24
September, 2026

A News 365Times Venture

24
Thursday
September, 2026

A News 365Times Venture

ಚಾಮುಂಡಿ ಬೆಟ್ಟದಲ್ಲಿ ಬೆಂಕಿ ಬಿದ್ದ ಕಡೆ ಚಿರತೆ ಮತ್ತು ಮರಿಗಳು ಪ್ರತ್ಯಕ್ಷ: ಪ್ರಾಣಿಗಳಿಗೆ ಹಾನಿ ಇಲ್ಲ- ಡಿಸಿಎಫ್ ಬಸವರಾಜು

Date:

ಮೈಸೂರು,ಫೆಬ್ರವರಿ,22,2025 (www.justkannada.in): ಮೈಸೂರಿನ ಚಾಮುಂಡಿ ಬೆಟ್ಟದ ಮೀಸಲು ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದ ಪ್ರಕರಣ ಸಂಬಂಧ 35 ಎಕರೆ ಸಂಪೂರ್ಣ ಸುಟ್ಟು ಹೋಗಿದೆ. ಬೆಂಕಿ ಬಿದ್ದ ಕಡೆ ಚಿರತೆ ಮತ್ತು ಮರಿಗಳು ನಮ್ಮ ವಾಚರ್ ಕಣ್ಣಿಗೆ ಬಿದ್ದಿವೆ ಎಂದು ಮೈಸೂರು ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜು ತಿಳಿಸಿದ್ದಾರೆ.

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಸಿಎಫ್ ಬಸವರಾಜು. ನಿನ್ನೆ ಮಧ್ಯಾಹ್ನ 12:30ರ ಸುಮಾರಿಗೆ ಚಾಮುಂಡಿಬೆಟ್ಟದ ಎರಡು ಕಡೆ ಏಕಕಾಲಕ್ಕೆ ಬೆಂಕಿ ಕಾಣಿಸಿಕೊಂಡಿತು. ಆ ವೇಳೆ ಗಾಳಿಯ ವೇಗ ಹೆಚ್ಚಾಗಿದ್ದರಿಂದ ಬೆಂಕಿ ವೇಗವಾಗಿ ಹಬ್ಬಿತು. ಬೆಂಕಿ ಬಿದ್ದ ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ತಲುಪುವುದು ಕಷ್ಟಕರವಾಗಿತ್ತು. ಇದರ ‌ನಡುವೆಯೂ ಸತತ ಕಾರ್ಯಾಚರಣೆ ‌ನಡೆಸಿ ಕಳೆದ ರಾತ್ರಿ 11:30ರ ಸುಮಾರಿಗೆ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದೆ. ದನಗಾಹಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಹಾಗಾಗಿ ಪ್ರತಿನಿತ್ಯ ಈ ಭಾಗದಲ್ಲಿ ಜಾನುವಾರುಗಳನ್ನು ಮೇಯಿಸಲು ಬರುತ್ತಿದ್ದವರನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ. ಆ ಭಾಗದಲ್ಲಿ ಹೆಚ್ಚು ಸಂಚರಿಸುತ್ತಿದ್ದವರ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಹೇಳಿದರು.

ಉದ್ದೇಶ ಪೂರ್ವಕವಾಗಿ ಬೆಂಕಿ ಹಾಕಿದ್ದಾರೆ ಎಂಬ ಅನುಮಾನವಿದ್ದು, ಆ ಬಗ್ಗೆ ತನಿಖೆ ನಡೆಯುತ್ತಿದೆ. ಗಾಳಿ ವೇಗ ಹಾಗೂ ಬಿಸಿಲಿನ ವಾತಾವರಣ ಇತ್ತು. ಆದ ಕಾರಣ ಬೆಂಕಿ ಹೆಚ್ಚಿತ್ತು. ನಾವು ಎಷ್ಟೇ ಪ್ರಯತ್ನ ಪಟ್ಟರೂ ಆ ಜಾಗಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಅಗ್ನಿಶಾಮಕದಳ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಬೆಂಕಿ ನಂದಿಸಲು ಶ್ರಮ ಹಾಕಿದರು. ಸಂಜೆ ವೇಳೆಗೆ ಬೆಂಕಿ ಕಂಟ್ರೋಲ್ ಗೆ ಬಂತು. 3 ತಂಡಗಳ ಜೊತೆಗೆ ವಾಚರ್ ಗಳನ್ನು ಇಟ್ಟು ಇಡೀ ರಾತ್ರಿ ಕಾದೀದ್ದೇವೆ. ಸದ್ಯಕ್ಕೆ ಡ್ರೋನ್ ಹಾರಿಸಿ ಎಲ್ಲವನ್ನೂ ಪರಿಶೀಲನೆ ಮಾಡಿದ್ದೇವೆ. ದೇವಿಕೆರೆ, ಗೊಲ್ಲಹಳ್ಳ, ಈ ಭಾಗದಲ್ಲಿ 35 ಎಕರೆ ಸಂಪೂರ್ಣ ಸುಟ್ಟಿದೆ. ಬೇಸಿಗೆಯಿಂದ ಒಣ ಹುಲ್ಲು ಪ್ರಮಾಣ ಜಾಸ್ತಿ ಇತ್ತು . ಅದೆಲ್ಲ ಸುಟ್ಟಿದೆ. 1516 ಎಕರೆಯಷ್ಟು ಮೀಸಲು ಅರಣ್ಯ ಪ್ರದೇಶವಿದೆ. 4 ಕಡೆ ಬೆಟ್ಟಕ್ಕೆ ಪ್ರವೇಶವಿದೆ. ಎಲ್ಲವನ್ನೂ ನಾವು ಮಾನಿಟರ್ ಮಾಡೋದು ಕಷ್ಟ. ನಾನು ಮಾಧ್ಯಮಗಳ ಮೂಲಕ  ಎಲ್ಲರನ್ನೂ ಕೇಳಿಕೊಳ್ಳುತ್ತೇನೆ. ಬಿಡಿ ಸಿಗರೇಟ್ ಸೇದಿ ಎಸೆಯಬೇಡಿ. ಸಣ್ಣ ಕಿಡಿ ಇಡೀ ಕಾಡನ್ನೇ ನಾಶ ಮಾಡತ್ತೆ ಎಂದು ಡಿಸಿಎಫ್ ಬಸವರಾಜ್ ಹೇಳಿದರು.

