20
September, 2026

A News 365Times Venture

20
Sunday
September, 2026

A News 365Times Venture

ಮೈಸೂರಿನಲ್ಲಿ 68ನೇ ವಾರ್ಷಿಕ ಈಜುಕೂಟ: ವಿವಿಧ ಪ್ರದರ್ಶನ ನೀಡಿ ಕಣ್ಮನ ಸೆಳೆದ ವಿದ್ಯಾರ್ಥಿಗಳು

Date:

ಮೈಸೂರು,ಸೆಪ್ಟಂಬರ್‌,19,2026 (www.justkannada.in)  ಮೈಸೂರಿನ ಶ್ರೀರಾಮಕೃಷ್ಣ ವಿದ್ಯಾಶಾಲೆಯಲ್ಲಿ ಆಯೋಜಿಸಿದ್ದ 68 ನೇ ವಾರ್ಷಿಕ  ಈಜುಕೂಟದಲ್ಲಿ ವಿದ್ಯಾರ್ಥಿಗಳು ವಿವಿಧ ರೀತಿಯ ಪ್ರದರ್ಶನಗಳನ್ನ ನೀಡಿ  ಎಲ್ಲರ ಕಣ್ಮನ ಸೆಳೆದರು.

ಶ್ರೀರಾಮಕೃಷ್ಣ ವಿದ್ಯಾಶಾಲೆಯ ಈಜುಕೊಳದಲ್ಲಿ ಆಯೋಜಿಸಿದ್ದ 68 ನೇ ವಾರ್ಷಿಕ  ಈಜುಕೂಟವನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಂಟ್ರಿಹೆಡ್  ಮೆರ್ಕ್ ಇಂಡಿಯಾದ ಮಾಜಿ ಎಂ.ಡಿ ಡಾ.ಎನ್.ಎಸ್.ಶ್ರೀನಾಥ್  ಉದ್ಘಾಟಿಸಿದರು.

ಬಳಿಕ ಮಾತನಾಡಿದ ಡಾ‌.ಎನ್. ಎಸ್ ಶ್ರೀನಾಥ್ ಅವರು, ವಿದ್ಯಾರ್ಥಿಗಳಿಗೆ ನೀಡಿರುವ ಅದ್ಭುತ ತರಬೇತಿ ಮತ್ತು ಅವರ ಕೌಶಲ್ಯವನ್ನು ಕಣ್ಣಾರೆ ಕಾಣುವ ಸೌಭಾಗ್ಯ ನನ್ನದಾಯಿತು. ಅಧ್ಯಾಪಕ ವೃಂದದಲ್ಲಿ ಎದ್ದು ಕಾಣುವ ಸಮರ್ಪಣಾ ಭಾವ ಮತ್ತು ಬದ್ಧತೆ ನನ್ನಲ್ಲಿ ಗೌರವ ಭಾವನೆ ಮೂಡಿಸಿದೆ. ಸಾಧ್ಯವಾದರೆ, ಅವಕಾಶವಿದ್ದರೆ ಈ ಶಾಲೆಯಲ್ಲಿ ವಿದ್ಯಾರ್ಥಿಯಾಗಬೇಕು ಎಂಬ ಆಕಾಂಕ್ಷೆಯನ್ನು ಸ್ವಾಮೀಜಿಯ ಮುಂದಿಟ್ಟಿರುವುದಾಗಿ ತಿಳಿಸಿದರು.

ನಾನು ಇಂದು ಸ್ವಾಮೀಜಿಯವರೊಂದಿಗೆ ಮಾತನಾಡುವಾಗಲೂ ಇದನ್ನೇ ಹೇಳಿದ್ದೆ. ನನ್ನ ವಯಸ್ಸಿನಲ್ಲಿ ಮತ್ತೆ ಈ ಶಾಲೆಯಲ್ಲಿ ವಿದ್ಯಾರ್ಥಿಯಾಗಿ ಸೇರಿಕೊಳ್ಳುವುದು ಸಾಧ್ಯವಿಲ್ಲ. ನಾನು ಇಲ್ಲಿಗೆ ಬರಬಹುದು, ನನ್ನಿಂದಾದ ಕೊಡುಗೆ ನೀಡಬಹುದು; ಕೆಲಸ ಮಾಡಬಹುದು, ಸ್ವಯಂಸೇವಕರಾಗಿ ಸೇವೆ ಸಲ್ಲಿಸಬಹುದು,  ಅನೇಕ ರೀತಿಯಲ್ಲಿ ಸಹಕರಿಸಬಹುದು. ಆದರೆ ನಿಮ್ಮಂತೆಯೇ ಮತ್ತೆ ವಿದ್ಯಾರ್ಥಿಯಾಗಲು ನನಗೆ ಸಾಧ್ಯವಿಲ್ಲ.

