹಿಳಾ ಸಬಲೀಕರಣ, ಸಮಗ್ರ ಕೃಷಿ, ಆರೋಗ್ಯ, ಆಡಳಿತ, ಸಾಮಾಜಿಕ, ಪರಿಸರ, ತ್ಯಾಜ್ಯ, ಮೂಲಸೌಕರ್ಯ,  ಹಾಗೂ ಉದ್ಯೋಗ ಎಂಬಂತೆ ಪ್ರಮುಖ 12 ವಿಷಯಗಳ ಕುರಿತು ವಿವಿಧ ಮಳಿಗೆಗಳನ್ನು ತೆರೆಯಲಾಗಿತ್ತು.

ಕಾರ್ಯಕ್ರಮಕ್ಕೂ ಮುನ್ನ ಪಾಂಡವಪುರ ನಗರದ ಫೈಲೇಟ್ ವೃತ್ತದಿಂದ ಪಾಂಡವಪುರ ಕ್ರೀಡಾಂಗಣದವರೆಗೆ ಡೊಳ್ಳು, ವೀರಾಗಸೆ, ಕಳಸ ಹಾಗೂ ಎತ್ತಿನಗಾಡಿ ಮೂಲಕ ಸ್ವರಾಜ್ ಉತ್ಸವದ ಮೆರವಣಿಗೆ ಜರುಗಿತು.

Key words: Gandhiji,  dream, Gram Swarajya, MLA, Darshan Puttannaiah

The post ಗಾಂಧೀಜಿಯವರ ಕನಸು ಗ್ರಾಮ ಸ್ವರಾಜ್ಯ : ಶಾಸಕ ದರ್ಶನ್ ಪುಟ್ಟಣ್ಣಯ್ಯ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಸಮಸ್ಯೆ ಇಟ್ಟುಕೊಂಡು ರಾಜಕಾರಣ ಮಾಡುವ ಉದ್ದೇಶ ನನಗಿಲ್ಲ: ರೈತರು, ಜನರ ರಕ್ಷಣೆಗೆ ಬದ್ಧ-ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು, ಸೆಪ್ಟಂಬರ್‌,21,2026 (www.justkannada.in): ರಾಜ್ಯದ ರೈತರು, ಜನರ ರಕ್ಷಣೆ ನನಗೆ...

അയോധ്യ രാമക്ഷേത്രക്കൊള്ള: സി.സി.ടി.വിയില്‍ 105 തവണ മോഷണം പതിഞ്ഞു; സുപ്രീം കോടതിയെ അറിയിച്ച് യു.പി സര്‍ക്കാര്‍

ലഖ്‌നൗ: അയോധ്യ രാമക്ഷേത്രത്തിലെ സംഭാവന മോഷണവുമായി ബന്ധപ്പെട്ട് സി.സി.ടി.വിയില്‍ 105 തവണ...

TN 07 CM 2031: சர்ச்சைக்குள்ளான திருமாவளவன் பயணித்த கார் எண்; என்ன சொல்கிறது விசிக?

சென்னை பூவிருந்தவல்லி அருகே உள்ள செம்பரம்பாக்கம் ஈவிபி (EVP) பிலிம் சிட்டியில்,...

Italy: ఇటలీ స్కూళ్లలో బుర్ఖా, నిఖాబ్‌ నిషేధం.. మెలోనీ సర్కార్ సంచలన ప్రతిపాదన..

Italy: ఇటలీ ప్రధాని జార్జియా మెలోనీ సంచలన నిర్ణయానికి సిద్ధమవుతోంది. ఇటలీ...