ಬೆಳಗಾವಿ,ಜುಲೈ,15,2026 (www.justkannada.in): ಬೆಳಗಾವಿಯಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು ಗ್ರಾಹಕರ ಬಳಿ ಸುಮಾರು 165 ಕೋಟಿ ರೂ. ಸಂಗ್ರಹಿಸಿ ವಂಚಕರು ದುಬೈಗೆ ಹಾರಿರುವ ಘಟನೆ ನಡೆದಿದೆ.
ಬೆಳಗಾವಿ ಟಿಳಕವಾಡಿಯಲ್ಲಿ ಈ ಘಟನೆ ನಡೆದಿದೆ. ಅಪೆಕ್ಸ್ ಬಿಜ್ ಕಾರ್ಪ್ ಹೆಸರಲ್ಲಿ ಸಂಸ್ಥೆ ಸ್ಥಾಪಿಸಿ ಮಾಲೀಕ ಕಾಶೀನಾಥ್ ವಾಗ್ಮೋರೆ ಮತ್ತು ಗಣೇಶ್ ಬಂಡಾರಿ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೆಚ್ಚಿನ ಬಡ್ಡಿ ಆಸೆ ತೋರಿಸಿ ಹಲವು ವರ್ಷಗಳಿಂದ ಸುಮಾರು 3500 ಗ್ರಾಹಕರಿಂದ 165 ಕೋಟಿ ರೂ. ಸಂಗ್ರಹಿಸಿದ್ದಾರೆ.
ಹೆಚ್ಚಿನ ಬಡ್ಡಿ ಆಸೆಗೆ ಹಣ ಹೂಡಿಕೆ ಮಾಡಿದ ಗ್ರಾಹಕರಿಗೆ ವಂಚಕರು ಮಹಾಮೋಸ ಮಾಡಿದ್ದು ಕಚೇರಿಗೆ ಬೀಗ ಜಡಿದು ಹಣವನ್ನ ದೋಚಿ ದುಬೈಗೆ ಹಾರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
Key words: multi-crore, fraud, Fraudsters, money, customers
The post ಮತ್ತೊಂದು ಬಹುಕೋಟಿ ವಂಚನೆ ಬಯಲು: ಗ್ರಾಹಕರಿಂದ ಹಣ ಸಂಗ್ರಹಿಸಿ ವಂಚಕರು ಪರಾರಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





