12
March, 2026

A News 365Times Venture

12
Thursday
March, 2026

A News 365Times Venture

ಮೈಸೂರು: ಐದು ಮೈಕ್ರೋ ಫೈನಾನ್ಸ್ ಗಳ ವಿರುದ್ಧ FIR ದಾಖಲು

Date:

ಮೈಸೂರು,ಜನವರಿ,27,2025 (www.justkannada.in): ಸಿಎಂ ಸಿದ್ದರಾಮಯ್ಯ ಅವರ ಅಭಯದ ನಡುವೆಯೂ ಮೈಕ್ರೋ ಫೈನಾನ್ಸ್ ಹಾವಳಿಗೆ ನಂಜನಗೂಡು ತಾಲ್ಲೂಕಿನಲ್ಲಿ ಎರಡು ಜೀವಗಳು ಬಲಿಯಾಗಿದ್ದು ಈ ಮಧ್ಯೆ ಇದೀಗ  ನಂಜನಗೂಡಿನ ಐದು ಮೈಕ್ರೋ ಫೈನಾನ್ಸ್ ಗಳ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಮಲ್ಕುಂಡಿ ಗ್ರಾಮದ ಕೃಷ್ಣಮೂರ್ತಿ ಎಂಬುವವರು ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಹಿನ್ನೆಲೆ ನಂಜನಗೂಡಿನ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೈಕ್ರೋ ಫೈನಾನ್ಸ್ ನ ಇನ್ನಷ್ಟು ಸಂಘಗಳ ಮೇಲೆ ಎಫ್ ಐಆರ್ ದಾಖಲಾಗು  ಸಾಧ್ಯತೆ ಇದೆ.

ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ನಂಜನಗೂಡು ತಾಲೂಕಿನ ಅಂಬಳೆ ಗ್ರಾಮದ 53 ವರ್ಷದ ಜಯಶೀಲ ಔಷಧಿ ಸೇವಿಸಿ ಸಾವನ್ನಪ್ಪಿದ್ದರೇ ‌  ಮಾಲ್ಕುಂಡಿ ಗ್ರಾಮದ 32 ವರ್ಷದ ಕೃಷ್ಣಮೂರ್ತಿ ಎಂಬುವವರು ಮನೆಯಲ್ಲಿಯೇ ನೇಣಿಗೆ  ಶರಣಾಗಿದ್ದರು.

ಜಯಶೀಲ ಮಹಿಳಾ ಸ್ವಸಹಾಯ ಸಂಘಗಳಲ್ಲಿ‌ ಐದು ಲಕ್ಷ‌ಸಾಲ‌ ಮಾಡಿದ್ರೆ, ಕೃಷ್ಣಮೂರ್ತಿ,  ಧರ್ಮಸ್ಥಳ ಮಹಿಳಾ ಸ್ವಸಹಾಯ ಸಂಘ, ಉಜ್ಜೀವನ್ ಫೈನಾನ್ಸ್ ಸೇರಿ ಐದು ಕಡೆ ನಾಲ್ಕು ಲಕ್ಷ ಸಾಲ ಪಡೆದಿದ್ದರು.

ಇಬ್ಬರು ಮೃತರು ತಮ್ಮ ಕುಟುಂಬ ನಿರ್ವಹಣೆಗೆ ಸಾಲ ಮಾಡಿ, ಸಾಲ ತೀರಿಸಲಾಗದೆ ಸಾವನ್ನಪ್ಪಿದ್ದರು. ಹೀಗಾಗಿ ಈ‌ ಸಾವುಗಳಿಗೆ ಮೈಕ್ರೋ ಫೈನಾನ್ಸ್ ಗಳೇ ಕಾರಣ ಎಂದು ಮೈಸೂರಿನ ಜಿಲ್ಲಾಧಿಕಾರಿ ಕಚೇರಿ, ನಂಜನಗೂಡಿನ ಸರ್ಕಾರಿ‌ ಆಸ್ಪತ್ರೆ ಶವಾಗಾರದ ಬಳಿ ಪ್ರತ್ಯೇಕ ಪ್ರತಿಭಟನೆಗಳು ನಡೆದವು.

