21
September, 2026

A News 365Times Venture

21
Monday
September, 2026

A News 365Times Venture

ಸುಹಾಸ್ ಶೆಟ್ಟಿ ಹತ್ಯೆ ಕೇಸ್: 8 ಆರೋಪಿಗಳ ಬಂಧನ; ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್

Date:

ಬೆಂಗಳೂರು, ಮೇ 03,2025 (www.justkannada.in):  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ, ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧ 8 ಮಂದಿ ಆರೋಪಿಗಳನ್ನ ಬಂಧಿಸಿರುವುದಾಗಿ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

ಗೃಹ ಸಚಿವ ಪರಮೇಶ್ವರ್ ಜೊತೆ ಸಭೆ ನಡೆಸಿದ ನಂತರ ಮಾತನಾಡಿದ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ (ಘಟನೆ ಸಂಬಂಧ ಎಂಟು ಮಂದಿಯನ್ನು ಬಂಧಿಸಲಾಗಿದೆ  ಅಬ್ದುಲ್ ಸಫ್ವಾನ್ (29), ನಿಯಾಜ್ (28), ಕಲಂದರ್ ಶಾಫಿ (31), ಮೊಹಮ್ಮದ್ ಮುಝಮ್ಮಿಲ್ (32), ರಂಜಿತ್ (19), ನಾಗರಾಜ್ (20), ಮೊಹಮ್ಮದ್ ರಿಜ್ವಾನ್ ​(28) ಮತ್ತು ಆದಿಲ್ ಮೆಹರೂಫ್ ಬಂಧಿತರು.  ಬಂಧಿತ 8 ಆರೋಪಿಗಳ ಪೈಕಿ ಇಬ್ಬರು ಹಿಂದೂಗಳಿದ್ದಾರೆ ಎಂದರು.

ಸಫ್ವಾನ್ ಪ್ರಮುಖ ಆರೋಪಿ. 2023ರಲ್ಲಿ ಅಬ್ದುಲ್ ಸಫ್ವಾನ್​ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಸಫ್ವಾನ್ ​​ಗೆ ಸುಹಾಸ್ ಶೆಟ್ಟಿ ಕೊಲೆ ಮಾಡುವ ಆತಂಕ ಇತ್ತು. ಹಾಗಾಗಿ ಸುಹಾಸ್ ಶೆಟ್ಟಿಯನ್ನು ಕೊಲೆ ಮಾಡಲು ತೀರ್ಮಾನಿಸಿದ್ದರು. ಅದಕ್ಕಾಗಿ ಫಾಜಿಲ್​ ತಮ್ಮ ಆದಿಲ್ ಮೆಹರೂಫ್​ ನನ್ನು ಸಂಪರ್ಕಿಸಿ ಕೊಲೆ ಮಾಡಲು ತೀರ್ಮಾನಿಸಿದ್ದರು ಎಂದು  ಮಾಹಿತಿ ನೀಡಿದರು.

ಸುಹಾಸ್ ಶೆಟ್ಟಿ ಕೊಲೆ ಮಾಡಲು ಸಫ್ವಾನ್​ ತಂಡಕ್ಕೆ ಆದಿಲ್ 5 ಲಕ್ಷ ರೂ. ನೀಡಿದ್ದನು. ನಿಯಾಜ್ ಸ್ನೇಹಿತರಾದ ನಾಗರಾಜ್ ಮತ್ತು ರಂಜಿನ್ ಸಂಪರ್ಕ ಮಾಡುತ್ತಾರೆ. ಈ ಇಬ್ಬರು ಸಫ್ವಾನ್ ಮನೆಯಲ್ಲಿ ಎರಡು ದಿನಗಳ ಕಾಲ ವಾಸವಿದ್ದು,  ಮೇ 1ರಂದು ಸುಹಾಸ್ ಚಲನವಲನ ಗಮನಿಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದರು.

Key words: Suhas Shetty, murder case, 8 accused, arrested

The post ಸುಹಾಸ್ ಶೆಟ್ಟಿ ಹತ್ಯೆ ಕೇಸ್: 8 ಆರೋಪಿಗಳ ಬಂಧನ; ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

യു.പിയില്‍ ബി.ജെ.പി ഭരണത്തില്‍ തകര്‍ത്തത് 151 അബേദ്ക്കര്‍ പ്രതിമകള്‍: അഖിലേഷ് യാദവ്

ലഖ്‌നൗ: ബി.ജെ.പി ഭരണകാലത്ത് ഉത്തര്‍പ്രദേശില്‍ ഡോ. ബി.ആര്‍ അംബേദ്‌റുടെ 151 പ്രതിമകള്‍...

"தமிழ்நாடு, சர்க்கஸ் கும்பலிடம் மாட்டிக்கொண்டிருக்கிறது.!"- உதயநிதி ஸ்டாலின்

சென்னையில் நடைபெற்ற திருமண நிகழ்ச்சியில் எதிர்க்கட்சி தலைவர் உதயநிதி ஸ்டாலின் கலந்துகொண்டிருக்கிறார்....

No UPI-Only Cash: నో యూపీఐ ఓన్లీ క్యాష్.. దుకాణాల ముందు ప్రత్యక్షమవుతున్న బోర్డులు..

ఉత్తరప్రదేశ్‌లోని ఘజియాబాద్‌లో వ్యాపారులు కొత్త నిబంధనలకు వ్యతిరేకంగా వినూత్న నిరసనకు దిగారు....

ഹിന്ദു സംസ്‌കാരത്തെ അപമാനിക്കുന്നതും പാരമ്പര്യത്തെ തകര്‍ക്കുന്നതും; ഹിന്ദു വര്‍ഗീയതയ്‌ക്കെതിരായ ഹാമിദ് അന്‍സാരിയുടെ പരാമര്‍ശത്തിനെതിരെ യോഗി

ന്യൂഡല്‍ഹി: മുന്‍ ഉപരാഷ്ട്രപതി ഹമീദ് അന്‍സാരിയുടെ ‘ഹിന്ദു വര്‍ഗീയത’യുമായി ബന്ധപ്പെട്ട പരാമര്‍ശങ്ങള്‍ക്കെതിരെ...