1
May, 2026

A News 365Times Venture

1
Friday
May, 2026

A News 365Times Venture

ಪೊಲೀಸ್ ಪೇದೆ ಮೇಲೆ ಮಾರಣಾಂತಿಕ ಹಲ್ಲೆಯಾದ್ರೂ ಡಮ್ಮಿ ಕೇಸ್: ಸೇಡು ತೀರಿಸಿಕೊಳ್ಳಲು‌ ಮುಂದಾದ್ರಾ ಇನ್ಸ್ ಪೆಕ್ಟರ್?

Date:

ಮಂಡ್ಯ,ಆಗಸ್ಟ್,5,2025 (www.justkannada.in): ಪೊಲೀಸ್ ಪೇದೆ ಸೈಯ್ಯದ್ ಮನ್ಸೂರ್  ಮೇಲೆ ಮಾರಣಾಂತಿಕ ಹಲ್ಲೆಯಾದರೂ ಸಹ  ಕೆ.ಆರ್.ಪೇಟೆ ಇನ್ಸ್ ಪೆಕ್ಟರ್ ಡಮ್ಮಿ ಕೇಸ್ ಹಾಕಿ ಕೈ ತೊಳೆದುಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಸೈಯ್ಯದ್ ಮನ್ಸೂರ್ ರಾಮನಗರ ಡಿಸಿ ಗನ್‌ ಮ್ಯಾನ್ ಆಗಿದ್ದು, ಬೈಕ್ ರೇಸ್ ವೀಕ್ಷಣೆ ವೇಳೆ ಕಾಲು ಟಚ್ ಮಾಡಿದ್ದಕ್ಕೆ ಕಿರಿಕ್  ಆಗಿ ಕಿಡಿಗೇಡಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ನಡುವೆ ಮಾರಣಾಂತಿಕ ಹಲ್ಲೆ ನಡೆಸಿರುವ ವಿಡಿಯೋ ಇದ್ದರೂ ಪೇದೆ ಸೈಯ್ಯದ್ ಮನ್ಸೂರ್ ರಕ್ಷಣೆಗೆ ಮುಂದಾಗಬೇಕಿದ್ದ ಕೆ.ಆರ್.ಪೇಟೆ ಪೊಲೀಸ್ ಇನ್ಸ್ ಪೆಕ್ಟರ್ ಡಮ್ಮಿ ಕೇಸ್ ಹಾಕಿದ್ದಾರೆ ಎನ್ನಲಾಗಿದೆ.  ಸೈಯ್ಯದ್ ಮನ್ಸೂರ್  ಮೇಲೆ ಇಪ್ಪತ್ತಕ್ಕೂ‌ ಹೆಚ್ಚು ಮಂದಿ ಹಲ್ಲೆ ನಡೆಸಿರೂ  ಕೇವಲ ನಾಲ್ಕೈದು ಮಂದಿ ಮೇಲೆ ಮಾತ್ರ ಎಫ್‌ಐ ಆರ್ ದಾಖಲಿಸಿದ್ದಾರೆ.

ಹಲ್ಲೆಗೆ ಒಳಗಾದ ಪೇದೆ ಸಯ್ಯದ್ ಮನ್ಸೂರ್ ಅಕ್ಕ ಹಾಗೂ ತಮ್ಮ ಕೆ.ಆರ್.ಪೇಟೆಯಲ್ಲಿಯೇ ಪೇದೆಯಾಗಿ ಕೆಲಸ ಮಾಡುತ್ತಿದ್ದು ಅಕ್ಕ- ತಮ್ಮ ಇಬ್ಬರ ಮೇಲಿನ‌ ಕೋಪಕ್ಕೆ ಇನ್ಸ್ ಪೆಕ್ಟರ್ ಸೇಡು ತೀರಿಸಿಕೊಳ್ಳಲು‌ ಮುಂದಾದರೇ? ಎಂಬ ಪ್ರಶ್ನೆ ಉದ್ಬವಿಸಿದೆ.

