4
October, 2026

A News 365Times Venture

4
Sunday
October, 2026

A News 365Times Venture

ಫಾರ್ಮ್‌ 7 ಸಲ್ಲಿಸಿದವರ ವಿರುದ್ಧ FIR ದಾಖಲಿಸುವುದನ್ನು ನಿಲ್ಲಿಸಿ-ಆರ್.ಅಶೋಕ್ ಆಗ್ರಹ

Date:

ಬೆಂಗಳೂರು,ಅಕ್ಟೋಬರ್, 3,2026 (www.justkannada.in): ಫಾರ್ಮ್‌ 6, ಫಾರ್ಮ್‌ 7 ಎಲ್ಲವೂ ಸಂವಿಧಾನದತ್ತವಾಗಿ ನೀಡಿರುವ ಅರ್ಜಿಗಳು. ಹೀಗಾಗಿ ಫಾರ್ಮ್‌ 7 ಸಲ್ಲಿಸಿದವರ ವಿರುದ್ಧ ಎಫ್‌ಐಆರ್‌ ದಾಖಲಿಸುವುದನ್ನು ನಿಲ್ಲಿಸಬೇಕು ಎಂದು  ವಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹಿಸಿದರು.

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ವಿಪಕ್ಷ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪೊಲೀಸ್ ಮಹಾ ನಿರ್ದೇಶಕರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್,   ಫಾರ್ಮ್‌ 7 ನೀಡಿರುವುದನ್ನು ವಿರೋಧಿಸಿ ಕಾಂಗ್ರೆಸ್‌ ನಾಯಕರು ಚುನಾವಣಾ ಆಯೋಗದ ಕಚೇರಿ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಫಾರ್ಮ್‌ 7 ನೀಡಿರುವವರ ವಿರುದ್ದ ಕ್ರಿಮಿನಲ್‌ ಕೇಸ್‌ ದಾಖಲಿಸಿ ಬಂಧಿಸಬೇಕೆಂದು ಚುನಾವಣಾಧಿಕಾರಿ ಮೇಲೆ ಒತ್ತಡ  ಹೇರಿದ್ದಾರೆ. ಇದರಿಂದ ಪೊಲೀಸರು ಬಿಜೆಪಿ ಕಾರ್ಯಕರ್ತರ ವಿರುದ್ಧ ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್‌ ಹೇಳಿದಂತೆ ಚುನಾವಣಾ ಆಯೋಗದ ಅಧಿಕಾರಿಗಳು ನಡೆಯಬೇಕು ಎನ್ನುವುದು ಸಂವಿಧಾನ ವಿರೋಧಿ.  ಫಾರ್ಮ್‌ 7 ಮೂಲಕ ಬಾಂಗ್ಲಾ ದೇಶೀಯರ ಮತ ಕೈ ಬಿಟ್ಟು ಹೋಗುತ್ತಿದೆ. ಇದರಿಂದಾಗಿ ಕಾಂಗ್ರೆಸ್‌ಗೆ ಎಲ್ಲ ಕಡೆ ಸೋಲು ಭಯ ಉಂಟಾಗಿದೆ.  ಹೀಗಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಎಲ್ಲ ಸಚಿವರು ಚುನಾವಣಾ ಆಯೋಗದ ಕಚೇರಿ ಮುಂಭಾಗ ಧರಣಿ ಮಾಡಿದ್ದಾರೆ. ಎಂದು ಟೀಕಿಸಿದರು.

Key words: Stop, filing, FIRs ,against, submitted, Form 7, R. Ashoka, demands.

Source link

LEAVE A REPLY

Please enter your comment!
Please enter your name here

Share post:

Popular

More like this
Related

ഇത് ബാബ്രി-മന്ദിർ രാഷ്ട്രീയത്തിനുള്ള സമയമല്ല’: ബംഗാൾ ഉപതെരഞ്ഞെടുപ്പിൽ ന്യൂനപക്ഷ വോട്ട് ലക്ഷ്യമിട്ട് ബി.ജെ.പി

മുർഷിദാബാദ്: പശ്ചിമ ബംഗാളിലെ റെജിനഗർ നിയമസഭാ ഉപതെരഞ്ഞെടുപ്പിൽ പതിവ് രാഷ്ട്രീയ ശൈലി...

செங்கல்பட்டு: "வீடு கட்டித் தந்தும் வீடில்லாத நிலை" – கொடப்பட்டணம் இருளர்களின் கோரிக்கை என்ன?

செங்கல்பட்டு மாவட்டம், செய்யூர் வட்டம், கொடப்பட்டணத்தில் உள்ள இருளர் குடியிருப்பு ஊரக...

Mad Sandhu: ప్రముఖ పంజాబీ ఇన్‌ఫ్లుయెన్సర్ దారుణహత్య.. నడిరోడ్డుపై కాల్చి చంపిన దుండగులు..

Mad Sandhu: సోషల్ మీడియా ఇన్‌ఫ్లుయెన్సర్, మేకప్ ఆర్టిస్ట్ మ్యాడ్ సంధు...