21
September, 2026

A News 365Times Venture

21
Monday
September, 2026

A News 365Times Venture

‘ಪೀಟರ್’ ಮೊದಲ ಸಾಂಗ್ ರಿಲೀಸ್: ಸುಂದರಿ ಗೀತೆಯಲ್ಲಿ ರಾಜೇಶ್ ಧ್ರುವ, ರವೀಕ್ಷಾ ಶೆಟ್ಟಿ ಮಿಂಚಿಂಗ್

Date:

ಬೆಂಗಳೂರು, ಸೆಪ್ಟಂಬರ್,12,2025 (www.justkannada.in): ದೂರದರ್ಶನ ಸಿನಿಮಾ ಖ್ಯಾತಿಯ ನಿರ್ದೇಶಕ ಸುಕೇಶ್ ಶೆಟ್ಟಿ ಆಕ್ಷನ್ ಕಟ್ ಹೇಳಿರುವ ಪೀಟರ್ ಸಿನಿಮಾದ ಮೊದಲ ಹಾಡು ಬಿಡುಗಡೆ ಕಾರ್ಯಕ್ರಮ ನಿನ್ನೆ ಖಾಸಗಿ ಹೋಟೆಲ್ ನಲ್ಲಿ ನಡೆಯಿತು. ಈ‌ ವೇಳೆ ಇಡೀ ಚಿತ್ರತಂಡ ಉಪಸ್ಥಿತರಿದ್ದರು.

ಸುಂದರಿ ಸುಂದರಿ ಎಂಬ ಮೆಲೋಡಿ ಹಾಡು ರಿಲೀಸ್ ಬಳಿಕ ಸಂಗೀತ ನಿರ್ದೇಶಕ ರಿತ್ವಿಕ್ ಮುರುಳೀಧರ್ ಮಾತನಾಡಿ, ಇದು ಮೊದಲ ಸಿನಿಮಾ ತರ ಕೆಲಸ ಮಾಡಿದ್ದೇವೆ. ಪ್ರತಿ ಭಾಷೆಯಲ್ಲಿ ಒರಿಜಿನಲ್ ಸಾಂಗ್ ರೀತಿ‌ ಫೀಲ್‌ ಕೊಡುತ್ತದೆ. ಎಲ್ಲಾ ಲೈವ್ ಇನ್ಸ್ಟ್ರುಮೆಂಟ್ಸ್ ಬಳಕೆ ಮಾಡಲಾಗಿದೆ. ಈ ಕ್ರೆಡಿಟ್‌ ಎಲ್ಲಾ ಇಡೀ ತಂಡಕ್ಕೆ ಹೋಗಬೇಕು. ಇನ್ನೂ‌ ಮೂರು ಹಾಡುಗಳು ರಿಲೀಸ್ ಆಗಲಿದೆ ಎಂದು ಮಾಹಿತಿ ನೀಡಿದರು.

ಸುಕೇಶ್ ಶೆಟ್ಟಿ ಮಾತನಾಡಿ, ಪೀಟರ್ ಸಿನಿಮಾ ಹೋಪ್ ಕ್ರಿಯೇಟ್ ಮಾಡಿದೆ. ‌ನಿಮ್ಮ ನಿರೀಕ್ಷೆ ಕೊರತೆ ಬರದ ಹಾಗೇ ಕೆಲಸ ಮಾಡಿದ್ದೇವೆ. ಒಂದು ತಂಡವಾಗಿ ಕೆಲಸ ಮಾಡಿದ್ದೇವೆ. ‌50% ಮಳೆಯಲ್ಲಿ  ಶೂಟಿಂಗ್ ನಡೆಸಲಾಗಿದೆ. ಸಿನಿಮಾ ಅಂತಾ ಬಂದಾಗ ಮ್ಯೂಸಿಕ್ ಪ್ಲಸ್ ಪಾಯಿಂಟ್ ಆಗಬೇಕು. ಅದಕ್ಕಾಗಿ ಟ್ರೆಂಡಿಂಗ್ ಹಾಡು ನೀಡಬೇಕು ಎಂಬ ಉದ್ದೇಶದಿಂದ ರಿತ್ವಿಕ್ ಕೆಲಸ ಮಾಡಿದ್ದಾರೆ. ಇಷ್ಟು ಕೆಲಸಕ್ಕೆ ಬೆಂಬಲವಾಗಿ ನಿಂತವರು ನಮ್ಮ ನಿರ್ಮಾಪಕರು. ನಾಲ್ಕು ಭಾಷೆಯಲ್ಲಿ ಚಿತ್ರ ತೆರೆಗೆ ಬರ್ತಿದೆ. ಥಿಂಕ್ ಮ್ಯೂಸಿಕ್ ಖರೀದಿಸಿದ‌ ಮೊದಲ ಸಿನಿಮಾ ಹಾಡು ಪೀಟರ್. ಈ‌ ಮೂಲಕ ಪೀಟರ್ ಚಿತ್ರ ಮೊದಲ ಗೆಲುವು ಪಡೆದಿದೆ ಎಂದು ಹೇಳಿದರು.

