21
September, 2026

A News 365Times Venture

21
Monday
September, 2026

A News 365Times Venture

ಇಸ್ರೇಲ್ ಬೆಳವಣಿಗೆ ವಾಸ್ತವ ಅರಿಯಲು ಭಾರತೀಯ ಪತ್ರಕರ್ತರ ನಿಯೋಗ ಭೇಟಿ

Date:

ಜೇರುಸಲೇಂ,ಸೆಪ್ಟಂಬರ್,13,2025 (www.justkannada.in): ಇಸ್ರೇಲ್ ನಲ್ಲಿ ನಡೆದಿರುವ ಬೆಳವಣಿಗೆ ಮತ್ತು ವಾಸ್ತವ ಸಂಗತಿಗಳನ್ನು ಹೊರ ಜಗತ್ತಿಗೆ ತಿಳಿಸುವ ನಿಟ್ಟಿನಲ್ಲಿ ಇಸ್ರೇಲ್ ಗೆ ಭಾರತೀಯ ಪತ್ರಕರ್ತರ ನಿಯೋಗವನ್ನು ಆಹ್ವಾನಿಸಲಾಗಿತ್ತು ಎಂದು ಇಸ್ರೇಲ್ ಕಾನ್ಸಲೇಟರ್ ಹಾರ್ಲಿವೈಟ್ಸ್ ಮೆನ್ ತಿಳಿಸಿದರು.

ಇದೇ ಸಂದರ್ಭದಲ್ಲಿ ದಕ್ಷಿಣ ಭಾರತೀಯ ಪತ್ರಕರ್ತರ ತಂಡದ ಪರವಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ ) ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಸನ್ಮಾನಿಸಿದರು.

ಸನ್ಮಾನ ಸ್ವೀಕಾರ ಮಾಡಿ ಮಾತನಾಡಿದ ಇಸ್ರೇಲ್ ಕಾನ್ಸಲೇಟರ್ ಹಾರ್ಲಿವೈಟ್ಸ್ ಮೆನ್ ಅವರು, ಇಸ್ರೇಲ್ ದೇಶ ಭಯೋತ್ಪಾದನೆ ವಿರುದ್ದ ಎದುರಿಸುತ್ತಿರುವ ಸವಾಲು, ಗಡಿ ಸಮಸ್ಯೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸತ್ಯದ ಸಂಗತಿಗಳನ್ನು ತಿಳಿಯಲಿ ಎನ್ನುವುದು ಈ ಪ್ರವಾಸದ ಆಶಯವಾಗಿತ್ತು ಎಂದರು.

ಸುವರ್ಣ ಟಿವಿ ಅಸೋಶಿಯೇಟ್ ಎಡಿಟರ್ ಪ್ರಶಾಂತ ನಾತು ಅವರು, ಇಸ್ರೇಲ್ ಅಧ್ಯಯನಶೀಲ ಪ್ರವಾಸ ಅನೇಕ ಸತ್ಯ ಸಂಗತಿಗಳನ್ನು ತಿಳಿಯಲು ಅನುಕೂಲವಾಯಿತು ಎಂದು ತಿಳಿಸಿ, ಇಸ್ರೇಲ್ ಅಂಬಾಸಿಡರ್ ಸೇರಿದಂತೆ ಎಲ್ಲ ಸಂಬಂದಿಸಿದ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದರು.

ಈ ಸಂದರ್ಭದಲ್ಲಿ ಇಸ್ರೇಲ್ ಕಾನ್ಸಲೆಟ್ ಪಿಆರ್ ರವಿಕಿರಣ್, ಹಿರಿಯ ಪತ್ರಕರಾದ ಚೀ.ಜ.ರಾಜೀವ್, ಮಧುನಾಯಕ್, ರಮೇಶ್ ಕುಮಾರ್ ನಾಯಕ್, ಬಸವರಾಜು, ಹರೀಶ್ ಉಪಾದ್ಯಾಯ, ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರ ಪತ್ರಕರ್ತರು ಹಾಜರಿದ್ದರು .

Key words: Indian, journalists Delegation, visits, Israel

The post ಇಸ್ರೇಲ್ ಬೆಳವಣಿಗೆ ವಾಸ್ತವ ಅರಿಯಲು ಭಾರತೀಯ ಪತ್ರಕರ್ತರ ನಿಯೋಗ ಭೇಟಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

മണിപ്പൂരില്‍ വീണ്ടും വെടിവെപ്പ്: 15 വയസുള്ള കുട്ടി കൊല്ലപ്പെട്ടു

ഇംഫാല്‍: മണിപ്പൂരിലെ തമെങ്‌ലോങ് ജില്ലയിലെ തമേയ് മേഖലയില്‍ അജ്ഞാതരായ ആയുധധാരികള്‍ നടത്തിയ...

"மக்கள் தங்குவதற்கு கட்டடம் இருக்கு; ஆனால்…" – விகடன் செய்திக்கு எழும்பூர் மருத்துவமனை விளக்கம்

முதல்வர் விஜய் ஆய்வு நடத்திய எழும்பூர் மகப்பேறு மருத்துவமனையில் அனுமதிக்கப்படும் பெண்களுக்கு...

Virat Curve 5G: 3డీ కర్వ్డ్ AMOLED డిస్‌ప్లే, 6000mAH బ్యాటరీ.. రేపు మధ్యాహ్నం 12 గంటలకు మార్కెట్లోకి విడుదల..

భారతీయ మార్కెట్లో విడుదల కానున్న కొత్త స్మార్ట్‌ఫోన్ లావా విరాట్ కర్వ్...

ಪೌರಕಾರ್ಮಿಕರ ಬೇಡಿಕೆ ಈಡೇರಿಕೆಗೆ ಪತ್ರಕರ್ತರಿಂದ ಒತ್ತಾಯ

ಬೆಂಗಳೂರು,ಸೆಪ್ಟಂಬರ್‌,21,2026 (www.justkannada.in):  ರಾಜ್ಯದ ಪೌರಕಾರ್ಮಿಕರನ್ನು ಖಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು...