ಕಲಬುರುಗಿ,ಜೂನ್,14,2025 (www.justkannada.in): ಆರ್ ಸಿಬಿ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಳ್ತುಳಿತದಿಂದ 11 ಮಂದಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧ ಪ್ರತಿಕ್ರಿಯಿಸಿದ ಕಾನೂನು ಸಚಿವ ಹೆಚ್.ಕೆ ಪಾಟೀಲ್, ಕ್ರೌಡ್ ನಿರ್ವಹಣೆಗೆ ವಿಶೇಷ ಕಾನೂನಿನ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಹೆಚ್.ಕೆ ಪಾಟೀಲ್, ಯಾವುದೇ ಸ್ಥಳದಲ್ಲಿ ಕ್ರೌಡ್ ನಿರ್ವಹಣೆ ಸಲುವಾಗಿ ವಿಶೇಷ ಕಾನೂನು ಅವಶ್ಯಕತೆ ಇದೆ. ನಮ್ಮ ಇಲಾಖೆ ಕರಡು ಮಸೂದೆ ಸಿದ್ದ ಮಾಡಿದೆ. ಮುಂದಿನ ಸಂಪುಟ ಸಭೆಯಲ್ಲಿ ಒಪ್ಪಿದ್ರೆ ಕಾರ್ಯರೂಪಕ್ಕೆ ಬರುತ್ತದೆ ಎಂದರು.
ಇನ್ನು ರೇಸ್ ಕೋರ್ಸ್ ಸ್ಥಳಾಂತರ ಮಾಡುವ ಬಗ್ಗೆ ತೀರ್ಮಾನಿಸಲಾಗುತ್ತದೆ. ರೇಸ್ ಕೋರ್ಸ್ ಅಧಿಕಾರಿಗಳನ್ನ ಕರೆದು ಸಿಎಂ ಮಾತನಾಡಿದ್ದಾರೆ. ಸ್ಟೇಡಿಯಂ ಕೂಡ ಬೇರೆ ಕಡೆ ಸ್ಥಳಾಂತರ ಬಗ್ಗೆ ಚರ್ಚೆಯಾಗುತ್ತಿದೆ ಎಂದು ಹೆಚ್.ಕೆ ಪಾಟೀಲ್ ತಿಳಿಸಿದರು.
Key words: special law, crowd management, Minister, K.H. Patil
The post ಕ್ರೌಡ್ ನಿರ್ವಹಣೆಗೆ ವಿಶೇಷ ಕಾನೂನಿನ ಅವಶ್ಯಕತೆ: ಕರಡು ಮಸೂದೆ ಸಿದ್ದ- ಸಚಿವ ಕೆ.ಎಚ್ ಪಾಟೀಲ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.