ಇದನ್ನ ಗಮನಿಸಿದ ಶಾಸಕ ದರ್ಶನ್ ಧ್ರುನಾರಾಯಣ್ ಮೈಕ್ರೋಫೈನಾನ್ಸ್ ಗಳ ವಿರುದ್ಧ ಕಿಡಿಕಾರಿ, ಮುಂದೆ ಇಂತಹ ತಪ್ಪು ನಡೆಯಲು ಬಿಡಲ್ಲ  ಎಂದು ಅಭಯ ನೀಡಿದ್ದರು.  ಇದರ ಬೆನ್ನಲ್ಲೆ ಹುಲ್ಲಹಳ್ಳಿ ಠಾಣಾ ಪೊಲೀಸರು ಧರ್ಮಸ್ಥಳ ಮಹಿಳಾ ಸ್ವಸಹಾಯ ಸಂಘ ಸೇರಿ ‌ಐದು ಖಾಸಗಿ ಫೈನಾನ್ಸ್ ಗಳ ವಿರುದ್ಧ ಎಫ್‌ಐ ಆರ್ ದಾಖಲು ಮಾಡಿದ್ದಾರೆ.

ಅತ್ತ, ಮೊನ್ನೆ ಪಿರಿಯಾಪಟ್ಟಣದಲ್ಲಿ ಮೈಕ್ರೋಫೈನಾನ್ಸ್ ಸಿಬ್ಬಂದಿ ಎದೆಗೆ ಗುಂಡಿಟ್ಟು‌ ಬೆದರಿಸಿದ್ದ‌ ಪ್ರಕರಣ ಸದ್ದು ಮಾಡಿತ್ತು. ಆರೋಪಿಯನ್ನ ಬಂಧಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರು ಸ್ವತಃ ವಿವರಣೆ ಕೇಳಿ ಬೆದರಿಕೆಯೊಡ್ಡಿದ್ದ ಪುನೀತ್ ವಿರುದ್ಧ ಎಫ್ ಐಆರ್ ದಾಖಲಿಸಿದ್ದರು. ಬಳಿಕ ಆತನನ್ನ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Key words: Mysore, FIR, against, five microfinance

The post ಮೈಸೂರು: ಐದು ಮೈಕ್ರೋ ಫೈನಾನ್ಸ್ ಗಳ ವಿರುದ್ಧ FIR ದಾಖಲು appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

ಒಳಮೀಸಲಾತಿ ಜಾರಿಗೆ ಬದ್ದ: ಒತ್ತಡ ಹಾಕುವ ಅವಶ್ಯಕತೆ ಇಲ್ಲ-ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ಮಾರ್ಚ್,11,2026 (www.justkannada.in): ಒಳ ಮೀಸಲಾತಿ ಗೊಂದಲದಿಂದಾಗಿ ನೇಮಕಾತಿಗಳಿಗೆ ತಡೆ ಬಿದ್ದಿದ್ದು...

ബത്തേരിയിലെ ശുചീകരണ തൊഴിലാളികളെ പിരിച്ചുവിടാന്‍ യു.ഡി.എഫ് ഭരണസമിതി; പ്രതിഷേധം

ബത്തേരി: സുല്‍ത്താന്‍ ബത്തേരിയിലെ ശുചീകരണ തൊഴിലാളികളെ പിരിച്ചുവിടാന്‍ യു.ഡി.എഫ് ഭരണസമിതിയുടെ നീക്കം....

`மக்கள் திமுக அரசை தூக்கி எறிய விரும்புகிறார்கள்; NDA மட்டுமே…' – திருச்சியில் பிரதமர் மோடி உரை

தமிழ்நாடு சட்டமன்றத் தேர்தலுக்கான களம் பரபரக்கிறது. தொடர்ந்து முக்கிய அரசியல் கட்சித்...

Interest Rates Hike: ఆ బ్యాంక్‌లో లోన్ తీసుకున్న వారికి బిగ్‌షాక్..పెరగనున్న వడ్డీ రేట్లు..

సొంత ఇల్లు కట్టుకోవాలన్నా లేదా వ్యాపారాన్ని విస్తరించాలన్నా చాలామంది బ్యాంక్ రుణాలపైనే...