16
October, 2026

A News 365Times Venture

16
Friday
October, 2026

A News 365Times Venture

CWRC ಆದೇಶ ಅವೈಜ್ಞಾನಿಕ: ರಾಜ್ಯಕ್ಕೆ ಮರಣಶಾಸನ – ಕೇಂದ್ರ ಸಚಿವ HDK

Date:

ಹಾಸನ,ಜುಲೈ,29, 2026 (www.justkannada.in): ಕಾವೇರಿ ನೀರು ನಿಯಂತ್ರಣ ಸಮಿತಿ (cwrc) ತಮಿಳುನಾಡಿಗೆ ಹದಿನೈದು ದಿನಗಳ ಕಾಲ ನಿತ್ಯವೂ 3,500 ಕ್ಯೂಸೆಕ್ ನೀರು ಹರಿಸಬೇಕು ಎಂದು ನೀಡುವ ಆದೇಶವು ರಾಜ್ಯದ ಪಾಲಿಗೆ ಮರಣಶಾಸನವಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಅಭಿಪ್ರಾಯಪಟ್ಟರು.

ಹರದನಹಳ್ಳಿಯ ಮಾವಿನಕೆರೆ ರಂಗನಾಥ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವ ಚನ್ನಮ್ಮ ಅವರ ಸಮಾಧಿ ಬಳಿ ಮಾಧ್ಯಮಗಳ ಜತೆ ಮಾತನಾಡಿದ  ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ,  ರಾಜ್ಯದಲ್ಲಿ ಒಂದೆಡೆ ಬರ ಉಂಟಾಗಿದೆ. ಇನ್ನೊಂದು ಕಡೆ ಮಳೆ ಇಲ್ಲದೆ ಜಲಾಶಗಳು ಭರ್ತಿ ಆಗಿಲ್ಲ. ರೈತರಿಗೂ ನೀರು ಕೊಡಲಾಗದ ಸಂಕಷ್ಟದಲ್ಲಿದೆ ರಾಜ್ಯ. ಕುಡಿಯುವ ಉದ್ದೇಶಕ್ಕೆ ನೀರು ಕೊರತೆ ಆಗಬಾರದು. ಇಂತಹ ಕಠಿಣ ಸಂದರ್ಭದಲ್ಲಿ ಸಮಿತಿ ನೆರೆ ರಾಜ್ಯಕ್ಕೆ ನೀರು ಹರಿಸಿ ಎಂದು ರಾಜ್ಯಕ್ಕೆ ಆದೇಶ ನೀಡುವುದು ಅವೈಜ್ಞಾನಿಕ ಎಂದರು.

ಮುಂದಿನ ದಿನಗಳಲ್ಲಿ ಮಳೆ ಆಗದಿದ್ದರೆ ಪರಿಸ್ಥಿತಿ ಇನ್ನೂ ಬಿಗಡಾಯಿಸುತ್ತಿದೆ. ಈ ಆದೇಶದ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಬೇಕಾಗುತ್ತದೆ. ಈಗಾಗಲೇ ರೈತರು, ಸಂಘ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿ ಹೋರಾಟಕ್ಕೆ ಇಳಿದಿದ್ದಾರೆ. ನೀರು ಇಲ್ಲದ ಸಮಯದಲ್ಲಿ ತಮಿಳುನಾಡಿನವರು ಒತ್ತಡ ಹಾಕುತಿದ್ದಾರೆ. ಆದರೆ ನಮ್ಮ ನಾಡಿನ ಪರಿಸ್ಥಿತಿಯನ್ನು ನಾವು ಕಾವೇರಿ ಪ್ರಾಧಿಕಾರಕ್ಕೆ ಅರ್ಥ ಮಾಡಿಸಬೇಕು. ನಮ್ಮ ಕಾನೂನು ಪಂಡಿತರು, ಅಧಿಕಾರಿಗಳು ಸಮರ್ಪಕವಾಗಿ ವಾದ ಮಂಡಿಸಿಲ್ಲ ಎಂದು ನಾನು ಹೇಳಲಾರೆ. ಆದರೆ ನೀರಿನ ನಿರ್ವಹಣೆಯಲ್ಲಿ ನಾವೆಷ್ಟು ಉತ್ತಮವಾಗಿ ಕೆಲಸ ಮಾಡಿದ್ದೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

