ಮೈಸೂರು,ಜನವರಿ,20,2025 (www.justkannada.in): ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ ಶ್ಯಾಮ್ ಭಟ್ ಅವರು ಇಂದು ಮೈಸೂರಿನ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಕೈದಿಗಳ ಜೊತೆ ಸಂವಾದ ನಡೆಸಿದರು.
ಇತ್ತೀಚೆಗೆ ಮೈಸೂರಿನ ಕಾರಾಗೃಹದಲ್ಲಿ ಎಸೆನ್ಸ್ ಸೇವನೆ ಮಾಡಿ ಮೂರು ಜನ ಕೈದಿಗಳು ಸಾವನ್ನಪ್ಪಿದ್ದರು. ಈ ಪ್ರಕರಣ ಸಂಬಂಧ ಇಂದು ಮೈಸೂರಿನ ಕೇಂದ್ರ ಕಾರಾಗೃಹಕ್ಕೆ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ ಶ್ಯಾಮ್ ಭಟ್ ಭೇಟಿ ನೀಡಿದ್ದಾರೆ.
ಅಧ್ಯಕ್ಷ ಶ್ಯಾಮ್ ಭಟ್ ಗೆ ಸದಸ್ಯ ಎಸ್.ಕೆ. ವೆಂಟಿಗೋಡಿ ಸಾಥ್ ನೀಡಿದ್ದು ಕಾರಾಗೃಹದ ಅಧೀಕ್ಷಕ ಪಿಎಸ್ ರಮೇಶ್ ಮತ್ತು ಸಿಬ್ಬಂದಿಗಳು ಅವರನ್ನು ಸ್ವಾಗತಿಸಿದರು. ಕಾರಾಗೃಹದಲ್ಲಿ ಜೈಲಿನ ಕುಂದುಕೊರತೆಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಡಾ.ಟಿ.ಶ್ಯಾಮ್ ಭಟ್ ಕೈದಿಗಳ ಜೊತೆ ಸಂವಾದ ನಡೆಸಿದರು. ಇನ್ನು ಜೈಲಿನ ಒಳಗಡೆಗೆ ಮಾಧ್ಯಮ ಪ್ರತಿನಿಧಿಗಳ ಒಳ ಪ್ರವೇಶಕ್ಕೆ ಅಧಿಕಾರಿಗಳು ಅವಕಾಶ ಮಾಡಿಕೊಡಲಿಲ್ಲ ಎನ್ನಲಾಗಿದೆ.
Key words: State Human Rights Commission Chairman, Dr. T. Shyam Bhat, visits, Mysore Central Jail
The post ಮೈಸೂರು ಕೇಂದ್ರ ಕಾರಾಗೃಹಕ್ಕೆ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ ಶ್ಯಾಮ್ ಭಟ್ ಭೇಟಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.