28
August, 2026

A News 365Times Venture

28
Friday
August, 2026

A News 365Times Venture

ನಮ್ಮದು ಗಂಜಲ ಕುಡಿಯುವ ರಾಜ್ಯ ಅಲ್ಲ, ನಂದಿನಿ ಹಾಲು ಕುಡಿಯುವ ರಾಜ್ಯ: ಬಿಜೆಪಿ ಟೀಕೆಗೆ ಬಿ.ಕೆ ಹರಿಪ್ರಸಾದ್ ಟಾಂಗ್

Date:

ಬೆಂಗಳೂರು,ಏಪ್ರಿಲ್,12,2025 (www.justkannada.in): ಜಾತಿಗಣತಿ ವರದಿ ಮಂಡನೆ ತುಪ್ಪ ಸವರುವ ಕೆಲಸ ಎಂದು ಟೀಕಿಸಿದ್ದ ಬಿಜೆಪಿಗೆ ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಬಿ.ಕೆ ಹರಿಪ್ರಸಾದ್, ಜಾತಿಗಣತಿ ಬಗ್ಗೆ ಟೀಕೆ ಟಿಪ್ಪಣಿ ಸಾಮಾನ್ಯ . ನಮ್ಮದು ಗಂಜಲ ಕುಡಿಯವ ರಾಜ್ಯ ಅಲ್ಲ, ನಮ್ಮದು ನಂದಿನಿ ಹಾಲು ಕುಡಿಯುವ ರಾಜ್ಯ.  ಗಂಜಲ ಕುಡಿಯುವವರಿಗೆ ತುಪ್ಪ ಸವರುವ ಕೆಲಸ ಇರಬಹುದು ಎಂದು ಟಾಂಗ್ ಕೊಟ್ಟರು.

ಶೇ 93 ರಷ್ಟು ಜನಸಂಖ್ಯೆಗೆ ಅನುಗುಣವಾಗಿ ಗಣತಿ ಮಾಡಿದ್ದಾರೆ. ಜಾತಿಗಣತಿ ವಿರೋಧ ಮಾಡುವುದು ನಿಜಕ್ಕೂ ವಿಪರ್ಯಾಸ. ಏಪ್ರಿಲ್ 7 ರಂದು ಏನಾಗುತ್ತೆ ಎಂದು ನೋಡೋಣ. ಜಾತಿ ಜನಗಣತಿ ವರದಿ ಜಾರಿಗೆ ತರುವ ವಿಚಾರ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿತ್ತು. ಅದೇ ಕಾರಣಕ್ಕೆ ಜನರು ನಮಗೆ ಆಶೀರ್ವಾದ ಮಾಡಿದ್ದಾರೆ. ಈ ಮೊದಲೇ ಜಾತಿಜನಗಣತಿ ಮಂಡನೆಯಾಗಬೇಕಿತ್ತು. ಆದರೂ ಈಗ ಸಂಪುಟ ಸಭೆಯಲ್ಲಿ ಮಂಡನೆಯಾಗಿರುವುದು ಸ್ವಾಗತಾರ್ಹ ಎಂದು ಬಿಕೆ ಹರಿಪ್ರಸಾದ್ ತಿಳಿಸಿದರು.

Key words: MLC, BK Hariprasad, BJP, caste census report

The post ನಮ್ಮದು ಗಂಜಲ ಕುಡಿಯುವ ರಾಜ್ಯ ಅಲ್ಲ, ನಂದಿನಿ ಹಾಲು ಕುಡಿಯುವ ರಾಜ್ಯ: ಬಿಜೆಪಿ ಟೀಕೆಗೆ ಬಿ.ಕೆ ಹರಿಪ್ರಸಾದ್ ಟಾಂಗ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

നേപ്പാൾ പ്രളയം: നാടക പരാമർശത്തിൽ വിശദീകരണവുമായി ശശി തരൂർ

ന്യൂദല്‍ഹി: നേപ്പാളിലുണ്ടായ മിന്നൽപ്രളയത്തെക്കുറിച്ച് വിവരിക്കാൻ ‘ഡ്രാമ’ എന്ന വാക്ക് ഉപയോഗിച്ചതിനെത്തുടർന്ന് ഉയർന്ന...

கூடலூர்: ஆட்கொல்லி புலி விவகாரம்; 2-வது நாளாக தொடரும் வேலை நிறுத்தம்! – பதற்றத்தில் காவல்துறை!

நாட்டில் மனித - வனவிலங்கு எதிர்கொள்ளல்கள் அதிகம் நிகழும் மாவட்டங்களில் ஒன்றான...

ಮೈಸೂರು ದಸರಾ: ಅರಮನೆ ಪ್ರವೇಶ ವೇಳೆ ಗಾಬರಿಗೊಂಡ ‘ಶ್ರೀರಾಮ’ ಆನೆ

ಮೈಸೂರು,ಆಗಸ್ಟ್,28,2026 (www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ...