ಬೆಂಗಳೂರು ,ಜನವರಿ,18,2025 (www.justkannada.in): ಬೀದರ್ ಮತ್ತು ಮಂಗಳೂರಿನಲ್ಲಿ ಬ್ಯಾಂಕ್ ಹಣ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ದ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಆರ್.ಅಶೋಕ್, ಬಿಹಾರ ರಾಜ್ಯದಂತೆ ಕರ್ನಾಟಕವೂ ಕೂಡ ದರೋಡೆಕೋರರ ರಾಜ್ಯವಾಗುತ್ತಿದೆ. ಬೀದರ್ ನಲ್ಲಿ ಹಾಡು ಹಗಲೇ ದರೋಡೆ ನಡೆದಿದೆ. ಇಲ್ಲಿ ದರೋಡೆ ಮಾಡಿ ವಿಮಾನ ರೈಲುಗಳಲ್ಲಿ ಹೋಗುತ್ತಿದ್ದಾರೆ. ಪೊಲೀಸರು ಬಿಟ್ ನಲ್ಲಿ ಇದ್ದರೂ ಕೂಡ ಯಾರನ್ನು ಬಂಧಿಸಿಲ್ಲ. ಸಿದ್ದರಾಮಯ್ಯ ಪೊಲೀಸ್ ಅಧಿಕಾರಿಗಳ ಸಭೆ ಮಾಡಿಲ್ಲ. ಪೊಲೀಸರು ರಾಜ್ಯದ ಗೌರವವನ್ನು ಮಣ್ಣು ಪಾಲು ಮಾಡಿದ್ದಾರೆ ಎಂದು ಕಿಡಿಕಾರಿದರು.
ಎಲ್ಲಾ ಭಿನ್ನರು ಮೀಟಿಂಗ್ ನಡೆಸುವುದರಲ್ಲಿ ಬ್ಯುಸಿಯಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಮತ್ತು ಸಚಿವರು ಎಲ್ಲರೂ ಡಿನ್ನರ್ ಮೀಟಿಂಗ್ ಮಾಡಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ಇನ್ಮುಂದೆ ಕುರ್ಚಿ ಜಗಳ ಬಿಟ್ಟು ಕೆಲಸ ಮಾಡಿ ಎಂದು ಅರ್.ಅಶೋಕ್ ಗುಡುಗಿದರು.
Key words: Bihar, Karnataka,state , robbers, R. Ashok
The post ಬಿಹಾರದಂತೆ ಕರ್ನಾಟಕವೂ ದರೋಡೆಕೋರರ ರಾಜ್ಯವಾಗುತ್ತಿದೆ- ಆರ್.ಅಶೋಕ್ ವಾಗ್ದಾಳಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.