3
March, 2026

A News 365Times Venture

3
Tuesday
March, 2026

A News 365Times Venture

ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಮೂವರು ಅಧಿಕಾರಿಗಳು

Date:

ಬೆಂಗಳೂರು,ಜನವರಿ,31,2025 (www.justkannada.in): ಲಂಚ ಸ್ವೀಕರಿಸುವ ವೇಳೆ ಆರ್ ಐ ಮತ್ತು ಇಬ್ಬರು  ಗ್ರಾಮಲೆಕ್ಕಾಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರದಲ್ಲಿ ನಡೆದಿದೆ.

ಜಮೀನು ಪೌತಿ ಖಾತೆ ಮಾಡಿಕೊಡಲು ವ್ಯಕ್ತಿಯೊಬ್ಬರ ಬಳಿ 2.5 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಎಳುವಳ್ಳಿ ಗ್ರಾಮಲೆಕ್ಕಾಧಿಕಾರಿ ಮಡಿವಾಳಪ್ಪ ಹಾಗೂ ವಿಜಯಪುರ ಗ್ರಾಮಲೆಕ್ಕಾಧಿಕಾರಿ ಸುನಿಲ್ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಿದ್ದು ವಿಜಯಪುರದ ಆರ್‌ ಐ ಸತ್ಯನಾರಾಯಣ ಪರಾರಿಯಾಗಿದ್ದಾರೆ.

ಮೂವರು ಅಧಿಕಾರಿಗಳು ಗೌತಮ್ ಎನ್ನುವವರ ಬಳಿ ಜಮೀನು ಪೌತಿ ಖಾತೆ ಪೋಡಿ ಮಾಡಿಕೊಡಲು 2.5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.  ಈ ವೇಳೆ ಲಂಚ ಸ್ವೀಕರಿಸುತ್ತಿದ್ದ ಇಬ್ಬರು ಗ್ರಾಮ ಲೆಕ್ಕಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಲೋಕಾಯುಕ್ತ ಎಸ್ಪಿ ಪವನ್ ನೆಜ್ಜುರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

Key words: Three officials, accepting, bribe, Lokayukta, Raid

The post ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಮೂವರು ಅಧಿಕಾರಿಗಳು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಬಾಕಿ ಬಿಡುಗಡೆಗೆ ಆಗ್ರಹಿಸಿ ಸಿಎಂ ಕ್ಷೇತ್ರದಿಂದ ಪಾದಯಾತ್ರೆಗೆ ನಿರ್ಧಾರ- ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್

ಬೆಂಗಳೂರು, ಮಾರ್ಚ್,3,2026 (www.justkannada.in):  ಗುತ್ತಿಗೆದಾರರ ಬಾಕಿ ಬಿಲ್ ಬಿಡುಗಡೆ ಮಾಡುವಂತೆ...

നിശബ്ദത നിഷ്പക്ഷതയല്ല; ഖാംനഇയുടെ കൊലപാതകത്തില്‍ പ്രതികരിക്കാത്ത കേന്ദ്രത്തിനെതിരെ സോണിയ ഗാന്ധിയും രാഹുല്‍ ഗാന്ധിയും

ന്യൂദല്‍ഹി: യു.എസ്-ഇസ്രഈല്‍ ആക്രമണത്തില്‍ ഇറാന്റെ പരമോന്നത നേതാവ് ആയത്തുള്ള അലി ഖാംനഇ...

హోలీ కానుకగా.. ‘కాంచన’ మూవీ ఫ్యాన్స్‌కు గుడ్ న్యూస్..

దక్షిణాది చిత్ర పరిశ్రమలో హారర్ కామెడీ జానర్‌కు కొత్త అర్థం చెప్పిన...