ಬಳ್ಳಾರಿ,ಸೆಪ್ಟಂಬರ್,10,2026 (www.justkannada.in): ರಾಜ್ಯಸರ್ಕಾರದ ವೈಪಲ್ಯ ಮತ್ತು ವಾಲ್ಮೀಕಿ ನಿಗಮದ ಅಕ್ರಮ ಖಂಡಿಸಿ ಬಿಜೆಪಿ ನಡೆಸಿದ ಬಳ್ಳಾರಿ ಚಲೋ ಪಾದಯಾತ್ರೆ ಯಶಸ್ವಿಯಾಗಿದೆ ಎಂದು ಶಾಸಕ ಜನಾರ್ದನ ರೆಡ್ಡಿ ತಿಳಿಸಿದರು.
ಇಂದು ಬಿಜೆಪಿ ಬಳ್ಳಾರಿ ಚಲೋ ಪಾದಯಾತ್ರೆ ಕೊನೆಗೊಳ್ಳುತ್ತಿದೆ. ಈ ಸಂಬಂಧ ಮಾತನಾಡಿದ ಶಾಸಕ ಜನಾರ್ಧನ ರೆಡ್ಡಿ, ಬಳ್ಳಾರಿ ಚಲೋ ಪಾದಯಾತ್ರೆ ಯಶಸ್ವಿಯಾಗಿದೆ. ಬಿಜೆಪಿಗೆ ಮುಸ್ಲೀಂ ಓಲೈಕೆ ಅವಶ್ಯಕತೆ ಇಲ್ಲ. ಅವರು ನಮ್ಮ ಪರ ಇದ್ದಾರೆ ಎಂದರು.
ಕೆಲವರು ಮುಸ್ಲೀಮರ ದಾರಿ ತಪ್ಪಿಸುತ್ತಿದ್ದಾರೆ. ಮುಸ್ಲೀಮರಿಗೆ ಬಿಜೆಪಿ ತೊಂದರೆ ಕೊಟ್ಟಿಲ್ಲ. ತಪ್ಪು ತಿಳುವಳಿಕೆಯಿಂದ ಬಳ್ಳಾರಿಯಲ್ಲಿ ಶ್ರೀರಾಮುಲು ಸೋತರು ಎಂದು ಜನಾರ್ಧನರೆಡ್ಡಿ ತಿಳಿಸಿದರು.
Key words: BJP, Padayatra, successful, MLA, Janardhana Reddy
The post ಪಾದಯಾತ್ರೆ ಯಶಸ್ವಿ: ಬಿಜೆಪಿಗೆ ಮುಸ್ಲೀಂ ಓಲೈಕೆ ಅವಶ್ಯಕತೆ ಇಲ್ಲ- ಶಾಸಕ ಜನಾರ್ದನ ರೆಡ್ಡಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