ಚಿರತೆ ಹಾಗೂ ಮರಿಗಳು ಪ್ರತ್ಯೆಕ್ಷ

ಅದೃಷ್ಟವಶಾತ್ ಯಾವುದೇ ಪ್ರಾಣಿಗಳಿಗೆ ಹಾನಿಯಾಗಿಲ್ಲ. ಬೆಳಿಗ್ಗೆ ನಮ್ಮ ವಾಚರ್ ಕಣ್ಣಿಗೆ ಚಿರತೆ ಹಾಗೂ ಮರಿಗಳು ಬಿದ್ದಿದೆ. ಬೆಂಕಿ ಬಿದ್ದ ತಕ್ಷಣ ಪ್ರಾಣಿಗಳು ಒಂದು ಕಡೆಯಿಂದ ಮತ್ತೊಂದು ಭಾಗಕ್ಕೆ ಹೋಗಿವೆ. ಹಾಗಾಗಿ ವನ್ಯ ಜೀವಿಗಳಿಗೂ ಯಾವುದೇ ಹಾನಿಯಾಗಿಲ್ಲ ಡಿಸಿಎಫ್ ಬಸವರಾಜ್ ಹೇಳಿದರು.

Key words: Chamundi Hills, fire, DCF, Basavaraju

The post ಚಾಮುಂಡಿ ಬೆಟ್ಟದಲ್ಲಿ ಬೆಂಕಿ ಬಿದ್ದ ಕಡೆ ಚಿರತೆ ಮತ್ತು ಮರಿಗಳು ಪ್ರತ್ಯಕ್ಷ: ಪ್ರಾಣಿಗಳಿಗೆ ಹಾನಿ ಇಲ್ಲ- ಡಿಸಿಎಫ್ ಬಸವರಾಜು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഓസ്‌ട്രേലിയന്‍ സര്‍ക്കാര്‍ ഹെല്‍ത്ത് കെയര്‍ ഡാറ്റാബേസ് ഹാക്ക് ചെയ്ത് ഓപ്പണ്‍ എ.ഐ ഏജന്റ്: അറിഞ്ഞത് മാസങ്ങള്‍ക്കുശേഷം

ന്യൂയോര്‍ക്ക്: ഓസ്‌ട്രേലിയയുടെ ആരോഗ്യവകുപ്പിന്റെ വെബ്‌സൈറ്റ് ഹാക്ക് ചെയ്ത് സ്വകാര്യഡാറ്റയിലേക്ക് നുഴഞ്ഞുകയറി ഓപ്പണ്‍...

தேர்தல் ஆணையம்: “இதனால்தான் இந்த விவகாரம் சர்ச்சையாகியுள்ளது..!" – முன்னாள் ஆணையர் சொல்வதென்ன?

தேர்தல் ஆணையத்தில் பெரும்பான்மை உறுப்பினர்களின் ஆதரவோ அல்லது ஒருமித்த கருத்தோ இன்றி...

AP Liquor Shops: లిక్కర్ షాపులపై కీలక నిర్ణయం.. ఇక రెన్యువల్ గడువు పొడిగింపు లేదు..!

AP Liquor Shops: ఆంధ్రప్రదేశ్‌లో 2026–27 ఎక్సైజ్ సంవత్సరానికి ఏ4 మద్యం...

കുടുംബ കലഹങ്ങള്‍ വേണ്ട; എ.ഐ ക്യാമറ നിയമ ലംഘന നോട്ടീസുകളില്‍ ചിത്രങ്ങള്‍ ഒഴിവാക്കാന്‍ എം.വി.ഡി

തിരുവനന്തപുരം: മോട്ടോര്‍ വാഹന വകുപ്പിന്റെ എ.ഐ ക്യാമറകള്‍ വഴിയുള്ള നിയമലംഘനങ്ങള്‍ പരിശോധിക്കുന്നതിനുള്ള...