19
March, 2025

A News 365Times Venture

19
Wednesday
March, 2025

A News 365Times Venture

ಯುವ ಜನತೆಯಲ್ಲಿ ಹಠಾತ್ ಸಾವು: ತನಿಖೆ ನಡೆಸಲು ತಜ್ಞರ ಸಮಿತಿ ರಚನೆಗೆ ಸಿಎಂ ಸಿದ್ದರಾಮಯ್ಯ ಸೂಚನೆ

Date:

ಬೆಂಗಳೂರು,ಫೆಬ್ರವರಿ,7,2025 (www.justkannada.in): ಇತ್ತೀಚಿನ ದಿನಗಳಲ್ಲಿ ಯುವಜನತೆಯಲ್ಲಿ ಕಂಡುಬರುತ್ತಿರುವ ಹಠಾತ್ ಹೃದಯಾಘಾತ,  ಸಾವು ಪ್ರಕರಣಗಳ ಬಗ್ಗೆ ಗಂಭೀರವಾಗಿ ಪರಿಗಣಿಸಿರುವ  ರಾಜ್ಯ ಸರ್ಕಾರ ಈ ಪ್ರಕರಣಗಳ ಬಗ್ಗೆ ತನಿಖೆ ನಡೆಸುವುದಕ್ಕೆ ತಜ್ಞರ ಸಮಿತಿಯೊಂದನ್ನು ರಚಿಸಲು ಮುಂದಾಗಿದೆ.

ಈ ಬಗ್ಗೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ  ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ತಮ್ಮ ಇ-ಮೇಲ್ ಮೂಲಕ ಇತ್ತೀಚಿಗೆ ರಾಜ್ಯದಲ್ಲಿ ಹೃದಯಾಘಾತ, ಹೃದಯಸ್ತಂಭನ, ಮೆದುಳು ಸಂಬಂಧಿ, ನರ ಸಂಬಂಧಿ ಮತ್ತಿತರ ಕಾರಣಗಳಿಂದಾಗಿ ಯುವ ಜನರು ಹಠಾತ್ ಸಾವಿಗೀಡಾಗುತ್ತಿರುವುದು ದಿನಪತ್ರಿಕೆಗಳಲ್ಲಿ ವರದಿಯಾಗುತ್ತಿದ್ದು, ಪ್ರತಿ ಸಾವು ಅವರ ಅವಲಂಬಿತ ಕುಟುಂಬಗಳನ್ನು ಆರ್ಥಿಕ-ಸಾಮಾಜಿಕ ಸಮಸ್ಯೆಗಳಿಗೆ ತಳ್ಳುತ್ತಿದೆ ಎಂದು ತಿಳಿಸಿರುತ್ತಾರೆ. ಈ ಸಾವುಗಳು ಕೋವಿಡ್ ಅಥವಾ ಕೋವಿಡ್ ಲಸಿಕೆಯ ಅಡ್ಡ ಪರಿಣಾಮಗಳ ಕಾರಣಕ್ಕೆ ಸಂಭವಿಸುತ್ತಿರಬಹುದೆಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಆದ್ದರಿಂದ, ಕೋವಿಡ್ ಅಥವಾ ಕೋವಿಡ್ ಲಸಿಕೆಯ ಅಡ್ಡ ಪರಿಣಾಮಗಳಿಂದ ಹಠಾತ್ ಸಾವಿಗೀಡಾದವರ ಬಗ್ಗೆ ಅಧ್ಯಯನ ನಡೆಸಿ, ಇಂತಹ ಸಾವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೋರಿದ್ದಾರೆ.

ಆದ್ದರಿಂದ, ಇಂತಹ ಹಠಾತ್ ಸಾವುಗಳ ಕುರಿತಂತೆ ಹಾಗೂ ಮುಂದೆ ಈ ರೀತಿಯ ಸಾವುಗಳು ಸಂಭವಿಸದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಮರ್ಪಕ ಸಂಶೋಧನೆ ನಡೆಸಲು ಒಂದು ತಜ್ಞರ ಹಾಗೂ ವಿಜ್ಞಾನಿಗಳ ಸಮಿತಿಯನ್ನು ರಚಿಸಿ, ವರದಿ ಪಡೆದು, ಅಗತ್ಯ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.

Key words: Sudden deaths, young people, CM Siddaramaiah, expert committee

The post ಯುವ ಜನತೆಯಲ್ಲಿ ಹಠಾತ್ ಸಾವು: ತನಿಖೆ ನಡೆಸಲು ತಜ್ಞರ ಸಮಿತಿ ರಚನೆಗೆ ಸಿಎಂ ಸಿದ್ದರಾಮಯ್ಯ ಸೂಚನೆ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

നിയമവിരുദ്ധമായി പ്രവര്‍ത്തിക്കുന്നെന്ന് ആരോപിച്ച് ഉത്തരാഖണ്ഡിലെ 84 മദ്രസകള്‍ അടച്ചുപൂട്ടി ബി.ജെ.പി സര്‍ക്കാര്‍

ഡെറാഡൂണ്‍: നിയമവിരുദ്ധമായി പ്രവര്‍ത്തിക്കുന്നുവെന്ന് ആരോപിച്ച് ഉത്തരാഖണ്ഡിലെ 84 മദ്രസകള്‍ അടച്ചുപൂട്ടി ബി.ജെ.പി...

`ஊதியம் கிடையாது' – போராட்டம் அறிவித்த அரசு ஊழியர்களுக்கு, தமிழ்நாடு அரசு எச்சரிக்கை

பழைய ஓய்வூதிய திட்டத்தை மீண்டும் அமல்படுத்த வேண்டும், பகுதி நேர ஆசிரியர்கள்...

Atreyapuram Pootharekulu: ఆత్రేయపురం కల్తీ నెయ్యి ఘటన.. ల్యాబ్ పరిశీలనలో వెలుగులోకి కీలక వాస్తవాలు!

అంబేద్కర్ కోనసీమ జిల్లా ఆత్రేయపురంలోని కొన్ని పూతరేకుల దుకాణాల్లో వాడింది కల్తీ...

ತಲೆಯಲ್ಲಿ ಕೂದಲಿಲ್ಲ ಎಂದು ಪತ್ನಿಯಿಂದ ನಿಂದನೆ: ಪತಿ ಆತ್ಮಹತ್ಯೆಗೆ ಶರಣು

ಚಾಮರಾಜನಗರ,ಮಾರ್ಚ್,17,2025 (www.justkannada.in): ತಲೆಯಲ್ಲಿ ಕೂದಲಿಲ್ಲ ಎಂದು ಪತ್ನಿ  ನಿಂದಿಸಿದ್ದಕ್ಕೆ  ಪತಿ...