ವಿಜಯಪುರ,ಜನವರಿ,25,2025 (www.justkannada.in): ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಲು ಶೀಘ್ರದಲ್ಲೇ ಬಲಿಷ್ಠ ಕಾನೂನು ಜಾರಿ ಮಾಡಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
ಈ ಕುರಿತು ಇಂದು ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಮೈಕ್ರೋಫೈನಾನ್ಸ್ ಹಾವಳಿ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಕಠಿಣ ಕ್ರಮ ಕೈಗೊಳ್ಳಲು ಬಲಿಷ್ಠ ಕಾನೂನು ತರಲು ಸ್ಪಷ್ಟ ಸೂಚನೆ ನೀಡಿದ್ದಾರೆ. ಮೈಕ್ರೋಫೈನಾನ್ಸ್ ಹಾವಳಿ ಹೆಚ್ಚಾಗಿದೆ. ಹೀಗಾಗಿ ಇದನ್ನು ಮಟ್ಟ ಹಾಕಲು ಬಲಿಷ್ಠ ಕ್ರಮ ಕೈಗೊಳ್ಳಲು ನಮ್ಮೆಲ್ಲರ ಸಮ್ಮುಖದಲ್ಲಿಯೇ ಸೂಚಿಸಿದ್ದಾರೆ ಎಂದರು.
ಈ ಪ್ರಕರಣ ಕುರಿತು ಹಗುರವಾಗಿ ತೆಗೆದುಕೊಳ್ಳುವುದು ಬೇಡ. ಇದೊಂದು ಗಂಭೀರ ವಿಷಯವಾಗಿದ್ದು ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಕೂಡ ಅಷ್ಟೇ ಗಂಭೀರವಾಗಿದ್ದಾರೆ ಎಂದರು.
ಮುಡಾ ಹಗರಣಖ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚಿಟ್ ವಿಚಾರ ಬಿಜೆಪಿಯವರ ಟೀಕೆ ಕುರಿತು ಪ್ರತಿಕ್ರಿಯಿಸಿದ ಎಂ.ಬಿ ಪಾಟೀಲ್, ಲೋಕಾಯುಕ್ತದ ಮೇಲೆ ಬಿಜೆಪಿಯವರಿಗೆ ನಂಬಿಕೆ ಇಲ್ಲವೇ? ಸಿಬಿಐ ತನಿಖೆ ಇದೆ ಎಂದರೆ ಅರ್ಥ ಏನು? ಸಿಬಿಐ ಬಿಜೆಪಿಯ ಅಂಗ ಸಂಸ್ಥೆಯಾ? ಎಂದು ಕಿಡಿಕಾರಿದರು.
Key words: Strong law, strict action, microfinance, harassment, Minister, M.B. Patil
The post ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಶೀಘ್ರದಲ್ಲೇ ಬಲಿಷ್ಠ ಕಾನೂನು, ಕಠಿಣ ಕ್ರಮ- ಸಚಿವ ಎಂ.ಬಿ ಪಾಟೀಲ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.