9
September, 2026

A News 365Times Venture

9
Wednesday
September, 2026

A News 365Times Venture

BREAKING NEWS: ಮೈಸೂರಿನ ಕಾರ್ ವಾಷ್ ಸೆಂಟರ್‌ನಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ!

Date:

 

ಮೈಸೂರು, ಸೆ.೦೯,೨೦೨೬: ಮದ್ಯಪಾನ ಸೇವಿಸಿದ್ದರೆನ್ನಲಾದ ಆರು ಮಂದಿ ಯುವಕರಿಂದ ಗುಂಪಾಗಿ ಹಲ್ಲೆ. ಮೈಸೂರಿನ ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ಸಾನ್ವಿ ಕಾರ್ ವಾಷ್ ಸೆಂಟರ್‌ನಲ್ಲಿ ಸೆಪ್ಟೆಂಬರ್ 7ರ ತಡರಾತ್ರಿ ಸುಮಾರು 1.30ರ ವೇಳೆಗೆ ಈ ಘಟನೆ ನಡೆದಿದೆ.

ಯುವಕನ ಮೇಲೆ ಏಕಾಏಕಿ ಮುಗಿಬಿದ್ದ ಆರು ಮಂದಿ. ಬಟ್ಟೆ ಹರಿದು, ನೆಲಕ್ಕೆ ಕೆಡವಿಕೊಂಡು ಮನಬಂದಂತೆ ಹಲ್ಲೆ ನಡೆಸಿದ್ದಾರೆ.

ಇಷ್ಟೇ ಅಲ್ಲ…

ಘಟನೆಯ ಮಾಹಿತಿ ತಿಳಿದು ಕಾರ್ ವಾಷ್ ಸೆಂಟರ್ ಮಾಲೀಕರಾದ ಸಂಗೀತ ಅವರು ಸ್ಥಳಕ್ಕೆ ಬಂದ ಮೇಲೂ ಹಲ್ಲೆ ನಿಲ್ಲಿಸದೆ ಮುಂದುವರಿಸಲಾಗಿದೆ. ಅಷ್ಟಕ್ಕೂ ಈ ಇಡೀ ಕೃತ್ಯ ಯಾರಿಗೂ ಗೊತ್ತಾಗದಂತೆ ನಡೆದಿಲ್ಲ! ಹಲ್ಲೆಯ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ!

ವಿಷಯ ತಿಳಿದು ಸ್ಥಳಕ್ಕೆ ಬಂದ ಕುವೆಂಪುನಗರ ಠಾಣೆ ಪೊಲೀಸರು ಆರು ಮಂದಿ ಯುವಕರನ್ನು ಠಾಣೆಗೆ ಕರೆದೊಯ್ದಿದ್ದಾರೆ. ಬಳಿಕ ವೈದ್ಯಕೀಯ ತಪಾಸಣೆಗೂ ಒಳಪಡಿಸಿದ್ದಾರೆ ಎನ್ನಲಾಗಿದೆ.

ಆದರೆ…

ಇಲ್ಲೇ ಮತ್ತೊಂದು ಗಂಭೀರ ಆರೋಪ!

ಘಟನೆ ನಡೆದು ಬರೋಬ್ಬರಿ 48 ಗಂಟೆ ಕಳೆದರೂ FIR ದಾಖಲಿಸಲು ಪೊಲೀಸರು ವಿಳಂಬ ಮಾಡಿದ್ದಾರೆ ಎಂದು ದೂರುದಾರರಾದ ಸಂಗೀತ ಆರೋಪಿಸಿದ್ದಾರೆ.

ಕೊನೆಗೆ ಠಾಣೆ ಮೆಟ್ಟಿಲು ಬಿಟ್ಟು… ನೇರವಾಗಿ ನಗರ ಪೊಲೀಸ್ ಆಯುಕ್ತರ ಮೊರೆ ಹೋದ ಸಂಗೀತ! ಸಿಸಿಟಿವಿ ದೃಶ್ಯಗಳ ಸಮೇತ ಪ್ರಕರಣವನ್ನು ಪೊಲೀಸ್ ಆಯುಕ್ತರ ಗಮನಕ್ಕೆ ತಂದಿದ್ದಾರೆ. ಇದಾದ ಬಳಿಕ ಡಿಸಿಪಿ ಡಾ. ಹರ್ಷ ಪ್ರಿಯಂವದ ಅವರು ಕೂಡಲೇ ಕುವೆಂಪುನಗರ ಪೊಲೀಸರಿಗೆ ಕರೆ ಮಾಡಿ FIR ದಾಖಲಿಸುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಹೀಗಾಗಿ ಈಗ ಪ್ರಶ್ನೆ ಒಂದೇ…

