10
May, 2026

A News 365Times Venture

10
Sunday
May, 2026

A News 365Times Venture

ವಿಜಯಪುರ ಮಿನಿ ತಾರಾಲಯಕ್ಕೆ 12.88 ಕೋಟಿ, ವಸತಿ ಶಾಲೆಗಳಿಗೆ  44 ಕೋಟಿ ರೂ. ವೆಚ್ಚಕ್ಕೆ ಅಸ್ತು- ಸಚಿವ ಎಂ.ಬಿ ಪಾಟೀಲ್

Date:

ಬೆಂಗಳೂರು,ಫೆಬ್ರವರಿ,22,2025 (www.justkannada.in): ವಿಜಯಪುರದಲ್ಲಿ ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಕಿರು ತಾರಾಲಯ (ಮಿನಿ ಪ್ಲಾನೆಟೇರಿಯಂ) ಹಾಗೂ ಬಬಲೇಶ್ವರ ಮತ್ತು ವಿಜಯಪುರದಲ್ಲಿ ಎರಡು ಹಾಸ್ಟೆಲ್ ಗಳ ನಿರ್ಮಾಣಕ್ಕೆ ಒಟ್ಟು ₹56.88 ಕೋಟಿ ವ್ಯಯಿಸಲು ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ ಪಾಟೀಲ್ ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಸಚಿವ ಎಂ.ಬಿ ಪಾಟೀಲ್ ಅವರು, `2015-16ನೇ ಸಾಲಿನ ಬಜೆಟ್ ನಲ್ಲೇ ವಿಜಯಪುರವೂ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಕಿರು ತಾರಾಲಯ ಸ್ಥಾಪಿಸುವ ಘೋಷಣೆ ಮಾಡಲಾಗಿತ್ತು. ಆದರೆ ಕಾರಣಾಂತರಗಳಿಂದ ಇದು ಅನುಷ್ಠಾನಕ್ಕೆ ಬರಲಿಲ್ಲ. ಈಗ ₹12.88 ಕೋಟಿಗೆ ಪರಿಷ್ಕೃತ ಅಂದಾಜು ಪಟ್ಟಿ ಸಿದ್ಧಪಡಿಸಿದ್ದು, ಇದಕ್ಕೆ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಒಪ್ಪಿಗೆ ಕೊಡಲಾಗಿದೆ. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಮೂಲಕ ಈ ಯೋಜನೆ ಕಾರ್ಯಗತಗೊಳ್ಳಲಿದೆ’ ಎಂದಿದ್ದಾರೆ.

ವಿಜಯಪುರದಲ್ಲಿ ಈ ಯೋಜನೆಯ ಕಾಮಗಾರಿಗೆ ಇದುವರೆಗೆ 1.44 ಕೋಟಿ ರೂ. ವೆಚ್ಚವಾಗಿದೆ. ತಾರಾಲಯದಲ್ಲಿ ಡೋಮ್, ಪ್ರೊಜಕ್ಷನ್ ಸಿಸ್ಟಂ, ಒಳಾಂಗಣ, ಹೊರಾಂಗಣ ವಿಜ್ಞಾನ ಪ್ರದರ್ಶಿಕೆಗಳು, ಆಡಿಯೋ ವ್ಯವಸ್ಥೆ, ಹವಾ ನಿಯಂತ್ರಣ ವ್ಯವಸ್ಥೆ ಎಲ್ಲವೂ ಇರಲಿದೆ. ಇದರ ಮೂಲಕ ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ತಿಳಿವಳಿಕೆಯನ್ನು ಹೆಚ್ಚಿಸಲಾಗುವುದು. ನನೆಗುದಿಗೆ ಬಿದ್ದಿದ್ದ ಈ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ತಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆದಿದ್ದಾಗಿ ಅವರು ತಿಳಿಸಿದ್ದಾರೆ.

2 ವಸತಿ ಶಾಲೆಗಳಿಗೆ ಸ್ವಂತ ಕಟ್ಟಡ

ಬಬಲೇಶ್ವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮಮದಾಪುರದಲ್ಲಿರುವ, ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಡಾ.ಬಿ ಆರ್ ಅಂಬೇಡ್ಕರ್ ವಸತಿ ಶಾಲೆ ಮತ್ತು ವಿಜಯಪುರದಲ್ಲಿರುವ ವಸತಿಸಹಿತ ಪದವಿಪೂರ್ವ ಕಾಲೇಜಿಗೆ ಸ್ವಂತ ಕಟ್ಟಡಕ್ಕಾಗಿ ತಲಾ 22 ಕೋಟಿ ರೂ.ಗಳಂತೆ ಒಟ್ಟು 44 ಕೋಟಿ ರೂ. ಒದಗಿಸಲು ಕೂಡ ಸಂಪುಟ ಸಭೆಯಲ್ಲಿ ಹಸಿರು ನಿಶಾನೆ ಸಿಕ್ಕಿದೆ ಎಂದು ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