ನಟ ರಾಜೇಶ್ ಧ್ರುವ ಮಾತನಾಡಿ, ಪೀಟರ್ ಜರ್ನಿ ವಿಶೇಷ. ನಾನು ಸುಕೇಶ್ ಅದ್ಭುತವಾಗಿ  ಏನೋ ಮಾಡಬೇಕು ಎಂದಾಗ ಕೈ ಜೋಡಿಸಿದ್ದು, ರವಿ ಸರ್ ಹಾಗೂ ರಾಕೇಶ್ ಸರ್.  ಕನ್ನಡದ ಮೊಟ್ಟ ಮೊದಲ ಸಿನಿಮಾ ಥಿಂಕ್ ಮ್ಯೂಸಿಕ್ ನಲ್ಲಿ ಬಿಡುಗಡೆಯಾಗುತ್ತಿರುವ ಆಲ್ಬಂ ನಲ್ಲಿ ಪೀಟರ್ ಮೊದಲನೆಯದ್ದು. ಒಂದೊಂದು ಬಿಟ್ ತಲೆ ಮೇಲೆ ಹೊಡೆದ ರೀತಿ, ಹೃದಯಕ್ಕೆ ನಾಟಿದ ರೀತಿ ಇದೆ. ಎಲ್ಲರ‌ ಪ್ಲೇ ಲೀಸ್ಟ್  ಕುಳಿತುಕೊಳ್ಳುವ ಹಾಡು ಇದಾಗಿದೆ. ಟೀಂ ಆಗಿ‌ ಎಲ್ಲರೂ ಕೆಲಸ ಮಾಡಿದ್ದೇವೆ ಎಂದರು.

ಥಿಂಕ್ ಮ್ಯೂಸಿಕ್ ‌ಕನ್ನಡ ಯೂಟ್ಯೂಬ್ ನಲ್ಲಿ ಸುಂದರಿ ಸುಂದರಿ ಎಂಬ ಗೀತೆಯನ್ನು ಅನಾವರಣ ಮಾಡಲಾಗಿದೆ. ಖ್ಯಾತ ಚಿತ್ರ ಸಾಹಿತಿ ನಾಗಾರ್ಜುನ್ ಶರ್ಮಾ ಬರೆದ ಹಾಡು ಇದಾಗಿದ್ದು, ಕಪಿಲ್ ಕಪಿಲನ್ ಹಾಗೂ ಸುನಿಧಿ ಗಣೇಶ್ ಧ್ವನಿಯಾಗಿರುವ ಸಾಂಗ್ ಗೆ ರಿತ್ವಿಕ್ ಮುರುಳೀಧರ್ ಸಂಗೀತ ಒದಗಿಸಿದ್ದಾರೆ. ಸುಂದರಿ ಗೀತೆಯಲ್ಲಿ ನಾಯಕ ರಾಜೇಶ್ ಧ್ರುವ ಹಾಗೂ ನಾಯಕಿ ರವೀಕ್ಷಾ ಮಿಂಚಿದ್ದಾರೆ. ನವ ಪ್ರೇಮಿಗಳಿಗೆ ಹೇಳಿ ಮಾಡಿಸಿದಂತಿರುವ ಹಾಡನ್ನು ಸುಂದರ ಜಾಗಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಏಕಕಾಲದಲ್ಲಿ ಕನ್ನಡದ ಜೊತೆಗೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಹಾಡನ್ನು ಬಿಡುಗಡೆ ಮಾಡಲಾಗಿದೆ.

ಪೀಟರ್ ಸಿನಿಮಾ ಸೆನ್ಸಿಟಿವ್ ಕ್ರೈಮ್ ಡ್ರಾಮಾ ಕಂಟೆಂಟ್ ಹೊಂದಿದ್ದು, ಅದರಲ್ಲಿಯೂ ಮುಖ್ಯವಾಗಿ ಚೆಂಡೆ ಮೇಳದ ಕಥಾವಸ್ತುವನ್ನು ಚಿತ್ರ ಒಳಗೊಂಡಿದೆ. ಕೇರಳದಲ್ಲಿ 300 ವರ್ಷಗಳಿಗೂ ಅಧಿಕ ಕಾಲದ ಇತಿಹಾಸ ಹೊಂದಿರುವ ಚೆಂಡೆ ಮೇಳವನ್ನು ಪೀಟರ್ ಸಿನಿಮಾದಲ್ಲಿ ಕಟ್ಟಿಕೊಡಲಾಗುತ್ತಿದೆ. ಯಕ್ಷಗಾನ, ಭೂತಕೋಲ, ದೇವರ ನರ್ತನದಲ್ಲಿ ಬಳಸುವ ಜಾನಪದೀಯ ವಾದ್ಯವಾಗಿರುವ ಚೆಂಡೆ ಮೇಳನ್ನು ಥಿಯೇಟರ್ ನಲ್ಲಿ ಎಕ್ಸ್ ಪಿರಿಯನ್ಸ್ ಮಾಡುವುದೇ ಚೆಂದ. ಅದನ್ನು ಪೀಟರ್ ಸಿನಿಮಾದಲ್ಲಿ ನಿರ್ದೇಶಕ ಸುಕೇಶ್ ಹೇಗೆ ಅಳವಡಿಸಲಿದ್ದಾರೆ ಎಂಬ ಕುತೂಹಲವಿದೆ.

