ಬೆಂಗಳೂರು,ಮೇ,20,2026 (www.justkannada.in): ʼವೈಮಾಂತರಿಕ್ಷ ಹಾಗೂ ರಕ್ಷಣಾ ವಲಯದ ಬೆಂಗಳೂರು ಮೂಲದ ಆ್ಯಕ್ಸಿಸ್‌ಕೇಡ್ಸ್ ಏರೊಸ್ಪೇಸ್ ಇನ್‌ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್, ರಾಜ್ಯದಲ್ಲಿ ₹6,000 ಕೋಟಿ ಮೊತ್ತದ ಬಂಡವಾಳ ಹೂಡಿಕೆಗೆ ಮುಂದೆ ಬಂದಿದೆʼ ಎಂದು ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ತಿಳಿಸಿದ್ದಾರೆ.
ಖನಿಜ ಭವನದಲ್ಲಿ ಕಂಪನಿಯ ಉನ್ನತಾಧಿಕಾರಿಗಳ ಜೊತೆಗೆ ನಡೆದ ವಿಸ್ತೃತ ಸಮಾಲೋಚನೆಯ ನಂತರ ಸಚಿವ ಎಂ.ಬಿ ಪಾಟೀಲ್ ಈ ಮಾಹಿತಿ ನೀಡಿದ್ದಾರೆ.
ʼ200 ಎಕರೆ ಪ್ರದೇಶದಲ್ಲಿ ವೈಮಾಂತರಿಕ್ಷ, ರಕ್ಷಣೆ, ಸೆಮಿಕಂಡಕ್ಟರ್ ಹಾಗೂ ಕೃತಕ ಬುದ್ಧಿಮತ್ತೆ (ಎಐ) ನಾವೀನ್ಯತೆ ಕ್ಷೇತ್ರಗಳಲ್ಲಿ ಉತ್ಪಾದನೆ, ಪರೀಕ್ಷೆ ಮತ್ತು ನಿರ್ವಹಣೆಯ ಸಮಗ್ರ ಕೇಂದ್ರ ಸ್ಥಾಪಿಸುವುದು ಆ್ಯಕ್ಸಿಸ್ ಕೇಡ್ಸ್ ಏರೊಸ್ಪೇಸ್ ನ ಮುಖ್ಯ ಉದ್ದೇಶವಾಗಿದೆ. ಜಾಗತಿಕ ಪಾಲುದಾರಿಕೆಯಡಿ ದೇಶೀಯವಾಗಿ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರವನ್ನೂ ಸ್ಥಾಪಿಸಲಿದೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.
ʼಕಂಪನಿಯು ಹಂತ ಹಂತವಾಗಿ ಒಟ್ಟು ₹ 6,000 ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ. ಇದರಿಂದ ರಾಜ್ಯದಲ್ಲಿ ಪ್ರತ್ಯಕ್ಷವಾಗಿ 20 ಸಾವಿರ ಹಾಗೂ ಪರೋಕ್ಷವಾಗಿ 54 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ. ಕ್ಷಿಪಣಿ ತಯಾರಿಕೆಯ ಪೂರಕ ಸೌಲಭ್ಯ , ರೇಡಾರ್ – ಸಂವೇದಕ, ಯುದ್ಧ ವಿಮಾನಗಳ ದುರಸ್ತಿ – ನಿರ್ವಹಣೆ ಸೌಲಭ್ಯ (ಎಂಆರ್‌ಒ) ಸೇರಿದಂತೆ ವೈಮಾಂತರಿಕ್ಷ ಹಾಗೂ ರಕ್ಷಣಾ ವಲಯದ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಕಂಪನಿ ಉದ್ದೇಶಿಸಿದೆ.
ʼಮೊದಲ ಹಂತದಲ್ಲಿ ₹ 1,290 ಕೋಟಿ, 2ನೆ ಹಂತದಲ್ಲಿ ₹2,898 ಕೋಟಿ ಮತ್ತು 3ನೇ ಹಂತದಲ್ಲಿ ₹ 1,512 ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ ಎಂದು ಸಚಿವ ಎಂ.ಬಿ ಪಾಟೀಲ್ ವಿವರಿಸಿದರು.
