24
September, 2026

A News 365Times Venture

24
Thursday
September, 2026

A News 365Times Venture

‘ದಸರಾ ಸಂಭ್ರಮದ ಜತೆಗೆ ಸುರಕ್ಷತೆಗೂ ನಿಗಾವಹಿಸಿ’ : ಸಾರ್ವಜನಿಕರಿಗೆ ಸೆಸ್ಕ್‌ ನಿಂದ ವಿಶೇಷ ಮನವಿ

Date:

ಮೈಸೂರು, ಸೆಪ್ಟೆಂಬರ್‌, 11,2025 (www.justkannada.in): ನಾಡಹಬ್ಬ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಅಳವಡಿಸಿರುವ ವಿದ್ಯುತ್‌ ದೀಪಾಲಂಕಾರಗಳನ್ನು ಕಣ್ತುಂಬಿಕೊಳ್ಳುವ ಜತೆಗೆ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡುವಂತೆ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ (ಸೆಸ್ಕ್‌) ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ದಸರಾ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಮೈಸೂರಿನ ಪ್ರಮುಖ ರಸ್ತೆಗಳು, ವೃತ್ತಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅತ್ಯಾಕರ್ಷಕ ವಿದ್ಯುತ್‌ ದೀಪಾಲಂಕಾರ ಮಾಡಲಾಗುತ್ತಿದೆ. ನಗರದ ಸೌಂದರ್ಯ ಹೆಚ್ಚಿಸುವ ಹಾಗೂ ದಸರೆಯ ಸಂಭ್ರಮ, ಸಡಗರವನ್ನು ಇಮ್ಮಡಿಗೊಳಿಸುವ ವಿದ್ಯುತ್‌ ದೀಪಾಲಂಕಾರ ವೀಕ್ಷಿಸಲು ಲಕ್ಷಾಂತರ ಜನರು ಆಗಮಿಸುತ್ತಾರೆ. ಆದ್ದರಿಂದ ದೀಪಾಲಂಕಾರದ ಅಂದ ಕಣ್ತುಂಬಿಕೊಳ್ಳುವ ಸಂದರ್ಭದಲ್ಲಿ ಸುರಕ್ಷತೆಗೂ ಆದ್ಯತೆ ನೀಡುವುದು ಅತ್ಯಂತ ಅವಶ್ಯಕವಾಗಿದೆ ಎಂದು ಹೇಳಿದೆ.

ವಿದ್ಯುತ್‌ ಗ್ರಾಹಕರು ಹಾಗೂ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡುತ್ತಿರುವ ಸೆಸ್ಕ್‌ ವತಿಯಿಂದಲೂ ಸಾಕಷ್ಟು ಸುರಕ್ಷತಾ ಕ್ರಮ ಕೈಗೊಂಡು ದಸರಾ ದೀಪಾಲಂಕಾರ ಮಾಡಲಾಗಿದೆ. ಆದರೂ ಸುರಕ್ಷತೆಯ ಬಗ್ಗೆ ಹೆಚ್ಚಿನ ನಿಗಾವಹಿಸುವುದು ಸಾರ್ವಜನಿಕರ ಕರ್ತವ್ಯವಾಗಿದೆ. ಇದಕ್ಕಾಗಿ ನಿಗಮದ ವತಿಯಿಂದ ಸಾರ್ವಜನಿಕರ ಸುರಕ್ಷತೆ ಕೆಲವು ಸಲಹೆಗಳನ್ನು ನೀಡಲಾಗಿದ್ದು, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ದಸರಾ ದೀಪಾಲಂಕಾರದ ಸಂಭ್ರಮವನ್ನು ನಿರಾತಂಕವಾಗಿ ಆನಂದಿಸುವಂತೆ ಸೆಸ್ಕ್‌ ಪ್ರಕಟಣೆಯಲ್ಲಿ ಕೋರಿದೆ.

ಈ ಕುರಿತು ಮಾತನಾಡಿರುವ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್‌ ರಾಜು ಅವರು,  ಗ್ರಾಹಕರು ಮತ್ತು ಸಾರ್ವಜನಿಕರ ಸುರಕ್ಷತೆಗೆ ಸೆಸ್ಕ್‌ ಪ್ರಥಮ ಆದ್ಯತೆ ನೀಡುತ್ತದೆ. ಸಾರ್ವಜನಿಕರು ದಸರಾ ದೀಪಾಲಂಕಾರ ಕಣ್ತುಂಬಿಕೊಳ್ಳುವಾಗ ಸುರಕ್ಷತೆಗೂ ನಿಗಾವಹಿಸಬೇಕು. ಆದ್ದರಿಂದ ದೀಪಾಲಂಕಾರದ ಕಂಬಗಳನ್ನು ಮುಟ್ಟದೆ, ಅಂತರ ಕಾಯ್ದುಕೊಳ್ಳಬೇಕಿದೆ. ವಿಶೇಷವಾಗಿ ಮಳೆಯ ಸಂದರ್ಭದಲ್ಲಿ ಹೆಚ್ಚಿನ ಮುಂಜಾಗ್ರತೆವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ಸುರಕ್ಷತಾ ಸಲಹೆಗಳು

* ದೀಪಾಲಂಕಾರದ ಕಂಬಗಳನ್ನು ಮುಟ್ಟದೆ, ಅಂತರ ಕಾಯ್ದುಕೊಳ್ಳಿ.