ಈ ಎರಡೂ ವಸತಿ ಶಾಲೆಗಳು ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಮೀಸಲಾಗಿದ್ದು, ಇಲ್ಲಿ ತಲಾ 250ರಂತೆ ಒಟ್ಟು 500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈಗ ಇವು ಬಾಡಿಗೆ ಕಟ್ಟಡದಲ್ಲಿ ಇರುವುದರಿಂದ ಮೂಲಸೌಕರ್ಯ ಒದಗಿಸಲು ಸಾಧ್ಯವಾಗಿಲ್ಲ. ಹೊಸ ಕಟ್ಟಡಗಳಲ್ಲಿ ಶಾಲಾ ಕಟ್ಟಡ, ಬಾಲಕರ ಮತ್ತು ಬಾಲಕಿಯರ ಹಾಸ್ಟೆಲ್, ಭೋಜನಾಲಯ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ವಸತಿ ಗೃಹಗಳು, ರಂಗಮಂದಿರ, ಕಾಂಪೌಂಡ್, ಸೋಲಾರ್ ವಾಟರ್ ಹೀಟರ್, ಒಳಚರಂಡಿ ವ್ಯವಸ್ಥೆ ಮುಂತಾದವು ಇರಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿರುವ 61 ವಸತಿ ಶಾಲೆಗಳಿಗೆ ಸ್ವಂತ ಕಟ್ಟಡಕ್ಕಾಗಿ ಒಟ್ಟು 1292.50 ಕೋಟಿ ರೂ. ಒದಗಿಸಲು ಸರಕಾರ ತೀರ್ಮಾನಿಸಿದೆ. ಇದರಲ್ಲಿ ಜಿಲ್ಲೆಯ ಈ ಎರಡು ಶಾಲೆಗಳೂ ಸೇರಿವೆ ಎಂದು ಎಂ.ಬಿ ಪಾಟೀಳ್ ಅವರು ಹೇಳಿದ್ದಾರೆ.

Key words: Minister, MB Patil, Vijayapur

The post ವಿಜಯಪುರ ಮಿನಿ ತಾರಾಲಯಕ್ಕೆ 12.88 ಕೋಟಿ, ವಸತಿ ಶಾಲೆಗಳಿಗೆ  44 ಕೋಟಿ ರೂ. ವೆಚ್ಚಕ್ಕೆ ಅಸ್ತು- ಸಚಿವ ಎಂ.ಬಿ ಪಾಟೀಲ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

മുഖ്യനാരെന്നറിയാന്‍ ഇനിയും കാത്തിരിക്കണം; ഫ്‌ളകസ് യുദ്ധം അവസാനിപ്പിക്കണമെന്ന് നേതാക്കള്‍

ന്യൂദല്‍ഹി: കേരള മുഖ്യമന്ത്രിയെ തെരഞ്ഞെടുക്കാനുള്ള ചര്‍ച്ചയ്ക്ക് വിരാമം. ഏകദേശം മൂന്ന് മണിക്കൂര്‍...

TVK: 'குஜராத் நிலநடுக்கம், ஜல்லிக்கட்டு…'- அடித்தளம் முதல் அரியணை வரை; விஜய்யின் அரசியல் டைம்லைன்!

தமிழக வெற்றிக் கழகம், சட்டமன்றத் தேர்தலில் தனிப்பெரும் கட்சியாக வென்று சாதித்திருக்கிறது....

Mothers Day Special: మాతృత్వానికి ప్రణామం.. సృష్టికి ప్రతిరూపం.. సహనానికి నిలువుటద్దం “అమ్మ”

Mothers Day Special: సృష్టిలో ఏ జీవికైనా జన్మనిచ్చేది స్త్రీ. ఒక...

ಆಡಳಿತ ಪಕ್ಷದ ಸೂರ್ಯ ಮುಳುಗುತ್ತಿದೆ: ಬಿಎಸ್ ವೈ ಮೂಲಕ ನಮ್ಮ ಸರ್ಕಾರ ಬರಲಿ-  ಬಸವರಾಜ್ ಬೊಮ್ಮಾಯಿ

ಚಿತ್ರದುರ್ಗ,ಮೇ,9,2026 (www.justkannada.in):  ರಾಜ್ಯದಲ್ಲಿ ಆಡಳಿತ ಪಕ್ಷದ ಸೂರ್ಯ ಮುಳುಗುತ್ತಿದೆ ಬಿಎಸ್...