14
June, 2025

A News 365Times Venture

14
Saturday
June, 2025

A News 365Times Venture

ದೂರದರ್ಶನ ಚಂದನ ವಾಹಿನಿಯಲ್ಲಿ ಸ್ಟ್ರಿಂಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

Date:

ಬೆಂಗಳೂರು ಗ್ರಾಮಾಂತರ ಮೇ, 21,2025 (www.justkannada.in):  ಬೆಂಗಳೂರಿನ ದೂರದರ್ಶನ ಕೇಂದ್ರ / ಚಂದನ ವಾಹಿನಿಯಲ್ಲಿ  ಅರೆಕಾಲಿಕ ವರದಿಗಾರರು(ಸ್ಟ್ರಿಂಜರ್)ಹುದ್ದೆಗಳಿಗೆ ರಾಜ್ಯದ  29 ಜಿಲ್ಲೆಗಳಲ್ಲಿ ಎರಡು ವರ್ಷಗಳ ಅವಧಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಅರ್ಹತೆ ಹಾಗೂ ಕಾರ್ಯಾನುಭವ

ಪತ್ರಿಕೋದ್ಯಮ ವಿಷಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಪಡೆದಿರಬೇಕು. ಉತ್ತಮವಾದ ಸುದ್ದಿ ತಯಾರಿಸುವ ಸೂಕ್ಷ್ಮತೆ ಹೊಂದಿರಬೇಕು, ಜೊತೆಗೆ ಕ್ಯಾಮೆರಾ ಬಳಕೆಯ ಕೌಶಲ್ಯವನ್ನು ಹೊಂದಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕ್ಯಾಮೆರಾ ಮತ್ತು ಅಗತ್ಯ ತಂತ್ರಜ್ಞಾನವನ್ನು ಹೊಂದಿರಬೇಕು. ಎಚ್ಡಿ/4ಕೆ/ಯುಎಚ್ಡಿ/ಎನ್ಎಕ್ಸ್ ಫಾರ್ಮೆಟ್ ವಿಡಿಯೋ ಕ್ಯಾಮೆರಾ ಹೊಂದಿರುವ ಜೊತೆಗೆ ಸುದ್ದಿ ಕಳುಹಿಸಲು ಬೇಕಾದ ಎಲ್ಲಾ ಸೌಲಭ್ಯವನ್ನು  ಹೊಂದಿರಬೇಕು.

ನೇಮಕಾತಿಯ ಪ್ರಕ್ರಿಯೆ

1) ಅರ್ಜಿಗಳನ್ನು ಶಾರ್ಟ್ ಲಿಸ್ಟ್ ಮಾಡುವಿಕೆ,

2) ಶಾರ್ಟ್ ಲಿಸ್ಟ್ ಆದವರಿಗೆ ಸುದ್ದಿ ಕವರೇಜ್ ಮಾಡುವ ಪರೀಕ್ಷೆ,

3) ಸಂದರ್ಶನ,

4) ದಾಖಲೆಗಳು, ಕ್ಯಾಮೆರಾ, ಇತರೆ ಪರಿಕರಗಳ ಪರಿಶೀಲನೆ,

5) ಅಂತಿಮ ಪಟ್ಟಿ ಸಿದ್ಧತೆ,

ಸೇರಿದಂತೆ ಒಟ್ಟು ಐದು ಹಂತದ ಪರೀಕ್ಷೆಗಳು ಇರಲಿವೆ. ಹುದ್ದೆಗೆ ಅರ್ಜಿ ಸಲ್ಲಿಸಲು ಜೂನ್ 6 ಕೊನೆಯ ದಿನ.

ವೇತನ ವಿವರ

ಪರಿಷ್ಕೃತ ವೇತನ ನಿಯಮ ಪ್ರಕಾರ ನಿಯೋಜಿಸಲಾದ ಸ್ಥಳೀಯ ಸುದ್ದಿಗೆ ರೂ.1500, 2ನೇ ಸುದ್ದಿಗೆ  ರೂ.1000,  ಹೊರವಲಯ ವ್ಯಾಪ್ತಿ ಸುದ್ದಿಗೆ  ರೂ.1800 ರಂತೆ ನೀಡಲಾಗುತ್ತದೆ. ಬೆಂಗಳೂರು ಕೇಂದ್ರದಲ್ಲಿ ವರ್ಷಕ್ಕೆ 5 ಲಕ್ಷ ರೂ ಹಾಗೂ ಜಿಲ್ಲಾ ಕೇಂದ್ರದಲ್ಲಿ 4 ಲಕ್ಷ ರೂ ಒಳಗೆ ಗೌರವಧನ ಮಿತಿ ಮೀರದಂತೆ ಪಾವತಿ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸುವವರಿಗೆ ಸೂಚನೆಗಳು

ಪ್ರಸ್ತುತ ತಾಂತ್ರಿಕ ಮಾನದಂಡಗಳಿಗೆ ಅನುಗುಣವಾಗಿ ಕ್ಯಾಮೆರಾ ಬಳಕೆ ತಿಳಿದಿರಬೇಕು ಹಾಗೂ ಸಂಬಂಧಿತ ಉಪಕರಣಗಳನ್ನು ಹೊಂದಿರಬೇಕು,