ಚಿತ್ರದಲ್ಲಿ ರಾಜೇಶ್ ಧ್ರುವ, ಜಾಹ್ನವಿ ರಾಯಲ, ರವೀಕ್ಷಾ ಶೆಟ್ಟಿ, ಪ್ರತಿಮಾ ನಾಯಕ್, ರಘು ಪಾಂಡೇಶ್ವರ್, ರಾಮ ನಾಡಗೌಡ ತಾರಾಬಳಗದಲ್ಲಿದ್ದಾರೆ.  ಮಡಿಕೇರಿಯ ಭಾಗಮಂಡಲದ ಸುಂದರ ಜಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಅದ್ಧೂರಿ ಸೆಟ್ ಹಾಕಿ‌ ಮಳೆಗಾಲದ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.

ಕನ್ನಡ ಚಿತ್ರರಂಗದ ಖ್ಯಾತ ಸೌಂಡ್ ಇಂಜಿನಿಯರ್ ರವಿ ಹೀರೆಮಠ್ ಹಾಗೂ ರಾಕೇಶ್ ಹೆಗಡೆ ವೃದ್ಧಿ ಸ್ಟುಡಿಯೊಸ್ ಬ್ಯಾನರ್ ನಡಿ ಪೀಟರ್ ಸಿನಿಮಾ ನಿರ್ಮಿಸಿದ್ದಾರೆ. ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ, ನವೀನ್ ಶೆಟ್ಟಿ ಸಂಕಲನ, ದೇವರಾಜ್ ಕಲಾ ನಿರ್ದೇಶನ ಚಿತ್ರಕ್ಕಿದೆ. ಲವ್, ಆಕ್ಷನ್, ಎಮೋಷನ್, ಸೆಂಟಿಮೆಂಟ್ ಎಲ್ಲರದ‌ ಮಿಶ್ರಣ ಪೀಟರ್ ಸಿನಿಮಾದಲ್ಲಿದೆ.

Key words: ‘Peter, ‍Film, first song, released:

The post ‘ಪೀಟರ್’ ಮೊದಲ ಸಾಂಗ್ ರಿಲೀಸ್: ಸುಂದರಿ ಗೀತೆಯಲ್ಲಿ ರಾಜೇಶ್ ಧ್ರುವ, ರವೀಕ್ಷಾ ಶೆಟ್ಟಿ ಮಿಂಚಿಂಗ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

യു.പിയില്‍ ബി.ജെ.പി ഭരണത്തില്‍ തകര്‍ത്തത് 151 അബേദ്ക്കര്‍ പ്രതിമകള്‍: അഖിലേഷ് യാദവ്

ലഖ്‌നൗ: ബി.ജെ.പി ഭരണകാലത്ത് ഉത്തര്‍പ്രദേശില്‍ ഡോ. ബി.ആര്‍ അംബേദ്‌റുടെ 151 പ്രതിമകള്‍...

"தமிழ்நாடு, சர்க்கஸ் கும்பலிடம் மாட்டிக்கொண்டிருக்கிறது.!"- உதயநிதி ஸ்டாலின்

சென்னையில் நடைபெற்ற திருமண நிகழ்ச்சியில் எதிர்க்கட்சி தலைவர் உதயநிதி ஸ்டாலின் கலந்துகொண்டிருக்கிறார்....

No UPI-Only Cash: నో యూపీఐ ఓన్లీ క్యాష్.. దుకాణాల ముందు ప్రత్యక్షమవుతున్న బోర్డులు..

ఉత్తరప్రదేశ్‌లోని ఘజియాబాద్‌లో వ్యాపారులు కొత్త నిబంధనలకు వ్యతిరేకంగా వినూత్న నిరసనకు దిగారు....

ഹിന്ദു സംസ്‌കാരത്തെ അപമാനിക്കുന്നതും പാരമ്പര്യത്തെ തകര്‍ക്കുന്നതും; ഹിന്ദു വര്‍ഗീയതയ്‌ക്കെതിരായ ഹാമിദ് അന്‍സാരിയുടെ പരാമര്‍ശത്തിനെതിരെ യോഗി

ന്യൂഡല്‍ഹി: മുന്‍ ഉപരാഷ്ട്രപതി ഹമീദ് അന്‍സാരിയുടെ ‘ഹിന്ദു വര്‍ഗീയത’യുമായി ബന്ധപ്പെട്ട പരാമര്‍ശങ്ങള്‍ക്കെതിരെ...