30
April, 2026

A News 365Times Venture

30
Thursday
April, 2026

A News 365Times Venture

ಮೈಸೂರು: ಅನುಮಾನಾಸ್ಪದ ಸ್ಥಳಗಳ ಮೇಲೆ ಅಬಕಾರಿ ದಾಳಿ.

Date:

ಮೈಸೂರು, ಏಪ್ರಿಲ್, 29,2026 (www.justkannada.in):  ಅಬಕಾರಿ ಇಲಾಖೆಯ ವತಿಯಿಂದ ಮೈಸೂರು ನಗರ ಜಿಲ್ಲೆಯ ವಿವಿಧ ಅನುಮಾನಾಸ್ಪದ ಸ್ಥಳಗಳಲ್ಲಿ ಇಂದು ವ್ಯಾಪಕ ದಾಳಿ ನಡೆಸಲಾಗಿದೆ.

ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ), ಮೈಸೂರು ವಿಭಾಗದ ನಿರ್ದೇಶನದ ಮೇರೆಗೆ, ಅಬಕಾರಿ ಉಪ ಅಧೀಕ್ಷಕ ಹೆಚ್.ಕೆ. ರಮೇಶ್ ಅವರ ನೇತೃತ್ವದಲ್ಲಿ ದಾಳಿ ಕಾರ್ಯಾಚರಣೆ ನಡೆದಿದೆ. ಈ ವೇಳೆ ಅಬಕಾರಿ ನಿರೀಕ್ಷಕರು, ಉಪ ನಿರೀಕ್ಷಕರು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ಮೈಸೂರು ನಗರದ ಬನ್ನಿಮಂಟಪ ಬಡಾವಣೆ, ರಾಡಿಕೋ ಡಿಸ್ಟಿಲರಿ ಸುತ್ತಮುತ್ತ, ಎನ್.ಆರ್. ಮೊಹಲ್ಲಾ ಮತ್ತು ಸಿ.ವಿ. ಮೊಹಲ್ಲಾ ಪ್ರದೇಶಗಳಲ್ಲಿನ ಗೋಡೌನ್‌ ಗಳು, ಗುಜರಿ ಅಂಗಡಿಗಳು ಸೇರಿದಂತೆ ಹಲವು ಅನುಮಾನಾಸ್ಪದ ಸ್ಥಳಗಳನ್ನು ತಪಾಸಣೆ ಮಾಡಲಾಯಿತು.

ಆದರೆ ದಾಳಿಯ ಸಂದರ್ಭದಲ್ಲಿ ಯಾವುದೇ ಅಬಕಾರಿ ವಸ್ತುಗಳು ಅಥವಾ ಮಾದಕ ಪದಾರ್ಥಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾರ್ಯಾಚರಣೆಯ ಛಾಯಾಚಿತ್ರ ಹಾಗೂ ವಿಡಿಯೋಗಳನ್ನು ದಾಖಲಿಸಿ ಸಂಬಂಧಿತ ಇಲಾಖೆಗಳಿಗೆ ಸಲ್ಲಿಸಲಾಗಿದೆ.

Key words: Mysore, Excise, raids, suspicious places.

The post ಮೈಸೂರು: ಅನುಮಾನಾಸ್ಪದ ಸ್ಥಳಗಳ ಮೇಲೆ ಅಬಕಾರಿ ದಾಳಿ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

തമിഴ്‌നാട്ടില്‍ സ്റ്റാലിന്‍ തുടരുമെന്ന് എക്‌സിറ്റ് പോളുകള്‍; 120 സീറ്റുമായി ടി.വി.കെ നിര്‍ണായക ശക്തിയാകുമെന്നും സര്‍വേ

  ചെന്നൈ: തമിഴ്‌നാട്ടില്‍ ഭരണകക്ഷിയായ സ്റ്റാലിന്റെ ഡി.എം.കെ ഭരണം തുടരുമെന്ന് പ്രവചിച്ച്...

பினராயி 3.0-க்கு `நோ' சொல்லுகிறதா கேரளம்? – தேர்தலுக்குப் பிந்தைய கருத்துக்கணிப்புகள் சொல்வதென்ன?

கேரள மாநிலத்தில் மொத்தம் உள்ள 140 சட்டசபை தொகுதிகளுக்கும் ஒரே கட்டமாக...

LRS Fee : తెలంగాణ ప్రజలకు భారీ ఊరట.. LRS ఫీజుపై ప్రభుత్వం నిర్ణయం..!

తెలంగాణ రాష్ట్రంలో అనుమతి లేని మరియు అక్రమ లేఅవుట్ల క్రమబద్ధీకరణ (Layout...

ഇനിയും വര്‍ഷങ്ങളോളം യുദ്ധം ചെയ്യാന്‍ ശേഷിയുണ്ട്; മിസൈലുകളും ഡ്രോണുകളും സജ്ജമെന്ന് ഇറാന്‍

  ടെഹ്‌റാന്‍: വര്‍ഷങ്ങളോളം നീണ്ടുനില്‍ക്കുന്ന യുദ്ധത്തിനാവശ്യമായ ആയുധശേഖരം തങ്ങലുടെ പക്കലുണ്ടെന്ന് മുതിര്‍ന്ന...