17
June, 2026

A News 365Times Venture

17
Wednesday
June, 2026

A News 365Times Venture

ಬಾಸ್’ ಸಿನಿಮಾ ಬಿಡುಗಡೆಗೆ ತಡೆ ಕೋರಿ ಹೈಕೋರ್ಟ್ ಮೊರೆ ಹೋದ ನಟ ದರ್ಶನ್, ವಿಜಯಲಕ್ಷ್ಮಿ

Date:

ಬೆಂಗಳೂರು,ಜೂನ್,16,2026 (www.justkannada.in): ವಿ. ಲವ ನಿರ್ದೇಶನದ ‘ಬಾಸ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು ಆದರೆ ಈ ಸಿನಿಮಾವನ್ನ ರೇಣುಕಾ ಕೊಲೆ ಕೇಸ್ ಆಧರಿಸಿ ಸಿನಿಮಾ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದ್ದು ನಟ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಬಾಸ್’ ಸಿನಿಮಾ ಬಿಡುಗಡೆಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ನೈಜ ಘಟನೆಗಳನ್ನು ಆಧರಿಸಿ  ‘ಬಾಸ್’ ಸಿನಿಮಾ ಸಿದ್ಧವಾಗಿದೆ ಎಂಬುದನ್ನು ಟೀಸರ್ ​ನಲ್ಲಿ ಉಲ್ಲೇಖಿಸಲಾಗಿತ್ತು. ಟೀಸರ್ ನೋಡಿದರೆ ನಟ ದರ್ಶನ್ ಕೇಸ್ ರೀತಿಯೇ ಈ ಸಿನಿಮಾದ ಕಥೆ ಇದೆ ಎಂಬ ಅನುಮಾನ ಮೂಡುತ್ತಿದೆ ಎಂಬ ಆರೋಪವಿದ್ದು ಈ ಹಿನ್ನೆಲೆಯಲ್ಲಿ ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರು ‘ಬಾಸ್’ ಸಿನಿಮಾದ ಬಿಡುಗಡೆಗೆ ತಡೆ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

ಈ ಮೊದಲು ಸೆಷನ್ಸ್ ಕೋರ್ಟ್​​ನಲ್ಲಿ ವಿಜಯಲಕ್ಷ್ಮಿ ದರ್ಶನ್ ಅವರು ‘ಬಾಸ್’ ಸಿನಿಮಾಗೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಅಲ್ಲಿ ಅವರ ಅರ್ಜಿ ವಜಾಗೊಂಡ  ಹಿನ್ನೆಲೆಯಲ್ಲಿ  ಇದೀಗ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಜೂನ್ 19ರಂದು ‘ಬಾಸ್’ ಸಿನಿಮಾ ಬಿಡುಗಡೆ ಆಗಬೇಕಿದೆ. ಈಗಾಗಲೇ ಚಿತ್ರತಂಡದವರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದು. ಜೂನ್ 19ರಂದು ಸಿನಿಮಾ ರಿಲೀಸ್ ಎಂದು ಮಾಧ್ಯಮಗಳಲ್ಲಿ ಜಾಹೀರಾತು ಕೂಡ ನೀಡಲಾಗಿದೆ. ಆದರೆ ಚಿತ್ರದ ಬಿಡುಗಡೆಗೆ ಕೆಲವೇ ದಿನ ಬಾಕಿ ಇರುವಾಗ ದರ್ಶನ್ ಮತ್ತು ವಿಜಯಲಕ್ಷ್ಮಿ ಅವರು ಹೈಕೋರ್ಟ್​ ಗೆ ಅರ್ಜಿ ಸಲ್ಲಿಸಿದ್ದಾರೆ.

Key words:  Actors Darshan, Vijayalakshmi, High Court, Boss

The post ಬಾಸ್’ ಸಿನಿಮಾ ಬಿಡುಗಡೆಗೆ ತಡೆ ಕೋರಿ ಹೈಕೋರ್ಟ್ ಮೊರೆ ಹೋದ ನಟ ದರ್ಶನ್, ವಿಜಯಲಕ್ಷ್ಮಿ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Source link

LEAVE A REPLY

Please enter your comment!
Please enter your name here

Share post:

Popular

More like this
Related

വേള്‍ഡ് മെഡിക്കല്‍ അസോസിയേഷനില്‍ നിന്ന് ഇസ്രഈലിനെ പുറത്താക്കണം; ആഗോളതലത്തില്‍ പ്രതിഷേധം

ലണ്ടന്‍: ഗസയില്‍ ഇസ്രഈല്‍ തുടരുന്ന സൈനിക ആക്രമണങ്ങളില്‍ ആഗോള മെഡിക്കല്‍ എത്തിക്‌സ്...

'மொத்தக் கடன் 13.18 லட்சம் கோடி; நலத்திட்டங்களுக்கு மட்டும் 25,000 கோடி.!' -அரசின் வெள்ளை அறிக்கை

தமிழகத்தின் நிதிநிலை குறித்து நிதியமைச்சர் மரிய வில்சன் வெள்ளை அறிக்கை வெளியிட்டிருக்கிறார்....

Honeymoon Mystery: హనీమూన్‌‌ మిస్టరీ.. ముస్సోరీలో విశాఖ మహిళ మృతి..

Honeymoon Mystery: యువజంట హనీమూన్ మిస్టరీగా మారింది. ఉత్తరాఖండ్ ముస్సోరీలో ఉన్న...

ಧರ್ಮಸ್ಥಳ ಬುರುಡೆ ಕೇಸ್ ತನಿಖೆ ನಡೆಸುತ್ತಿದ್ದ SIT ಎಸ್ ಪಿ ಕಾರು ಪಲ್ಟಿ

ಮಂಗಳೂರು,ಜೂನ್,16,2026 (www.justkannada.in): ಧರ್ಮಸ್ಥಳದ ಬುರುಡೆ ಪ್ರಕರಣದ ತನಿಖೆ ನಡೆಸುತ್ತಿದ್ದ ಎಸ್...