ಈ ಯೋಜನೆ ಕಾರ್ಯಗತಗೊಳಿಸಲು ಕಂಪನಿಯು ದೇವನಹಳ್ಳಿ ಬಳಿ ಭೂಮಿ ಒದಗಿಸಲು ಮನವಿ ಮಾಡಿಕೊಂಡಿದೆ. 1.8 ಕಿ.ಮೀ ಉದ್ದದ ರನ್ ವೇ ನಿರ್ಮಾಣದ ಉದ್ದೇಶ ಕೂಡ ಇದೆ ಎಂದು ಕಂಪನಿ ಹೇಳಿದ್ದು, ಹಾಗಾದರೆ ಹಾಸನ, ವಿಜಯಪುರ ಹಾಗೂ ಶಿವಮೊಗ್ಗ ವಿಮಾನ ನಿಲ್ದಾಣಗಳನ್ನು ಬೇಕಾದರೂ ಪರಿಗಣಿಸಬಹುದು ಎಂದು ಸಚಿವ ಎಂ.ಬಿ ಪಾಟೀಲ್ ಸಲಹೆ ನೀಡಿದಾರೆ. ಹಾಲಿ ಇರುವ ದೇವನಹಳ್ಳಿ ಘಟಕದ ಸನಿಹದಲ್ಲೇ ಈ ಉದ್ದೇಶಿತ ಘಟಕ ಇರಬೇಕು ಎನ್ನುವ ಬೇಡಿಕೆಯನ್ನು ಸಂಸ್ಥೆ ಪ್ರತಿನಿಧಿಗಳು ತಿಳಿಸಿದರು. ನಂತರ ಸಚಿವರು ರನ್ ವೇ ನಿರ್ಮಾಣಕ್ಕೂ ಅನುಕೂಲ ಇರುವ ಕಡೆ ಜಾಗ ಗುರುತಿಸಲು ಅಧಿಕಾರಿಗಳಿಗೆ ಸೂಚಿಸಿದರು.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎನ್. ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತೆ ಖುಷ್ಬೂ ಗೋಯಲ್ , ಮೂಲಸೌಕರ್ಯ ಇಲಾಖೆ ಕಾರ್ಯದರ್ಶಿ ವಿಶಾಲ್, ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ, ಆ್ಯಕ್ಸಿಸ್‌ಕೇಡ್ಸ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಶಾರಧಿ ಚಂದ್ರ ಬಾಬು, ನಿರ್ದೇಶಕ ಸುರೇಶ ಕುಮಾರ್, ಪ್ರಧಾನ ವ್ಯವಸ್ಥಾಪಕ (ಪ್ರಾಜೆಕ್ಟ್ಸ್) ಎನ್. ಕೆ. ಸತೀಶ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ENGLISH SUMMARY..
AxisCades Aerospace Keen to Invest ₹6,000 Crore: Industries Minister M. B. Patil
* Aerospace, defence, MRO, and manufacturing cluster to be developed within three years
* 20,000 direct and 54,000 indirect employment opportunities to be created
Bengaluru: Bengaluru-based aerospace and defence company AxisCades Aerospace Infrastructure Private Limited is set to invest ₹6,000 crore in Karnataka, Industries Minister M. B. Patil said.
The minister shared the information after detailed discussions held with senior officials of the company at Khanija Bhavan on Wednesday.
“The primary objective of AxisCades Aerospace is to establish an integrated hub across 200 acres for manufacturing, testing, and maintenance in aerospace, defence, semiconductor, and Artificial Intelligence (AI) innovation sectors. The company also plans to set up a domestic research and development centre under global partnerships,” the minister said.
“The company will invest a total of ₹6,000 crore in phases. The project is expected to generate 20,000 direct and 54,000 indirect jobs in the state. AxisCades also intends to develop aerospace and defence infrastructure, including missile sub systems, radar and sensor systems, and Maintenance, Repair and Overhaul (MRO) facilities for fighter aircraft.
In the first phase, the company will invest ₹1,290 crore, followed by ₹2,898 crore in the second phase and ₹1,512 crore in the third phase,” he explained.
To implement the project, the company has requested land near Devanahalli. The company has also expressed its intention to build a 1.8-km-long runway. In response, the minister suggested that airports at Hassan, Vijayapura, and Shivamogga could also be considered if required. However, company representatives stated that the proposed facility should preferably be located close to their existing Devanahalli unit. Subsequently, the minister directed officials to identify suitable land where runway construction would also be feasible.
Principal Secretary of the Commerce and Industries Department Dr. N. Selvakumar, Industries Commissioner Khushboo Goyal, Infrastructure Department Secretary Vishal, Technical Advisor to the Minister Aravind Galagali, AxisCades Managing Director Sharadhi Chandra Babu, Director Suresh Kumar, General Manager (Projects) N. K. Satish Kumar, and senior officials attended the meeting.
Key words: Axis Cades Aerospace Keen, Invest, ₹6,000 Crore, Minister, M. B. Patil
The post 6,000 ಕೋಟಿ ರೂ. ಹೂಡಿಕೆಗೆ ಆ್ಯಕ್ಸಿಸ್ ಕೇಡ್ಸ್ ಏರೊಸ್ಪೇಸ್ ಒಲವು- ಸಚಿವ ಎಂ. ಬಿ. ಪಾಟೀಲ್ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.





