19
March, 2025

A News 365Times Venture

19
Wednesday
March, 2025

A News 365Times Venture

ಜಿ.ಪಂ, ತಾ.ಪಂ ಚುನಾವಣೆ ಯಾವಾಗ?  ಹೈಕೋರ್ಟ್ ಗೆ ಸ್ಪಷ್ಟನೆ ಕೊಟ್ಟ ರಾಜ್ಯ ಸರ್ಕಾರ

Date:

ಬೆಂಗಳೂರು, ಫೆಬ್ರವರಿ,17,2025 (www.justkannada.in): ಮೇ ತಿಂಗಳ ಬಳಿಕ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆ ನಡೆಸುವುದಾಗಿ ಹೈಕೋರ್ಟ್​ ಗೆ  ಅಡ್ವೊಕೆಟ್ ಜನರಲ್ ಶಶಿಕಿರಣ್ ಶೆಟ್ಟಿ  ಮಾಹಿತಿ ನೀಡಿದ್ದಾರೆ.

3 ವರ್ಷಗಳಾದರೂ ಜಿಲ್ಲಾ ಹಾಗೂ ತಾಲೂಕು ಪಂಚಾಯಿತ್ ಚುನಾವಣೆ ನಡೆಸದ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ‌ ಅರ್ಜಿ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನಡೆಯಿತು. ಈ ವೇಳೆ ವಾದ ಮಂಡಿಸಿದ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್.ಫಣೀಂದ್ರ ಅವರು,  ಮುಂದೆ ಸರ್ಕಾರ ಮೀಸಲಾತಿ ಪಟ್ಟಿ ನೀಡಿದರೆ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ಹೇಳಿದರು.

ಈ ವೇಳೆ ಅಡ್ವೊಕೆಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ಮೇ ತಿಂಗಳ ಬಳಿಕ ಎಲೆಕ್ಷನ್ ನಡೆಸುವುದಾಗಿ ತಿಳಿಸಿದರು. ಮೇ ತಿಂಗಳೊಳಗೆ ಮೀಸಲಾತಿ ಪ್ರಕಟಿಸಲಾಗುತ್ತೆ. ಮೇ ಅಂತ್ಯದೊಳಗೆ ಮೀಸಲಾತಿ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಕೊಡಲಾಗುವುದು ಎಂದು ತಿಳಿಸಿದರು. ಈ ಹೇಳಿಕೆ ದಾಖಲಿಸಿಕೊಂಡು ಹೈಕೋರ್ಟ್ ಅರ್ಜಿ ಇತ್ಯರ್ಥಪಡಿಸಿತು.

Key words: ZP, TP, election, state government, High Court

The post ಜಿ.ಪಂ, ತಾ.ಪಂ ಚುನಾವಣೆ ಯಾವಾಗ?  ಹೈಕೋರ್ಟ್ ಗೆ ಸ್ಪಷ್ಟನೆ ಕೊಟ್ಟ ರಾಜ್ಯ ಸರ್ಕಾರ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಪಿ.ಯು. ಉಪನ್ಯಾಸಕರ ಸಂಘದ ಅಧ್ಯಕ್ಷರಿಂದ ನಕಲಿ ದಾಖಲೆ ಸಲ್ಲಿಕೆ ಆರೋಪ.?

ಮೈಸೂರು, ಮಾ.18, 2025:  ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ...

നിയമവിരുദ്ധമായി പ്രവര്‍ത്തിക്കുന്നെന്ന് ആരോപിച്ച് ഉത്തരാഖണ്ഡിലെ 84 മദ്രസകള്‍ അടച്ചുപൂട്ടി ബി.ജെ.പി സര്‍ക്കാര്‍

ഡെറാഡൂണ്‍: നിയമവിരുദ്ധമായി പ്രവര്‍ത്തിക്കുന്നുവെന്ന് ആരോപിച്ച് ഉത്തരാഖണ്ഡിലെ 84 മദ്രസകള്‍ അടച്ചുപൂട്ടി ബി.ജെ.പി...

`ஊதியம் கிடையாது' – போராட்டம் அறிவித்த அரசு ஊழியர்களுக்கு, தமிழ்நாடு அரசு எச்சரிக்கை

பழைய ஓய்வூதிய திட்டத்தை மீண்டும் அமல்படுத்த வேண்டும், பகுதி நேர ஆசிரியர்கள்...

Atreyapuram Pootharekulu: ఆత్రేయపురం కల్తీ నెయ్యి ఘటన.. ల్యాబ్ పరిశీలనలో వెలుగులోకి కీలక వాస్తవాలు!

అంబేద్కర్ కోనసీమ జిల్లా ఆత్రేయపురంలోని కొన్ని పూతరేకుల దుకాణాల్లో వాడింది కల్తీ...