ಸಿಸಿಟಿವಿಯಲ್ಲಿ ಹಲ್ಲೆಯ ದೃಶ್ಯಗಳು ಸ್ಪಷ್ಟವಾಗಿ ಸೆರೆಯಾಗಿದ್ದರೂ FIR ದಾಖಲಿಸಲು 48 ಗಂಟೆ ವಿಳಂಬವಾಗಿದ್ದೇಕೆ? ಆರು ಮಂದಿ ಯುವಕರು ಯಾರು? ಹಲ್ಲೆಗೆ ನಿಖರ ಕಾರಣವೇನು? ಯುವಕನ ಮೇಲೆ ಎಷ್ಟು ತೀವ್ರವಾಗಿ ಹಲ್ಲೆ ನಡೆದಿದೆ? ಮತ್ತು FIR ದಾಖಲಿಸುವಲ್ಲಿ ವಿಳಂಬಕ್ಕೆ ಕಾರಣವೇನು? ಈ ಎಲ್ಲಾ ಪ್ರಶ್ನೆಗಳಿಗೆ ಇದೀಗ ಕುವೆಂಪುನಗರ ಪೊಲೀಸರ ತನಿಖೆಯಿಂದ ಉತ್ತರ ಸಿಗಬೇಕಿದೆ.

ಮೈಸೂರಿನ ಸಾನ್ವಿ ಕಾರ್ ವಾಷ್ ಸೆಂಟರ್‌ನಲ್ಲಿ ನಡೆದ ಈ ಹಲ್ಲೆ ಪ್ರಕರಣ ಇದೀಗ ಪೊಲೀಸ್ ಇಲಾಖೆಯ ಗಮನ ಸೆಳೆದಿದ್ದು, ಸಿಸಿಟಿವಿ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ.

Key words: Assault, at Mysuru, Car Wash Centre, Kuvempunagar, police

ENGLISH SUMMARY:

Assault at Mysuru Car Wash Centre

Mysuru, Sept. 9: A young man was allegedly brutally assaulted by six intoxicated youths at Saanvi Car Wash Centre on Vishwamanava Double Road, Kuvempunagar, late on September 7 around 1:30 a.m.

The assault, including the victim being knocked to the ground and his clothes torn, was captured on CCTV. Owner Sangeetha arrived after learning about the incident, but the accused allegedly continued the attack.

Police took the six youths to Kuvempunagar Police Station and later subjected them to medical examination.

Despite the CCTV evidence, Sangeetha alleged a 48-hour delay in registering an FIR and approached the Police Commissioner. Following this, DCP Harsha Priyamvada reportedly directed Kuvempunagar police to register the FIR immediately.

The post BREAKING NEWS: ಮೈಸೂರಿನ ಕಾರ್ ವಾಷ್ ಸೆಂಟರ್‌ನಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ! appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

വിജയിയുടെ ടി.വി.കെ സഖ്യം ഇനി ‘സെക്കുലര്‍ സോഷ്യല്‍ ജസ്റ്റിസ് വിക്ടറി അലയന്‍സ്; പ്രഖ്യാപനം ചെന്നൈയില്‍

ചെന്നൈ: തമിഴ്‌നാട് മുഖ്യമന്ത്രിയും തമിഴക വെട്രി കഴകം (ടി.വി.കെ) അധ്യക്ഷനുമായ സി....

`110ன் கீழ் விஜய்-ன் 17 அறிவிப்புகள்; 28 நாளில் ஒரு நாள் நடந்த வெளியேற்றம்'- கூட்டத்தொடர் ஹைலைட்ஸ்

தமிழ்நாடு சட்டமன்றக் கூட்டத்தொடர் நேற்றோடு (செப்டம்பர் 8) முடிந்திருக்கிறது. இந்தக் கூட்டத்தொடரில்...

KPSC ಹಗರಣ: ಜ್ಞಾನೇಂದ್ರ ಮತ್ತು ಕನ್ನಾಳೆಗೆ ನ್ಯಾಯಾಂಗ ಬಂಧನ

ಬೆಂಗಳೂರು,ಸೆಪ್ಟಂಬರ್,9,2026 (www.justkannada.in): ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ ಐಎಎಸ್...