ಕಳೆದ ವರ್ಷ ಮೂರು ಬಾರಿ ನಮ್ಮ ಜಲಾಶಯಗಳು ತುಂಬಿದ್ದೆವು. ಆ ಸಂದರ್ಭ ಕೆರೆಗಳನ್ನು ತುಂಬಿಸುವಂತಹ ಕೆಲಸವನ್ನು ನಾವು ಮುನ್ನೆಚ್ಚರಿಕೆಯಿಂದ ಮಾಡಬೇಕಾಗಿತ್ತು. ನೀರಾವರಿ ಇಲಾಖೆಯ ಅಧಿಕಾರಿಗಳು ಮತ್ತು ರಾಜ್ಯ ಸರಕಾರ ಸಕಾಲಿಕ ಕ್ರಮ ವಹಿಸಿದ್ದರೆ ಕೆರೆಗಳಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳಬಹುದಿತ್ತು. ಉತ್ತಮ ಮಳೆಯಾಗಿ ಜಲಾಶಯಗಳು ಭರ್ತಿಯಾದಾಗ ಕೆರೆಗಳಿಗೆ ನೀರು ತುಂಬಿಸದೆ ನೀರನ್ನು ಹೊರಗೆ ಬಿಟ್ಟರು. ತಮಿಳುನಾಡು ರಾಜ್ಯ ಕೂಡ ಮಳೆಯಿಂದ ದೊರೆತ ಹೆಚ್ಚುವರಿ ನೀರನ್ನು ಬಳಕೆ ಮಾಡಿಕೊಳ್ಳದೆ ಸಮುದ್ರಕ್ಕೆ ಬಿಟ್ಟಿತು. ಅದರ ಫಲವನ್ನು ಈಗ ಅನುಭವಿಸುತ್ತಿದ್ದೇವೆ ಎಂದು ಸಚಿವ ಕುಮಾರಸ್ವಾಮಿ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಪದೇಪದೇ ಇಂಥ ಬಿಕ್ಕಟ್ಟು ಎದುರಾಗುತ್ತಿದ್ದರೂ ಎರಡು ರಾಜ್ಯಗಳು ಪಾಠ ಕಲಿಯುತ್ತಿಲ್ಲ. ಹೆಚ್ಚಿನ ಮಳೆಯಾದ ವರ್ಷದಲ್ಲಿ ನಾವು ನೀರನ್ನು ಹಿಡಿದಿಟ್ಟುಕೊಳ್ಳಬೇಕು. ಅಂತಹ ಜವಾಬ್ದಾರಿಯನ್ನು ನಿರ್ವಹಿಸದೆ ನಾವು ಎಡವಿದ್ದೇವೆ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದರು.

ನಮಗೆ ಹತ್ತು ವರ್ಷದ ಸರಾಸರಿಯಲ್ಲಿ ಐದಾರು ವರ್ಷ ಉತ್ತಮ ಮಳೆಯಾಗುತ್ತದೆ. ಉಳಿದ ಮೂರು ನಾಲ್ಕು ವರ್ಷಗಳು ಈ ರೀತಿಯ ಬರ ಪರಿಸ್ಥಿತಿಯನ್ನು ಎದುರಿಸುತ್ತೇವೆ. ಈ ಹಿಂದಿನ ಅನುಭವಗಳು ಮತ್ತು ತಮಿಳುನಾಡಿನ ರೈತರ ಒತ್ತಡವನ್ನು ಈಗಾಗಲೇ ಗಮನಿಸಿದ್ದೇವೆ. ಮಳೆಯಾದ ಅವಧಿಯಲ್ಲಿ ನಾವು ಕೆರೆಗಳನ್ನು ತುಂಬಿಸುವುದನ್ನು ಮಾಡಬೇಕಾಗಿತ್ತು. ಇಂಥ ಕಾರ್ಯಕ್ರಮಗಳನ್ನು ಸರಕಾರ ರೂಪಿಸಬೇಕು ಎಂದು ಕೇಂದ್ರ ಸಚಿವ ಹೆಚ್ ಡಿಕೆ ಸಲಹೆ ನೀಡಿದರು.

ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ. ವಾಸ್ತವವಾಗಿ ನೋಡುವುದಾದರೆ ಹಲವು ವರ್ಷಗಳಿಂದ ನಮ್ಮ ರಾಜ್ಯಕ್ಕೆ ನೀರಿನ ವಿಷಯದಲ್ಲಿ ಅನ್ಯಾಯವಾಗಿದೆ. ಕೇವಲ ಟೀಕೆ ಪ್ರತಿ ಟೀಕೆಗೆ ಆಸ್ಪದ ಕೊಡದೆ ಮುನ್ನೆಚ್ಚರಿಕೆಯಿಂದ ನೀರಿನ ಬಳಕೆಗೆ ಆದ್ಯತೆ ಕೊಡಬೇಕು. ನಮ್ಮ ರೈತರು ನಮ್ಮ ನಾಡಿನ ಜನತೆಗೆ ಅನಾನುಕೂಲ ಆಗದ ರೀತಿಯಲ್ಲಿ ಕ್ರಮ ವಹಿಸಬೇಕು. ಕಾನೂನು ಪರಿಧಿ ಒಳಗಡೆ ನಾವು ಯಾವ ಕ್ರಮ ವಹಿಸಬೇಕು ಎಂದು ಕೇಂದ್ರ ಸಚಿವ ಹೆಚ್ ಡಿಕೆ ಕಿವಿಮಾತು ಹೇಳಿದರು.

Key words: Water, CWRC, order, unscientific, Union Minister, HDK

The post CWRC ಆದೇಶ ಅವೈಜ್ಞಾನಿಕ: ರಾಜ್ಯಕ್ಕೆ ಮರಣಶಾಸನ – ಕೇಂದ್ರ ಸಚಿವ HDK appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

Breaking Bad Actor: ‘బ్రేకింగ్ బ్యాడ్’ నటుడు ఆర్జే మిట్టే మృతి కేసులో బిగ్ ట్విస్ట్!

ప్రముఖ హాలీవుడ్ నటుడు, ‘బ్రేకింగ్ బ్యాడ్’ నటుడు ఆర్జే మిట్టే మృతి...

വധശിക്ഷയുടെ തത്സമയ സംപ്രേഷണം: ആഗോളതലത്തിലുള്ള എതിര്‍പ്പിനെത്തുടര്‍ന്ന് തീരുമാനം റദ്ദാക്കി ട്രംപ്

വാഷിങ്ടണ്‍: ടെക്‌സസിലെ ഫോര്‍ട്ട് ഹുഡ് സൈനികത്താവളത്തില്‍ 13 പേരെ കൊലപ്പെടുത്തിയ മുന്‍...

ரஷ்யப் போரில் உக்ரைனை ஆபத்தில் தள்ளியதா Starlink? உக்ரைனின் குற்றச்சாட்டும் SpaceX நடவடிக்கையும்!

ஸ்டார்லிங்க் செயற்கைக்கோள் சேவைகளின் வேகத்தைக் குறைத்து உக்ரைனின் ராணுவ நடவடிக்கைகளை ஸ்பேஸ்...

Story Board: ధరల మంట: రికార్డు స్థాయిలో ద్రవ్యోల్బణం.. పెరిగిన ధరలతో బతికేదెలా..?

Story Board: మన దేశంలో స్వాతంత్ర్యం వచ్చిన తొలినాళ్లలో ఆహారధాన్యాల కొరత...