5
May, 2026

A News 365Times Venture

5
Tuesday
May, 2026

A News 365Times Venture

ಡಿಸೆಂಬರ್ ವೇಳೆಗೆ ಕಾಂಗ್ರೆಸ್ ಸರ್ಕಾರ ಪತನ- ಸಂಸದ ಗೋವಿಂದ ಕಾರಜೋಳ

Date:

ಬಾಗಲಕೋಟೆ,ಜುಲೈ,1,2025 (www.justkannada.in): ಕಾಂಗ್ರೆಸ್ ಸರ್ಕಾರ ಡಿಸೆಂಬರ್ 31 ದಾಟುವುದಿಲ್ಲ, ಸರ್ಕಾರ ಪತನವಾಗುತ್ತದೆ ಎಂದು  ಮಾಜಿ ಡಿಸಿಎಂ ,ಸಂಸದ ಗೋವಿಂದ ಕಾರಜೋಳ ಭವಿಷ್ಯ ನುಡಿದರು.

ಬಾಗಲಕೋಟೆಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಗೋವಿಂದ ಕಾರಜೋಳ, ಕಾಂಗ್ರೆಸ್ ನ  ಹಿರಿಯನಾಯಕರಲ್ಲಿ ಮಂತ್ರಿ ಮಾಡಿಲ್ಲ ಅನ್ನೋ ಅಸಮಧಾನ ಇದೆ. ಶಾಸಕರಾದ ಬಿ.ಆರ್ ಪಾಟೀಲ್, ಬಸವರಾಜ ರಾಯರೆಡ್ಡಿ, ಆರ್.ವಿ ದೇಶಪಾಂಡೆ, ಜಯಚಂದ್ರ ಅಂತವರಲ್ಲಿ ಅಸಮಾಧಾನವಿದೆ.  ಈ ಕಾಂಗ್ರೆಸ್ ಸರ್ಕಾರ ಇದ್ರೆ ಎಷ್ಟು ಹೋದ್ರೆ ಎಷ್ಟು, ಸರ್ಕಾರದಲ್ಲಿ ನಮಗೆ ಗೌರವ ಇಲ್ಲ. ಹೀಗಾಗಿ ಈ ಸರ್ಕಾರ ಬಹಳ ದಿವಸ ಉಳಿಯೋದಿಲ್ಲ ಎಂದರು.

ಸಿಎಂ ಹುದ್ದೆಗೆ ನಾಲ್ಕು ಗುಂಪುಗಳಾಗಿ ಕಚ್ಚಾಟ ಶುರುವಾಗಿದೆ. ದಲಿತ ಸಿಎಂ ಆಗಬೇಕು ,ಅದ್ರಲ್ಲಿ ಎಸ್ ಸಿ ಆಗಬೇಕು, ಎಸ್ ಟಿ ಆಗಬೇಕು ಅನ್ನೊ ಕಿತ್ತಾಟ. ಎರಡನೇಯದಾಗಿ ಲಿಂಗಾಯತರು ಸಿಎಂ ಆಗಬೇಕು ಅಂತಾ ಹೈ ಕಮಾಂಡ್ ಮೇಲೆ ಒತ್ತಡ. ಮೂರನೇಯದ್ದಾಗಿ ಒಕ್ಕಲಿಗರಿಗೆ ಅವಕಾಶ ಸಿಕ್ಕಿಲ್ಲ, ಡಿಕೆ ಶಿವಕುಮಾರ್ ನಾ ಸಿಎಂ ಮಾಡಲು ಜಟಾಪಟಿ. ಇವರೆಲ್ಲರ ನಡುವೆ ಇದೀಗ ಅಲ್ಪಸಂಖ್ಯಾತರು ಸಭೆ ಮೂಲಕ ಸಿಎಂ ಖುರ್ಚಿ ನಮ್ಮ ಸಮುದಾಯಕ್ಕೆ ನೀಡಿ ಅಂತಿದೆ. ಹೀಗೆ ಕಾಂಗ್ರೆಸ್ ನಲ್ಲಿ ನಾಲ್ಕು ಗುಂಪುಗಳಾಗಿ ಸಿಎಂ ಖುರ್ಚಿಗಾಗಿ ತಿಕ್ಕಾಟ ನಡೆಯುತ್ತಿದೆ. ಸತ್ತ ಹೆಣ ತಿನ್ನಲಿಕ್ಕೆ ರಣಹದ್ದುಗಳು ಹೇಗೆ ಕಚ್ಚಾಡುತ್ತಿರುತ್ತವೆ ಹಾಗೆ. ಕಾಂಗ್ರೆಸ್ ನಲ್ಲಿ ಸಿಎಂ ಖುರ್ಚಿಗಾಗಿ ಕಚ್ಚಾಟ ಶುರುವಾಗಿದೆ. ಆಡಳಿತದ ಮೇಲೆ ಸರ್ಕಾರದ ಹಿಡಿತ ಕೈ ತಪ್ಪಿದೆ ಎಂದು ಆರೋಪಿಸಿದರು.