DSNG / ಸುದ್ದಿಯನ್ನು ನೇರಪ್ರಸಾರ ಮಾಡಲು ಬೇಕಾದ ಉಪಕರಣಗಳನ್ನು ಹೊಂದಿರಬೇಕು. ವೃತ್ತಿಪರರು ಇತ್ತೀಚಿನ ಹೆಚ್ಡಿ, 4K, ಯುಹೆಚ್ಡಿ, ಎನ್ಎಕ್ಸ್ ಮಾದರಿಯ ವಿಡಿಯೋ ಕ್ಯಾಮೆರಾಗಳನ್ನು ಹೊಂದಿರಬೇಕು. ಇದರ ಜೊತೆಗೆ ಗುಣಮಟ್ಟದ 4G ಅಥವಾ 5G ಸ್ಮಾರ್ಟ್ಫೋನ್ಗಳನ್ನು ಹೊಂದಿರಬೇಕು. ತಕ್ಷಣಕ್ಕೆ ಸುದ್ದಿ ಹಾಗೂ ವೀಡಿಯೊಗಳನ್ನು ಸುದ್ದಿ ಕೊಠಡಿಗೆ ಕಳುಹಿಸಲು ಬೇಕಾದ ಎಲ್ಲಾ ಸೌಕರ್ಯಗಳನ್ನು ಹೊಂದಿರಬೇಕು.

ಈಗಾಗಲೇ ಸ್ಟ್ರಿಂಜರ್ ವೃತ್ತಿಯಲ್ಲಿರುವವರು ಸಹ ಹೊಸದಾಗಿ ಅರ್ಜಿ ಸಲ್ಲಿಸಿ, ನೇಮಕ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು. ಅರ್ಜಿದಾರರು ಯಾವ ಜಿಲ್ಲೆಯಲ್ಲಿ ಹುದ್ದೆ ಮಾಡಲು ಬಯಸುತ್ತೀರಿ ಎಂಬುದನ್ನು ಸ್ಪಷ್ತವಾಗಿ ನಮೂದಿಸಿರಬೇಕು.

ಅರ್ಜಿ ಸಲ್ಲಿಸುವ ವಿಧಾನ

ಅರ್ಜಿ ಸಲ್ಲಿಸಲು ಜೂನ್ 6 ಕೊನೆಯ   ದಿನವಾಗಿದ್ದು, ಅರ್ಜಿಯನ್ನು ಪ್ರಸಾರ ಭಾರತಿ(IPSB), ದೂರದರ್ಶನ ಬೆಂಗಳೂರು, ಹೆಸರಿನಲ್ಲಿ ರೂ.1180 ಡಿಡಿ ಪಾವತಿಸಿ, ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಪೂರಕ ದಾಖಲೆಗಳೂಂದಿಗೆ  , ಸುದ್ದಿ ನಿರ್ದೇಶಕರು, ಪ್ರಾದೇಶಿಕ ಸುದ್ದಿ ಘಟಕ, ದೂರದರ್ಶನ ಕೇಂದ್ರ, ಜೆ ಸಿ ನಗರ, ಬೆಂಗಳೂರು- 560 006 ಗೆ ಅಂಚೆ ಮೂಲಕ ಕಳುಹಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಮತ್ತು ಅಧಿಕೃತ ಅಧಿಸೂಚನೆಗೆ prasarbharati.gov.in ವೆಬ್ಸೈಟ್ ಗೆ ಭೇಟಿ ನೀಡಿ.

Key words: apply, Stringer posts, Television, Chandana Channel

The post ದೂರದರ್ಶನ ಚಂದನ ವಾಹಿನಿಯಲ್ಲಿ ಸ್ಟ್ರಿಂಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ವಿಮಾನ ದುರಂತದ ಬಗ್ಗೆ ಉನ್ನತ ಮಟ್ಟದ ತನಿಖೆ, 3 ತಿಂಗಳಲ್ಲಿ ವರದಿ-ಕೇಂದ್ರ ಸಚಿವ ರಾಮ್ ಮೋಹನ್ ನಾಯ್ಡು

ನವದೆಹಲಿ,ಜೂನ್,14,2025 (www.justkannada.in):  ಗುಜರಾತ್ ನ ಅಹಮದಾಬಾದ್ ನ ಮೇಘಾಶಿ ನಗರದಲ್ಲಿ...

മ്ലാവിറച്ചിയല്ല കഴിച്ചത് പോത്തിറച്ചി; തൃശൂരിൽ യുവാക്കൾ ജയിലിൽ കിടന്നത് 35 ദിവസം

തൃശൂ‍ർ: തൃശൂരിൽ മ്ലാവിറച്ചി കൈവശം വെച്ചാന്നാരോപിച്ച് ജയിൽ ശിക്ഷ അനുഭവിച്ച യുവാക്കൾ...

“வரும் தேர்தலில் திருச்சியில் போட்டி; நடிகர் விஜய் மனசு..'' – திருநாவுக்கரசர் தடாலடி

ராகுல் காந்தி பிறந்த நாள்: வேலைவாய்ப்பு முகாம்நாடாளுமன்ற எதிர்க்கட்சித் தலைவர் ராகுல் காந்தி...

Kavitha: కేసీఆర్‌తో మాట్లాడానో.. లేదన్నది ఇప్పుడు అనవసరం

ఎర్రవల్లి ఫాంహౌస్‌లో తన తండ్రి కేసీఆర్‌తో మాట్లాడానో.. లేదన్నది ఇప్పుడు అవసరం...