ಪೊಲೀಸ್ ಕುಟುಂಬದವರೇ ಆದರೂ ಪೊಲೀಸರ ರಕ್ಷಣೆಗೆ ಮುಂದಾಗಿಲ್ಲ. ಪಾಚಿಗೆ ಪಾಚಿ ವೈರಿ ಅನ್ನೋ ಹಾಗೆ ಪೊಲೀಸ್ ಕುಟುಂಬಕ್ಕೆ ಪೊಲೀಸರೇ ವೈರಿಯೇ ಎಂಬಂತಾಗಿದೆ. ಪೊಲೀಸರ ನಡೆಯಿಂದಾಗಿ ಹಲ್ಲೆಗೊಳಗಾದ ಪೇದೆಯ ಕುಟುಂಬಸ್ಥರು ಅಸಹಾಯಕ ಸ್ಥಿತಿಯಲ್ಲಿದ್ದು, ಹಲ್ಲೆಕೋರ ಆರೋಪಿಗಳ‌ ಪರ‌ ಪೊಲೀಸ್ ಇನ್ಸ್ ಪೆಕ್ಟರ್ ಇದ್ದಾರೆಯೇ ಎಂಬ ಅನುಮಾನ ಮೂಡಿದೆ.

ಇನ್ನು ಸಯ್ಯದ್ ಮನ್ಸೂರ್ ಮೇಲೆ ಹಲ್ಲೆ ಮಾಡುತ್ತಿದ್ದರೂ ಜನ ಮೂಖ ಪ್ರೇಕ್ಷಕರಂತೆ ನಿಂತು ನೋಡುತ್ತಿದ್ದರು ಪೊಲೀಸರು ಕೈಕಟ್ಟಿ ನಿಂತಿದ್ದರು ಎನ್ನಲಾಗಿದೆ. ಮಾರಣಾಂತಿಕ ಹಲ್ಲೆ ಮಾಡುತ್ತಿದ್ದ ದೃಶ್ಯ ಡ್ರೋಣ್ ಸೆರೆಯಾಗುತ್ತಿದ್ದ ಈ ಹಿನ್ನೆಲೆಯಲ್ಲಿ  ಅದನ್ನ ನೋಡಿ ಕಿಡಿಗೇಡಿಗಳು ಓಡಿ ಹೋಗಿದ್ದರು. ಹಲ್ಲೆಗೊಳಗಾಗಿ ತೀವ್ರ ರಕ್ತಸ್ರವಾದಿಂದ ನರಳಾಡುತ್ತಿದ್ದ ಪೇದೆ ಮನ್ಸೂರ್ ರನ್ನು ರಕ್ಷಿಸಿ ಮೈಸೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

Key words: Dummy Case, deadly ,assault ,police , Inspector, revenge

The post ಪೊಲೀಸ್ ಪೇದೆ ಮೇಲೆ ಮಾರಣಾಂತಿಕ ಹಲ್ಲೆಯಾದ್ರೂ ಡಮ್ಮಿ ಕೇಸ್: ಸೇಡು ತೀರಿಸಿಕೊಳ್ಳಲು‌ ಮುಂದಾದ್ರಾ ಇನ್ಸ್ ಪೆಕ್ಟರ್? appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

നെതന്യാഹുവിന് മാപ്പ് നല്‍കാന്‍ ഇസ്രഈല്‍ പ്രസിഡന്റിന് മേല്‍ ട്രംപിന്റെ കടുത്ത സമ്മര്‍ദം; ‘മാപ്പ് നല്‍കിയാല്‍ ഹെര്‍സോഗ് നാഷണല്‍ ഹീറോയാകും’

  വാഷിങ്ടണ്‍: അഴിമതിക്കേസുകളില്‍ വിചാരണ നേരിടുന്ന ഇസ്രഈല്‍ പ്രധാനമന്ത്രി ബെഞ്ചമിന്‍ നെതന്യാഹുവിന്...

'மோடியின் வசூல் வேட்டை தொடர்கிறது' – வணிக சிலிண்டர் விலை உயர்வுக்கு காங்கிரஸ் கண்டனம்

வணிகப் பயன்பாட்டிற்கான சிலிண்டர் விலை ஒரே நாளில் அதிரடியாக உயர்ந்துள்ளதால் பொதுமக்கள்...

Shocking: 55 ఏళ్ల గ్రామపెద్దతో లేచిపోయిన 22 ఏళ్ల భార్య..

Shocking: 22 ఏళ్ల వివాహిత మహిళ, తన కన్నా 33 ఏళ్ల...

ಎಲೆಕ್ಷನ್ ಮುಗಿದ ತಕ್ಷಣವೇ ಬೆಲೆ ಏರಿಕೆ: ಕೇಂದ್ರದ ವಿರುದ್ದ ಡಿಸಿಎಂ ಡಿಕೆಶಿ ಗುಡುಗು

ಬೆಂಗಳೂರು,ಮೇ,1,2026 (www.justkannada.in):  ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 993 ರೂ....