14
April, 2026

A News 365Times Venture

14
Tuesday
April, 2026

A News 365Times Venture

ಬಂಡೀಪುರ ರಾತ್ರಿ ಸಂಚಾರ ನಿರ್ಬಂಧ ವಿಚಾರ : ತುರ್ತು ಕ್ರಮಕ್ಕೆ ಲೋಕಸಭೆಯಲ್ಲಿ ಸಂಸದ ಯದುವೀರ್ ಆಗ್ರಹ

Date:

ಬೆಂಗಳೂರು,ಏಪ್ರಿಲ್,4,2025 (www.justkannada.in): ಬಂಡೀಪುರ ರಾತ್ರಿ ಸಂಚಾರ ನಿರ್ಬಂಧ ತೆರವಿಗೆ ತೆರಮರೆಯ ಕಸರತ್ತು ನಡೆಸುತ್ತಿದ್ದು  ರಾಜ್ಯ ಸರ್ಕಾರಕ್ಕೆ ಕೇರಳಾ ಸರ್ಕಾರದಿಂದ ಒತ್ತಡ ಬರುತ್ತಿದ್ದು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಮೈಸೂರು-ಕೊಡಗು ಬಿಜೆಪಿ ಸಂಸದ ಯದುವೀರ್  ಕೃಷ್ಣದತ್ತ ಚಾಮರಾಜ ಒಡೆಯರ್ ಧ್ವನಿ ಎತ್ತಿದ್ದಾರೆ.

ಈ ಕುರಿತು ಲೋಕಸಭೆ ಕಲಾಪದಲ್ಲಿ ಮಾತನಾಡಿರುವ ಸಂಸದ ಯದುವೀರ್,  ಕಾಂಗ್ರೆಸ್ ಹೈಕಮಾಂಡ್ ಒತ್ತಾಯಕ್ಕೆ ಮಣಿದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗುವ ಹೆದ್ದಾರಿಯಲ್ಲಿ ರಾತ್ರಿ ಸಂಚಾರಕ್ಕೆ ನಿಷೇಧವನ್ನು ಕೈ ಬಿಡಲು ಕರ್ನಾಟಕ ರಾಜ್ಯ ಸರ್ಕಾರ ಮುಂದಾಗಿದೆ

ಇದರಿಂದಾಗಿ ಉಂಟಾಗುವ ಅನಾಹುತಗಳು ಮತ್ತು ವನ್ಯಜೀವಿ ಹಾಗೂ ಮಾನವ ಸಂಘರ್ಷದ ಸಂಭವಗಳು ಹೆಚ್ಚಾಗುವ ಸಾಧ್ಯತೆ ಇರುವ ಕಾರಣ ಇಂತಹ ವಿಷಯಗಳಲ್ಲಿ ರಾಜ್ಯ ಸರ್ಕಾರ ಯಾರೊಂದಿಗೂ ರಾಜಿಯಾಗದೆ ಪರಿಸರ ಹಾಗೂ ವನ್ಯಜೀವಿಗಳ ಸಂರಕ್ಷಣೆಗಾಗಿ ತನ್ನ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ.

ಜೊತೆಗೆ ರಾಜ್ಯದ ಅರಣ್ಯ ಸುರಕ್ಷತೆಯ ವಿಷಯಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ ಹಸ್ತಕ್ಷೇಪ ಮಾಡುತ್ತಿರುವುದು ಸರಿಯಲ್ಲ. ಹಾಗಾಗಿ ಈ ವಿಷಯದ ಕುರಿತು ಕೇಂದ್ರ ಸರ್ಕಾರದ ಅರಣ್ಯ ಸಚಿವಾಲಯವು ತುರ್ತು ಕ್ರಮ ಕೈಗೊಳ್ಳಬೇಕು ಸಂಸದ ಯದುವೀರ್  ಮನವಿ ಮಾಡಿದ್ದಾರೆ.

Key words: Bandipur, night, restriction, MP, Yaduveer, Lok Sabha

The post ಬಂಡೀಪುರ ರಾತ್ರಿ ಸಂಚಾರ ನಿರ್ಬಂಧ ವಿಚಾರ : ತುರ್ತು ಕ್ರಮಕ್ಕೆ ಲೋಕಸಭೆಯಲ್ಲಿ ಸಂಸದ ಯದುವೀರ್ ಆಗ್ರಹ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

നിങ്ങള്‍ മുസ്‌ലിങ്ങളെ കന്നുകാലികളെ പോലെയാണ് പരിഗണിക്കുന്നത്; മമതയ്‌ക്കെതിരെ ഒവൈസി

കൊല്‍ക്കത്ത: പശ്ചിമബംഗാള്‍ മുഖ്യമന്ത്രി മമതാ ബാനര്‍ജിക്കെതിരെ രൂക്ഷ വിമര്‍ശനവുമായി എ.ഐ.എം.ഐ.എം അധ്യക്ഷന്‍...

Vikram : విక్రమ్ – శంకర్ మళ్ళీ కలుస్తున్నారు ఈసారి అదిరిపోయే కమర్షియల్ ప్లాన్!

2016లో వచ్చిన ఇంకొక్కడుతో విక్రమ్ , ఆనంద్ శంకర్ కాంబినేషన్ సూపర్...

ಮೈಸೂರು: ಮೂವರು ಸರಗಳ್ಳರ ಬಂಧನ: 125 ಗ್ರಾಂ ಚಿನ್ನಾಭರಣ ವಶಕ್ಕೆ

ಮೈಸೂರು,ಏಪ್ರಿಲ್,14,2026 (www.justkannada.in): ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯ ಪೊಲೀಸರು ಕಾರ್ಯಾಚರಣೆ...