ಇಂತಹ ಅದ್ಭುತ ವ್ಯಕ್ತಿತ್ವ ವಿಕಸನದ,ಪೂರ್ಣ ವಿಕಾಸದ ಶೈಕ್ಷಣಿಕ ಪ್ರಕ್ರಿಯೆಯು ನಗರದ ಸಹಸ್ರಾರು ಶಾಲೆಗಳಲ್ಲಿ ಕಂಡು ಬರುವುದಿಲ್ಲ ಎಂದರೆ ಅದು ಅತಿಶಯೋಕ್ತಿಯಲ್ಲ. ಇಲ್ಲಿನ ಕ್ರೀಡೆ, ಈಜು, ಬ್ಯಾಂಡ್ ಉಳಿದ ತರಬೇತಿಗಳ ಪ್ರಯತ್ನ ಉಳಿದ ಕಡೆ ಕಾಣುವುದು ತುಂಬಾ ಅಪರೂಪ. ವಿದ್ಯಾರ್ಥಿಗಳಾದ ನೀವೆಲ್ಲರೂ ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಿ. ದೇಶದ ಉತ್ತಮ ಪ್ರಜೆಯಾಗಲು ಶ್ರೀರಾಮಕೃಷ್ಣ ವಿದ್ಯಾ ಶಾಲೆಯು ಸ್ಫೂರ್ತಿ ಮತ್ತು ಪ್ರೇರಣೆಯನ್ನು ನಿಮಗೆ ನೀಡುತ್ತಿದೆ. ನೀವೆಲ್ಲರೂ ಅದ್ಬುತವಾದ ಅಸಾಧಾರಣ ಸಾಧನೆಗಳ ದಾಖಲೆಯನ್ನು ಮಾಡಿರುವುದನ್ನು ತಿಳಿದು ಹರ್ಷಚಿತ್ತನಾಗಿದ್ದೇನೆ‌ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಟ್ರಸ್ಟಿ ,ರಾಮಕೃಷ್ಣ ಮಠ ಮತ್ತು ಮಿಷನ್ , ಅಧ್ಯಕ್ಷರು ರಾಮಕೃಷ್ಣ ಆಶ್ರಮ ಮೈಸೂರು‌ ಅವರು ವಹಿಸಿದ್ದರು.

ಶ್ರೀರಾಮಕೃಷ್ಣ ಆಶ್ರಮದ ನಿಯೋಜಿತ ಅಧ್ಯಕ್ಷ  ಸ್ವಾಮಿ ಯುಕ್ತೇಶಾನಂದಜೀ ಮಹಾರಾಜ್ , ಶ್ರೀರಾಮಕೃಷ್ಣ ವಿದ್ಯಾಶಾಲೆಯ *ಮುಖ್ಯಸ್ಥ  ( ಕರೆಸ್ಪಾಂಡೆಂಟ್)  ಸ್ವಾಮಿ ಮಹಿಪಾಲಾನಂದಜೀ ಮಹಾರಾಜ್ , ರಾಮಕೃಷ್ಣ ಆಧ್ಯಾತ್ಮಿಕ ,ನೈತಿಕ ಶಿಕ್ಷಣ ಸಂಸ್ಥೆಯ ( ರಿಂಸೆ)  ಮುಖ್ಯಸ್ಥ ಸ್ವಾಮಿ ಮಹಾಮೇದಾನಂದಜೀ ಮಹಾರಾಜ್  ಹಾಗೂ ಶ್ರೀರಾಮಕೃಷ್ಣ ವಿದ್ಯಾಶಾಲೆಯ ಪ್ರಾಂಶುಪಾಲರಾದ ಟಿ.ಕೆ.ಚಂದ್ರಶೇಖರ್ ಹಾಗೂ ವಿಶೇಷ ಆಹ್ವಾನಿತರು , ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Key words: 68th Annual Swimming sports, Mysuru, Sri Ramakrishna Vidyashala, Students,

Source link

LEAVE A REPLY

Please enter your comment!
Please enter your name here

Share post:

Popular

More like this
Related

CJP: ‘‘ రాజులు కాదు’’.. ABVP విజయంపై కాక్రోచ్ పార్టీ స్పందన.

CJP: ఢిల్లీ యూనివర్సిటీ స్టూడెంట్స్ యూనియన్ (DUSU) ఎన్నికల ఫలితాలపై కాక్రోచ్...

 “Save Hindu Temples” ಉಪಕ್ರಮಕ್ಕೆ ಸಂಸದ ಯದುವೀರ್ ಒಡೆಯರ್ ಚಾಲನೆ

ಮೈಸೂರು, ಸೆಪ್ಟೆಂಬರ್, 19, 2026 (www.justkannada.in): ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ...

‘എസ്.ഐ.ആർ പരിശോധന പൂർത്തിയായി, വോട്ടും ചെയ്തു’: ഭർത്താവിനെ ബംഗ്ലാദേശിയെന്ന് ആരോപിച്ച് തടവിലാക്കിയതിനെതിരെ ഹൈക്കോടതിയിൽ ഹരജി നൽകി യുവതി

മുർഷിദാബാദ്: ഭർത്താവിനെ ബംഗ്ലാദേശിയെന്ന് ആരോപിച്ച് പൊലീസ് അനധികൃതമായി തടങ്കലിൽ വെച്ചതിനെതിരെ യുവതി...

தவெக: “ரெட்டி கேங் துணையோடு ஆட்சி..!" – முதல்வர் விஜய்யை விமர்சிக்கும் அப்பாவு

தமிழ்நாட்டின் முதல்வர் ஜோசப் விஜய்க்கு தமிழ்நாட்டின் மீது எந்த அக்கறையும் இல்லை...