19
July, 2026

A News 365Times Venture

19
Sunday
July, 2026

A News 365Times Venture

ಅಕ್ಕ ಕೆಫೆಗೆ ಜಿ.ಪಂ CEO ಅನಿರೀಕ್ಷಿತ ಭೇಟಿ; ಆಹಾರದ ಗುಣಮಟ್ಟ, ಸ್ವಚ್ಛತೆ ಪರಿಶೀಲನೆ.

Date:

ಮಂಡ್ಯ, ಜುಲೈ, 15,2026 (www.justkannada.in):  ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ಆರ್.ನಂದಿನಿ ಅವರು ಪಾಂಡವಪುರ ತಾಲೂಕಿನ ಆವರಣದಲ್ಲಿ ನಿರ್ಮಾಣವಾಗಿರುವ ಅಕ್ಕ ಕೆಫೆಗೆ ಅನಿರೀಕ್ಷಿತ ಭೇಟಿ ನೀಡಿ, ಆಹಾರದ ಗುಣಮಟ್ಟ, ಸ್ವಚ್ಛತೆ ಹಾಗೂ ಸೇವಾ ನಿರ್ವಹಣೆಯನ್ನು ಪರಿಶೀಲಿಸಿದರು.

ಭೇಟಿಯ ವೇಳೆ ಕೆಫೆಯಲ್ಲಿ ತಯಾರಿಸಲಾಗುತ್ತಿರುವ ಆಹಾರ ಪದಾರ್ಥಗಳ ಗುಣಮಟ್ಟ, ಅಡುಗೆಮನೆಯ ಸ್ವಚ್ಛತೆ, ಆಹಾರ ಸಂಗ್ರಹಣೆ ವಿಧಾನ ಹಾಗೂ ಗ್ರಾಹಕರಿಗೆ ಒದಗಿಸಲಾಗುತ್ತಿರುವ ಸೌಲಭ್ಯಗಳ ಕುರಿತು ಸಿಇಒ ಕೆ. ಆರ್.ನಂದಿನಿ ಅವರು ಪರಿಶೀಲನೆ ನಡೆಸಿದರು.

ಅಕ್ಕ ಕೆಫೆಯು ಮಹಿಳಾ ಸ್ವಸಹಾಯ ಸಂಘಗಳ ಮೂಲಕ ನಿರ್ವಹಿಸಲ್ಪಡುತ್ತಿರುವ ಹಿನ್ನೆಲೆಯಲ್ಲಿ, ಗುಣಮಟ್ಟದ ಆಹಾರ ಹಾಗೂ ಸ್ವಚ್ಛತೆಯ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದರು.

ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ಆಹಾರ ತಯಾರಿಕೆ ಮತ್ತು ವಿತರಣೆಯಲ್ಲಿ ಯಾವುದೇ ನಿರ್ಲಕ್ಷ್ಯ ತೋರದಂತೆ ಸಿಬ್ಬಂದಿಗೆ ಸಲಹೆ ನೀಡಿದರು.

ಮಹಿಳಾ ಸಂಘಗಳ ಆರ್ಥಿಕ ಸಬಲೀಕರಣಕ್ಕೆ ಅಕ್ಕ ಕೆಫೆ ಮಹತ್ವದ ವೇದಿಕೆಯಾಗಿದ್ದು, ಉತ್ತಮ ಸೇವೆ ಹಾಗೂ ಗುಣಮಟ್ಟದ ಮೂಲಕ ಸಾರ್ವಜನಿಕರ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬೇಕು ಎಂದು ಸಿಇಒ ಹೇಳಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಅಕ್ಕ ಕೆಫೆಯ ಸಿಬ್ಬಂದಿ ಉಪಸ್ಥಿತರಿದ್ದರು.

Key words: Mandya, ZP CEO, surprise visit,  Akka Cafe

The post ಅಕ್ಕ ಕೆಫೆಗೆ ಜಿ.ಪಂ CEO ಅನಿರೀಕ್ಷಿತ ಭೇಟಿ; ಆಹಾರದ ಗುಣಮಟ್ಟ, ಸ್ವಚ್ಛತೆ ಪರಿಶೀಲನೆ. appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

വിശപ്പിൽ രാഷ്ട്രീയമില്ല, ആശുപത്രിയിൽ സർക്കാർ ഭക്ഷണം ഉറപ്പാക്കും വരെ പൊതിച്ചോർ നൽകും; മുരളീധരന് ഡി.വൈ.എഫ്.ഐയുടെ മറുപടി

തിരുവനന്തപുരം: കേരളത്തിലെ സർക്കാർ ആശുപത്രികളിൽ ഡി.വൈ.എഫ്.ഐ വർഷങ്ങളായി നടത്തിവരുന്ന ഹൃദയപൂർവം പൊതിച്ചോർ...

Android vs iPhone ఫైట్‌కు కొత్త ట్విస్ట్.! మెస్సీ కోసం Samsung, రొనాల్డో కోసం iPhone.. లగ్జరీ ఫోన్లు విడుదల..!

Messi vs Ronaldo Luxury Phones: స్మార్ట్‌ఫోన్ ప్రపంచంలో ఎప్పటినుంచో కొనసాగుతున్న...

ಬೆಳಗಾವಿಗೆ ಇನ್ನೊಂದು ಮಂತ್ರಿ ಸ್ಥಾನ ಕೇಳಿದ್ದೇವೆ; ಎರಡು ಸ್ಥಾನ ಕೊಟ್ರೆ OK- ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು,ಜುಲೈ,18,2026 (www.justkannada.in):  ಸಚಿವ ಸಂಪುಟ ವಿಸ್ತರಣೆ ವೇಳೆ ಬೆಳಗಾವಿಗೆ ಇನ್ನೊಂದು...