ಮಂಗಳೂರು,ಸೆಪ್ಟಂಬರ್,18,2026 (www.justkannada.in): ಮಲೆನಾಡು ಕರಾವಳಿ ಪ್ರದೇಶಕ್ಕೆ ಹೊಸ ಟೂರಿಸಂ ಪಾಲಿಸಿ ಜಾರಿ ಮತ್ತು ರಾಜ್ಯದ 2ನೇ ಹೆಚ್ಚುವರಿ ಭಾಷೆಯಾಗಿ ತುಳುಗೆ ಮಾನ್ಯತೆ ನೀಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಿಎಂ ಡಿಕೆ ಶಿವಕುಮಾರ್ ಘೋಷಣೆ ಮಾಡಿದರು.
ಇಂದು ಮಂಗಳೂರಿನ ಪ್ರಜಾಸೌಧದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್ ಸಭೆಯಲ್ಲಾದ ಚರ್ಚಿತ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ತುಳು ಭಾಷೆ ವಿಚಾರದಲ್ಲಿ ಎಲ್ಲರ ಒತ್ತಾಯ ಇತ್ತು. ಉಡುಪಿ ದಕ್ಷಿಣಕನ್ನಡಕ್ಕೆ ಅನ್ವಯವಾಗುವಂತೆ ಒತ್ತಾಯ ಇತ್ತು ಹಿಂದಿನ ಸರ್ಕಾರ ಯಾಕೆ ಮಾಡಲಿಲ್ಲ ಎಂದು ಚರ್ಚೆ ಮಾಡಲ್ಲ. ರಾಜ್ಯದ 2ನೇ ಆಧಿಕೃತ ಭಾಷೆಯಾಗಿ ತುಳುಗೆ ಮಾನ್ಯತೆ ನೀಡುವ ಬಗ್ಗೆ ತೀರ್ಮಾನಿಸಲಾಗಿದೆ ಎಂದರು.
ಕರಾವಳಿಗೆ ಹೊಸ ಪ್ರವಾಸೋದ್ಯಮ ನಿಯಮ ಜಾರಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಮಲೆನಾಡು ಕರಾವಳಿ ಪ್ರದೇಶದಲ್ಲಿ ಹೊಸ ಟೂರಿಸಂ ನಿಯಮ ಜಾರಿಗೆ ಬರಲಿದೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದರು.





