17
September, 2026

A News 365Times Venture

17
Thursday
September, 2026

A News 365Times Venture

ಅಪಘಾತಕ್ಕೀಡಾದ ನರಿಯನ್ನು ರಕ್ಷಿಸಿ ಮಾನವೀಯತೆ ಮೆರೆದ ಚೆಸ್ಕಾಂ ಅಧಿಕಾರಿ..

Date:

ಮೈಸೂರು,ಸೆಪ್ಟಂಬರ್,17,2026 (www.justkannada.in):  ರಸ್ತೆ ಅಪಘಾತದಲ್ಲಿ ಗಾಯಗೊಂಡು ಸಾವು-ನೋವಿನ ನಡುವೆ ನರಳುತ್ತಿದ್ದ ಅಳಿವಿನಂಚಿನಲ್ಲಿರುವ ವನ್ಯಜೀವಿ ನರಿಯೊಂದನ್ನು ರಕ್ಷಿಸಲು ಚೆಸ್ಕಾಂನ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (AEE) ಕುಮಾರ್ ಸಿ. ಅವರು ಮಾನವೀಯತೆ ಮೆರೆದಿದ್ದಾರೆ.

ಮಡಿಕೇರಿಯಲ್ಲಿ ತಮ್ಮ ಕರ್ತವ್ಯ ಮುಗಿಸಿಕೊಂಡು ಹುಣಸೂರಿನತ್ತ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ, ಹುಣಸೂರು–ಪಿರಿಯಾಪಟ್ಟಣ ಮಾರ್ಗದ ಅರಸು ಕಲ್ಲಹಳ್ಳಿ ರಸ್ತೆಯಲ್ಲಿ ನರಿ ವಾಹನಕ್ಕೆ ಸಿಲುಕಿ ಗಾಯಗೊಂಡಿರುವುದನ್ನು ಕುಮಾರ್ ಅವರು ಗಮನಿಸಿದ್ದಾರೆ.

ರಸ್ತೆಯ ಮಧ್ಯಭಾಗದಲ್ಲಿ ನೋವಿನಿಂದ ನರಳುತ್ತಿದ್ದ ನರಿಯನ್ನು ಕಂಡ ಅವರು, ಕ್ಷಣವೂ ತಡಮಾಡದೆ ವಾಹನ ನಿಲ್ಲಿಸಿ ಯಾವುದೇ ಭಯವಿಲ್ಲದೆ ತಮ್ಮ ಕೈಯಲ್ಲೇ ನರಿಯನ್ನು ಎತ್ತಿಕೊಂಡು ರಸ್ತೆ ಬದಿಗೆ ಸುರಕ್ಷಿತವಾಗಿ ಇರಿಸಿದ್ದಾರೆ.

ಬಳಿಕ ಹುಣಸೂರಿನ ಅರಣ್ಯ ಇಲಾಖೆಯ ಫಾರೆಸ್ಟ್ ಗಾರ್ಡ್ ಉದಯ್ ಕುಮಾರ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅರಣ್ಯ ಸಿಬ್ಬಂದಿ ಬರುವವರೆಗೂ ಸುಮಾರು ಒಂದು ಗಂಟೆ ಸ್ಥಳದಲ್ಲೇ ಕಾದು, ಗಾಯಗೊಂಡ ವನ್ಯಜೀವಿಯನ್ನು ಅವರ ವಶಕ್ಕೆ ಒಪ್ಪಿಸಿದ ಬಳಿಕ ಕುಮಾರ್ ಅವರು ಅಲ್ಲಿಂದ ತೆರಳಿದ್ದಾರೆ.

ಇಂದು ಮಾನವ–ವನ್ಯಜೀವಿ ಸಂಘರ್ಷ ಹೆಚ್ಚುತ್ತಿರುವ ಸಂದರ್ಭದಲ್ಲಿ, ಗಾಯಗೊಂಡ ವನ್ಯಜೀವಿಯೊಂದರ ಜೀವ ಉಳಿಸಲು ಅಧಿಕಾರಿಯೊಬ್ಬರು ತೋರಿದ ಈ ಕಾಳಜಿ ಗಮನ ಸೆಳೆದಿದೆ.

ಕರ್ತವ್ಯ ನಿರ್ವಹಿಸುವುದಷ್ಟೇ ಅಲ್ಲ, ಮೂಕ ಜೀವಿಯ ನೋವಿಗೂ ಸ್ಪಂದಿಸುವ ಹೃದಯವಂತಿಕೆ ಸಮಾಜಕ್ಕೆ ಅಗತ್ಯ. ಕುಮಾರ್ ಸಿ. ಅವರ ಈ ಮಾನವೀಯ ನಡೆ ನಿಜಕ್ಕೂ ಶ್ಲಾಘನೀಯವಾಗಿದ್ದು, ವನ್ಯಜೀವಿ ಸಂರಕ್ಷಣೆಯ ಮಹತ್ವವನ್ನು ಮತ್ತೊಮ್ಮೆ ನೆನಪಿಸಿದೆ.

ಮೂಕ ಜೀವಿಯ ನೋವಿಗೆ ಮಿಡಿದ ಅಧಿಕಾರಿ… ಮಾನವೀಯತೆ ಇನ್ನೂ ಜೀವಂತವಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿ.

Key words: CHESCOM officer, humanity, rescuing, injured fox.

Source link

LEAVE A REPLY

Please enter your comment!
Please enter your name here

Share post:

Popular

More like this
Related

സഖ്യകക്ഷികൾ ഒഴിഞ്ഞുമാറുന്നു; ഹൂതികൾക്ക് മുന്നിൽ പ്രതിസന്ധിയിലായി സൗദി അറേബ്യ

റിയാദ്: യെമനിലെ ഹൂതി വിമതരുടെ ആക്രമണം വീണ്ടും ശക്തമായതോടെ സൗദി അറേബ്യ...

லண்டன் பயணம்: “முதல்வர் விஜய் செய்தியாளர்களைச் சந்தித்து…" – டி.ஆர்.பி. ராஜா அடுக்கும் கேள்விகள்

முதல்வர் விஜய் முதலீடுகளை ஈர்க்க லண்டன் பயணம் மேற்கொண்டிருந்த நிலையில், லண்டன்...

OTR: కేంద్ర మంత్రి బండి సంజయ్ కు కీలక బాధ్యతలు..?

OTR: తెలంగాణ కమలంలో కొత్త ఈక్వేషన్స్‌ తెరపైకి రాబోతున్నాయా? వచ్చే ఎన్నికల్లో...