30
April, 2026

A News 365Times Venture

30
Thursday
April, 2026

A News 365Times Venture

ಏ.8 ರಿಂದ 9 ದಿನಗಳ ಕಾಲ ಹಾಲನೂರು ಶ್ರೀ ಮಲ್ಲೇಶ್ವರ ಸ್ವಾಮಿ, ಪಾರ್ವತಿದೇವಿ ಜಾತ್ರೆ

Date:

ತುಮಕೂರು,ಏಪ್ರಿಲ್,4,2025 (www.justkannada.in): ತುಮಕೂರು ತಾಲ್ಲೂಕಿನ ಕಸಬಾ ಹೋಬಳಿ ಹಾಲನೂರು ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ಮಲ್ಲೇಶ್ವರ ಸ್ವಾಮಿ, ಪಾರ್ವತಿದೇವಿ ಜಾತ್ರಾ ಮಹೋತ್ಸವ ಏಪ್ರಿಲ್ 8 ರಿಂದ ಏಪ್ರಿಲ್ 16ರವರೆಗೆ 9 ದಿನಗಳ ಕಾಲ ನಡೆಯಲಿದೆ.

ಜಿಲ್ಲಾಧಿಕಾರಿ ಶುಭ ಕಲ್ಯಾಣ್, ತಹಶೀಲ್ದಾರ್ ರಾಜೇಶ್ವರಿ, ಮುಜರಾಯಿ ಇಲಾಖೆ ಹಾಗೂ ಭಕ್ತಮಂಡಲಿ ,ಹಾಲನೂರು ಗ್ರಾಮದ ಯಜಮಾನರು, ಗ್ರಾಮಸ್ಥರ ನೇತೃತ್ವದಲ್ಲಿ ನಡೆಯಲಿರುವ ಜಾತ್ರಾ ಮಹೋತ್ಸವ ಏ.8 ರಂದು ಮಂಗಳವಾರ ಸಂಜೆ ಧ್ವಜಾರೋಹಣದೊಂದಿಗೆ ಚಾಲನೆಗೊಳ್ಳಲಿದೆ. ಏ.9 ರಂದು ಗ್ರಾಮದ ಎಲ್ಲಾ ಮನೆಗಳಿಂದ ಆರತಿಗಳು ಬರಲಿವೆ.ನಂತರ ಗಿರಿಜಾ ಕಲ್ಯಾಣ ನಡೆಯಲಿದೆ.

ಏ.10 ತ್ರಯೋದಶಿ ಗುರುವಾರ ಮಧ್ಯಾಹ್ನ 12-45 ಕ್ಕೆ ಬ್ರಹ್ಮ ರಥೋತ್ಸವ ನಡೆಯಲಿದೆ. ಬೆಳ್ಳಾವಿ ಮಠದ ಶ್ರೀ ಕಾರದ ವೀರಬಸವ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಏ.11 ರಂದು ಸಂಜೆ ಅಡ್ಡ ಪಲ್ಲಕ್ಕಿ ಉತ್ಸವ ಹಾಗೂ ಅದಲಾಪುರ ಮಹಾಲಕ್ಷ್ಮಿ ದೇವಿ ಮೆರವಣಿಗೆ ನೆರವೇರಲಿದೆ. ರಂಗೋಲಿ ಸ್ಪರ್ಧೆ ಸಹ ಏರ್ಪಡಿಸಲಾಗಿದೆ.

ಏ.12 ರಂದು ಹುಣ್ಣಿಮೆ ಶನಿವಾರದಂದು ಜಾತ್ರೆಯ ಮುಖ್ಯ ಆಕರ್ಷಣೆ ಉಪ್ಪರಿಗೆ ವಾಹನ ಉತ್ಸವ ನಡೆಯಲಿದ್ದು ,ಅಂದು ರಾತ್ರಿ ಶ್ರೀ ಮಲ್ಲೇಶ್ವರ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಕುರುಕ್ಷೇತ್ರ ನಾಟಕ ಪ್ರದರ್ಶನವಾಗಲಿದೆ. ಏ.13 ರಂದು ರುದ್ರಾಕ್ಷಿ ಮಂಟಪ ಮೆರವಣಿಗೆ ಏ.16 ರಂದು ವಸಂತೋತ್ಸವ ಓಕುಳಿ ಆಚರಣೆ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ. ಜಾತ್ರೆ ನಡೆಯುವ 9 ದಿನವೂ ನಿರಂತರವಾಗಿ ಅನ್ನ ದಾಸೋಹ ನಡೆಯಲಿದೆ. ಮುಜರಾಯಿ ಇಲಾಖೆ ನೇತೃತ್ವದಲ್ಲಿ ನಡೆಯುವ ಸದರಿ ಜಾತ್ರಾ ಮಹೋತ್ಸವದ ವೇಳೆ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಇರುತ್ತದೆ.