ಎಸ್ ಸಿ ಎಸ್ ಟಿ ಅನುದಾನ ಸರ್ಕಾರ ದುರುಪಯೋಗ ಮಾಡಿಕೊಂಡಿದೆ. ಇದೊಂದು ಬಂಡ ಸರ್ಕಾರ. ಈ ಸರ್ಕಾರ ಹೋಗಬೇಕು ಎಂದು  ಕಾಂಗ್ರೆಸ್ ಎಲ್ಲ ಹಿರಿಯ ನಾಯಕರು ತೀರ್ಮಾನ ಮಾಡಿದ್ದಾರೆ. ಈ ಸರ್ಕಾರ ಡಿಸೆಂಬರ್ 31 ದಾಟೊದಿಲ್ಲ, ಸರ್ಕಾರ ಪತನವಾಗುತ್ತೆ ಎಂದು ಸಂಸದ ಕಾರಜೋಳ ಹೇಳಿದರು.vtu

Key words: Congress government, fall, December, MP, Govinda Karajola

The post ಡಿಸೆಂಬರ್ ವೇಳೆಗೆ ಕಾಂಗ್ರೆಸ್ ಸರ್ಕಾರ ಪತನ- ಸಂಸದ ಗೋವಿಂದ ಕಾರಜೋಳ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

പാർട്ടിയിലും, സഭയിലും സീനിയർ;മുഖ്യമന്ത്രിപദത്തിനായി വാദം മുഴക്കി ചെന്നിത്തല

തിരുവനന്തപുരം: കോൺഗ്രസിൽ മുഖ്യമന്ത്രി ചർച്ചകൾ ആരംഭിക്കാനിരിക്കെ അവകാശവാദങ്ങളുമായി രമേശ് ചെന്നിത്തല. പാർട്ടിയിലും...

TVK: "விஜய்யுடன் ராகுல் காந்தி இணைந்து பிரசாரம் செய்திருந்தால்…" – கிரிஷ் சோடங்கர் சொல்வது என்ன?

நடந்து முடிந்துள்ள தமிழக சட்டமன்றத் தேர்தலில் தி.மு.க. கட்சி தோல்வியைத் தழுவிய...

TVK ಶಾಸಕಾಂಗ ಪಕ್ಷದ ನಾಯಕನಾಗಿ ನಟ ವಿಜಯ್ ಆಯ್ಕೆ

ಚೆನ್ನೈ,ಮೇ,5,2026 (www.justkannada.in): ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ...

എന്നെ ജയിപ്പിച്ചത് ഹിന്ദുക്കള്‍, അവര്‍ക്ക് വേണ്ടി പ്രവര്‍ത്തിക്കും; മുസ്‌ലിം വോട്ടുകള്‍ പൂര്‍ണമായും തൃണമൂലിന് പോയി: സുവേന്ദു അധികാരി

ഹാല്‍ദിയ: പശ്ചിമ ബംഗാള്‍ നിയമസഭാ തെരഞ്ഞെടുപ്പില്‍ തൃണമൂല്‍ കോണ്‍ഗ്രസിനെ പരാജയപ്പെടുത്തി ബി.ജെ.പി...