* ದೀಪಾಲಂಕಾರದ ಕಂಬಗಳ ಹತ್ತಿರ ನಿಂತು ಫೋಟೋ/ವಿಡಿಯೋ ಶೂಟ್‌ ಮಾಡುವುದನ್ನು ತಪ್ಪಿಸಿ.

* ಮಳೆ ಸಂದರ್ಭದಲ್ಲಿ ವಿದ್ಯುತ್‌/ದೀಪಾಲಂಕಾರದ ಕಂಬಗಳ ಹತ್ತಿರ ಹೋಗದೆ ಎಚ್ಚರವಹಿಸಿ.

* ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ದೀಪಾಲಂಕಾರಕ್ಕಾಗಿ ಕಂಬಗಳನ್ನು ಅಳವಡಿಸಿದ್ದು, ಕೆಲವು ಕಡೆಗಳಲ್ಲಿ ದೀಪಾಲಂಕಾರದ ಪ್ರತಿಕೃತಿಗಳನ್ನು ಇರಿಸಲಾಗಿದೆ. ಆದ್ದರಿಂದ ವಾಹನ ಸವಾರರು ಮತ್ತು ಪಾದಚಾರಿಗಳು ಇವುಗಳನ್ನು ಗಮನಿಸಿ ಸುರಕ್ಷಿತವಾಗಿ ಸಂಚರಿಸಲು ಕೋರಲಾಗಿದೆ.

* ವಿದ್ಯುತ್‌ ಸಂಬಂಧಿತ ದೂರು/ದೀಪಾಲಂಕಾರದಿಂದ ತೊಂದರೆ ಆದಲ್ಲಿ 24×7 ಸಹಾಯವಾಣಿ 1912 ಸಂಪರ್ಕಿಸಿ.

Key words: Mysore Dasara, Lighting, safety, public, CESC

The post ‘ದಸರಾ ಸಂಭ್ರಮದ ಜತೆಗೆ ಸುರಕ್ಷತೆಗೂ ನಿಗಾವಹಿಸಿ’ : ಸಾರ್ವಜನಿಕರಿಗೆ ಸೆಸ್ಕ್‌ ನಿಂದ ವಿಶೇಷ ಮನವಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഓസ്‌ട്രേലിയന്‍ സര്‍ക്കാര്‍ ഹെല്‍ത്ത് കെയര്‍ ഡാറ്റാബേസ് ഹാക്ക് ചെയ്ത് ഓപ്പണ്‍ എ.ഐ ഏജന്റ്: അറിഞ്ഞത് മാസങ്ങള്‍ക്കുശേഷം

ന്യൂയോര്‍ക്ക്: ഓസ്‌ട്രേലിയയുടെ ആരോഗ്യവകുപ്പിന്റെ വെബ്‌സൈറ്റ് ഹാക്ക് ചെയ്ത് സ്വകാര്യഡാറ്റയിലേക്ക് നുഴഞ്ഞുകയറി ഓപ്പണ്‍...

தேர்தல் ஆணையம்: “இதனால்தான் இந்த விவகாரம் சர்ச்சையாகியுள்ளது..!" – முன்னாள் ஆணையர் சொல்வதென்ன?

தேர்தல் ஆணையத்தில் பெரும்பான்மை உறுப்பினர்களின் ஆதரவோ அல்லது ஒருமித்த கருத்தோ இன்றி...

AP Liquor Shops: లిక్కర్ షాపులపై కీలక నిర్ణయం.. ఇక రెన్యువల్ గడువు పొడిగింపు లేదు..!

AP Liquor Shops: ఆంధ్రప్రదేశ్‌లో 2026–27 ఎక్సైజ్ సంవత్సరానికి ఏ4 మద్యం...

കുടുംബ കലഹങ്ങള്‍ വേണ്ട; എ.ഐ ക്യാമറ നിയമ ലംഘന നോട്ടീസുകളില്‍ ചിത്രങ്ങള്‍ ഒഴിവാക്കാന്‍ എം.വി.ഡി

തിരുവനന്തപുരം: മോട്ടോര്‍ വാഹന വകുപ്പിന്റെ എ.ഐ ക്യാമറകള്‍ വഴിയുള്ള നിയമലംഘനങ്ങള്‍ പരിശോധിക്കുന്നതിനുള്ള...