ರಥ ಬೀದಿಯಲ್ಲಿ ನೂರಾರು ಅಂಗಡಿ ಮುಂಗಟ್ಟು ತೆರೆದು ಕೊಳ್ಳಲಿವೆ. ಸಹಸ್ರಾರು ಭಕ್ತಾದಿಗಳು ಭಾಗವಹಿಸಲಿದ್ದಾರೆ. ಪ್ರಮುಖವಾಗಿ ಹರಕೆ ಮಾಡಿಕೊಂಡವರು ಹಾಗೂ ಹರಕೆ ಮಾಡಿಕೊಳ್ಳುವವರು ಕುಟುಂಬ ಸಮೇತರಾಗಿ ಆಗಮಿಸಿ ಹರಕೆ ತೀರಿಸಲಿದ್ದಾರೆ. ಸಂತಾನ, ಆರೋಗ್ಯ,ವಿದ್ಯೆ, ಲಗ್ನ ಇತ್ಯಾದಿಗಳ ಈಡೇರಿಕೆಗೆ ಭಕ್ತರು ಹರಕೆ ಹೊತ್ತಿರುತ್ತಾರೆ. ಹರಕೆ ಈಡೇರಿದ ಮೇಲೆ ಹರಕೆ ತೀರಿಸುತ್ತಾರೆ. ಹಾಗೆಯೇ ಜಾತ್ರೆಗೆ ಬರುವ ಭಕ್ತಾದಿಗಳು ಹಾಲನೂರು ಸುತ್ತಮುತ್ತಲಿನ  ಪುರಾಣ ಪ್ರಸಿದ್ಧ ದೇವಾಲಯಗಳಾದ ಅರೆಯೂರು ವೈದ್ಯನಾಥೇಶ್ವರ,ಕೈದಾಳ ಚನ್ನಕೇಶವ,ಗೂಳೂರು ಗಣೇಶ, ಹೆತ್ತೇನಹಳ್ಳಿ ಮಾರಮ್ಮನ ಶ್ರೀ ಕ್ಷೇತ್ರಗಳಿಗೆ ಭೇಟಿ ನೀಡಬಹುದಾಗಿದೆ.

Key words: Halanur Sri Malleshwara Swamy, Parvata Devi, Fair , 8th April

The post ಏ.8 ರಿಂದ 9 ದಿನಗಳ ಕಾಲ ಹಾಲನೂರು ಶ್ರೀ ಮಲ್ಲೇಶ್ವರ ಸ್ವಾಮಿ, ಪಾರ್ವತಿದೇವಿ ಜಾತ್ರೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

മുസ്‌ലിങ്ങള്‍ മുഖ്യമന്ത്രിയാകരുതെന്ന് ഭരണഘടനയില്‍ എവിടെയെങ്കിലും പറഞ്ഞിട്ടുണ്ടോ? വെള്ളാപ്പള്ളിയോട് ടി.എസ്. ശ്യാംകുമാര്‍

  കോഴിക്കോട്: യു.ഡി.എഫ് അധികാരത്തിലെത്തിയാല്‍ മുസ്‌ലിം ലീഗില്‍ നിന്നും മുഖ്യമന്ത്രിയുണ്ടായേക്കാമെന്ന എസ്.എന്‍.ഡി.പി...

தமிழ்நாடு `டு' மேற்கு வங்கம்; எக்ஸிட் போல் குறித்து மல்லிகார்ஜுன கார்கே சொன்னது என்ன?

புதுச்சேரி, கேரளா, மற்றும் அஸ்ஸாம் ஆகிய மூன்று மாநில சட்டமன்றத் தேர்தல்கள்...

West Bengal Exit Poll 2026: బెంగాల్ లేటెస్ట్ ఎగ్జిట్ పోల్.. బీజేపీదే అధికారం..

West Bengal Exit Poll 2026: నాలుగు రాష్ట్రాలు, ఒక కేంద్రపాలిత...

ಶೀಲ ಶಂಕಿಸಿ ಪತ್ನಿ ಕೊಂದಿದ್ದ ಆಪರಾಧಿ ಪತಿಗೆ ಜೀವಾವಧಿ ಶಿಕ್ಷೆ ಪ್ರಕಟ.

ಮಂಡ್ಯ. ಏಪ್ರಿಲ್, 30,2026 (www.justkannada.in):  ಶೀಲ ಶಂಕಿಸಿ ಪತ್ನಿಯನ್ನು ಕೊಲೆಗೈದಿದ್ದ...